Bengaluru: ತರಕಾರಿ ಅಂಗಡಿಯಲ್ಲಿ ದೃಷ್ಟಿಬೊಂಬೆಯಾಗಿ ಮಹಿಳೆ ಫೋಟೊ ಬಳಕೆ; ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು?

ಮಾರುಕಟ್ಟೆಗಳಲ್ಲಿ ಅಡ್ಡಾಡುತ್ತಿರುವಾಗ, ಅಂಗಡಿಗಳ ಗೋಡೆಗಳ ಮೇಲೆ ನೇತುಹಾಕಿರುವ ದೃಷ್ಟಿ ತಗಲದ ಹಾಗೆ ಹಾಕುವ ಕೆಲವು ಚಿತ್ರಗಳನ್ನು ನಾವು ಆಗಾಗ್ಗೆ ನೋಡುತ್ತೇವೆ. ಹೊಸ ಕಟ್ಟಡಗಳಿಗೆ, ಅಂಗಡಿಗಳಲ್ಲಿ, ವ್ಯಾಪಾರದ ಸ್ಥಳಗಳಲ್ಲಿ ದೃಷ್ಟಿ ಆಗಬಾರದು ಎಂದು ವಿಶೇಷ ಫೋಟೊಗಳು, ಮುಖವಾಡಗಳನ್ನು ನೇತುಹಾಕಲಾಗುತ್ತದೆ. ಆದರೆ ಇಲ್ಲೊಬ್ಬರು ಮಹಿಳೆ ಫೋಟೊವನ್ನು ಬಳಸಿಕೊಂಡಿದ್ದಾರೆ.

ಎಕ್ಸ್ ಬಳಕೆದಾರರೊಬ್ಬರು ಆಸಕ್ತಿದಾಯಕ ಚಿತ್ರವನ್ನು ನೋಡಿದ್ದು ಅದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವು ವೈರಲ್ ಆಗಿದ್ದು, ಬೆಂಗಳೂರಿನ ತರಕಾರಿ ಅಂಗಡಿಯಲ್ಲಿ ನೇತಾಡುತ್ತಿರುವ ಅಗಲವಾದ ಕಣ್ಣಿನ ಮಹಿಳೆಯ ಫೋಟೊವನ್ನು ನೋಡಬಹುದು.

Viral Photo of Angry Woman at Bengaluru Vegetable Market Amuses Internet

ಮಹಿಳೆಯ ಮುಖಭಾವದಿಂದ ನಿರ್ಣಯಿಸಿದಾಗ, ಅವರು ಆಶ್ಚರ್ಯದ ಕ್ಷಣದಲ್ಲಿ ಸಿಕ್ಕಿಹಾಕಿಕೊಂಡಂತೆ ಅಥವಾ ತುಂಬಾ ಕೋಪಗೊಂಡಂತೆ ಕಾಣುತ್ತದೆ.

ನೆಟ್ಟಿಗರಿಂದ ಪ್ರತಿಕ್ರಿಯೆ

ಬಳಕೆದಾರರು ಎಕ್ಸ್‌ನಲ್ಲಿ ಮೂರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಫೋಟೋಗಳಲ್ಲಿ, ಟೊಮೆಟೊಗಳು, ಪಪ್ಪಾಯಿಗಳು ಮತ್ತು ಕಲ್ಲಂಗಡಿಗಳಂತಹ ಹಣ್ಣುಗಳಿಂದ ತುಂಬಿದ ಗಾಡಿಗಳನ್ನು ನಾವು ಗುರುತಿಸಬಹುದು. ಟೊಮೇಟೊಗಳನ್ನು ತುಂಬಿದ ಗಾಡಿಯ ಹತ್ತಿರ ಒಂದು ಕಂಬವಿದ್ದು, ಅದರ ಮೇಲೆ ದೊಡ್ಡದಾಗಿ ಕಣ್ಣು ಬಿಟ್ಟಿರುವ ಮಹಿಳೆಯ ಫೋಟೋ ನೇತಾಡುತ್ತಿತ್ತು. "ನಾನು ಇಂದು ಹೊರಬಂದಿದ್ದೇನೆ ಎಂದು ನನಗೆ ತುಂಬಾ ಸಂತೋಷವಾಗಿದೆ" ಎಂದು ಬಳಕೆದಾರರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ನಿರೀಕ್ಷೆಯಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಬಗೆ ಬಗೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರರು "ಅದು ಭಯಾನಕ ಮನುಷ್ಯ ಎಂದು ತೋರುತ್ತದೆ." ಎಂದು ಬರೆದಿದ್ದಾರೆ.

ಮತ್ತೊಬ್ಬರು 'ನಿಮ್ಮನ್ನು ಹಾಗೆ ನೋಡಿದರೆ ಪ್ರೀತಿಯಲ್ಲಿ ಬೀಳದೇ ಇರುವುದು ಕಷ್ಟ' ಎಂದು ತಮಾಷೆ ಮಾಡಿದ್ದಾರೆ.

ಒಬ್ಬ ಬಳಕೆದಾರನು, "ಇದನ್ನು ನೋಡಿದ ನಂತರ ಒಬ್ಬರು ಹೇಗೆ ಮಲಗಬೇಕು" ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು "ಇನ್ನೆರಡು ದಿನಗಳಲ್ಲಿ ನನ್ನ ನಿದ್ರೆಯ ಕೊರತೆಗಾಗಿ ನನ್ನ ವೈದ್ಯರು ನಿಮ್ಮನ್ನು ಸಂಪರ್ಕಿಸಲಿದ್ದಾರೆ. ಧನ್ಯವಾದಗಳು" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+