Viral Video: ಬೆಂಗಳೂರು ಆಟೋ ಚಾಲಕ - ಯುವತಿ ನಡುವೆ ಮಾರಾಮಾರಿ! ವೈರಲ್ ವಿಡಿಯೋದಲ್ಲಿ ಏನಿದೆ, ನೆಟ್ಟಿಗರು ಹೇಳಿದ್ದೇನು

Viral Video: ಬೆಂಗಳೂರಿನಲ್ಲಿ ವಿದೇಶಿ ಯುವತಿ ಹಾಗೂ ಆಟೋ ಚಾಲಕರ ನಡುವೆ ನಡೆದಿರುವ ಗಲಾಟೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನ HSR ಲೇಔಟ್‌ನಲ್ಲಿ ಆಟೋ ಚಾಲಕ ಮಹಿಳಾ ಪ್ರಯಾಣಿಕರ ನಡುವೆ ಮಾರಾಮಾರಿ ನಡೆದಿದೆ. HSR ಲೇಔಟ್‌ನಲ್ಲಿ ಆಟೋರಿಕ್ಷಾ ಚಾಲಕನೊಬ್ಬ ಮಹಿಳೆ ಮತ್ತು ಆಕೆಯ ಸ್ನೇಹಿತನ ಮೇಲೆ ದೈಹಿಕವಾಗಿ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಹೊರ ಊರಿನಿಂದ ಹಾಗೂ ಉತ್ತರ ಭಾರತದಿಂದ ಬರುವವರು ಆಟೋ ಚಾಲಕರ ನಡುವೆ ವಾಗ್ವಾದ ಹಾಗೂ ಕೈ - ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿರುವುದು ಇತ್ತೀಚಿನ ದಿನಗಳಲ್ಲೊ ಸಾಮಾನ್ಯ ಎನ್ನುವಂತೆ ಆಗಿದೆ.

ಇನ್ನು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಯಾಣಿಕರು ಹಾಗೂ ಆಟೋ ಚಾಲಕನ ನಡುವೆ ಕೈ - ಕೈ ಮಿಲಾಯಿಸುವ ಹಂತಕ್ಕೆ ಹೋಗಿರುವುದು ಇದೆ. ಆಟೋ ಚಾಲಕ ರಸ್ತೆಬದಿಯಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುತ್ತಿರುವುದು ವೈರಲ್ ವಿಡಿಯೋದಲ್ಲಿದೆ. ಆಟೋ ಚಾಲಕ ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಹಿಡಿದು ದೈಹಿಕವಾಗಿ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿದೆ. ಇದರಲ್ಲಿ ಮಹಿಳೆಯು ಸಹ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿರುವುದು ವಿಡಿಯೋದಲ್ಲಿದೆ.

Viral Video Bengaluru Auto Driver Young Woman Clash What Happened Viral Video What Netizens Said

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ Ghar Ke Kalesh ಎನ್ನುವ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಬೆಂಗಳೂರು, HSR ಲೇಔಟ್‌ನಲ್ಲಿ ಆಟೋ ಶುಲ್ಕದ ವಿಚಾರವಾಗಿ ಪ್ರಯಾಣಿಕರು ಹಾಗೂ ಆಟೋ ಚಾಲಕರ ನಡುವೆ ಗಲಾಟೆ ಆಗಿದೆ ಎಂದು ಹೇಳಲಾಗಿದೆ. ಮೊದಲು ಹುಡುಗಿಯರು ಮತ್ತು ಆಟೋ ಚಾಲಕ ರಸ್ತೆಬದಿಯಲ್ಲಿ ಜಗಳವಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ವಾಗ್ವಾದ ಮುಂದುವರಿದಂತೆ ಭಾಗಿಯಾಗಿರುವ ಜನರು ಪರಸ್ಪರ ಹೊಡೆದಾಡಿಕೊಳ್ಳುವುದು ಇದೆ. ಪರಿಸ್ಥಿತಿ ನಿಯಂತ್ರಣ ತಪ್ಪಿದಂತೆ ತೋರಿದಾಗ, ಮತ್ತೊಬ್ಬ ಮಹಿಳೆ ಮಧ್ಯಪ್ರವೇಶಿಸಿ ಜಗಳ ನಿಲ್ಲಿಸುವುದಕ್ಕೆ ಪ್ರಯತ್ನಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, HSR ಲೇಔಟ್ ಪೊಲೀಸರು ಹುಡುಗಿಯರನ್ನು ಸಂಪರ್ಕಿಸಿ ದೂರು ದಾಖಲಿಸಲು ಕೇಳಿಕೊಂಡರು. ಆದಾಗ್ಯೂ, ಹುಡುಗಿಯರು ಪೊಲೀಸರನ್ನು ಸಂಪರ್ಕಿಸಬೇಕೆ ಎಂದು ನಿರ್ಧರಿಸುವ ಮೊದಲು ಒಂದು ಅಥವಾ ಎರಡು ದಿನಗಳ ಸಮಯವನ್ನು ಕೋರಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸರು ಆಟೋ ಚಾಲಕನನ್ನು ಪತ್ತೆಹಚ್ಚಿದರು, ಅವನು ಹುಡುಗಿಯರು ತನ್ನ ಆಟೋದಲ್ಲಿ ಪ್ರಯಾಣಿಸುತ್ತಿದ್ದು ಆಟೋ ಪ್ರಯಾಣ ದರದ ಬಗ್ಗೆ ಅವನೊಂದಿಗೆ ವಾಗ್ವಾದ ನಡೆಸಿದ್ದಾರೆ ಎಂದು ಹೇಳಿದ್ದಾರೆ ಹುಡುಗಿಯರು ಮದ್ಯ ಸೇವಿಸಿದ್ದರು, ಆಟೋ ಚಾಲಕನನ್ನು ನಿಂದಿಸಿದರು ಮತ್ತು ಹಣ ಕೊಡುವುದಕ್ಕೆ ನಿರಾಕರಿಸಿದರು ಎಂದು ಆಟೋ ಚಾಲಕ ಆರೋಪಿಸಿದ್ದಾರೆ.

Viral Video: ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹೇಳಿದ್ದೇನು

ಯುವತಿಯರು ದೂರು ನೀಡಿದರೆ ಅದರ ಅನ್ವಯ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದೂ ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಆಟೋ ಪ್ರಯಾಣಿಕರು ವಾಗ್ವಾದ ಮತ್ತು ಬೆಂಗಳೂರಿನ ಆಟೋ-ರಿಕ್ಷಾ ಶುಲ್ಕ ವಿವಾದಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಲವರು ಬೆಂಗಳೂರಿನ ಆಚೆಗೆ ಕಂಪನಿಗಳು ಹೂಡಿಕೆ ಮಾಡಬೇಕು ಎಂದೂ ಅಭಿಪ್ರಾಯಪಟ್ಟಿದ್ದಾರೆ.

ವ್ಯವಸ್ಥೆಯ ಬೆಂಬಲದಿಂದಾಗಿ ಆಟೋ ಮಾಫಿಯಾ ಯಾವುದಕ್ಕೂ ಹೆದರುವುದಿಲ್ಲ... ಬೆಂಗಳೂರಿನಾದ್ಯಂತ ಆಟೋ ದರಗಳ ನಿಯಂತ್ರಣವಿಲ್ಲ ಎಂದೂ ಕೆಲವು ನೆಟ್ಟಿಗರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+