ಬೆಂಗಳೂರು ಬಳಿಯ ಐಫೋನ್ ಉತ್ಪಾದನಾ ಘಟಕದಲ್ಲಿ ನೌಕರರಿಂದಲೇ ದಾಂಧಲೆ: ಸರಿಯಾಗಿ ವೇತನ ನೀಡದ ಆರೋಪ

ಬೆಂಗಳೂರು, ಡಿಸೆಂಬರ್ 12: ಬೆಂಗಳೂರು ಬಳಿಯ ನರಸಾಪುರದಲ್ಲಿರುವ (ಕೋಲಾರ ಜಿಲ್ಲೆಯ) ತೈವಾನ್ ಮೂಲದ ಐಫೋನ್‌ ಘಟಕದಲ್ಲಿ ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಉದ್ಯೋಗಿಗಳು ಐ-ಫೋನ್ ಉತ್ಪಾದನಾ ಘಟಕದಲ್ಲಿ ದಾಂದಲೆ ನಡೆಸಿದ್ದಾರೆ.

ನೂರಾರು ಸಂಖ್ಯೆಯಲ್ಲಿ ಐ-ಫೋನ್ ಉತ್ಪಾದನಾ ಘಟಕಕ್ಕೆ ನುಗ್ಗಿದ ಜನರು ಅಲ್ಲಿನ ಪೀಠೋಪಕರಣಗಳು ಸೇರಿದಂತೆ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಹಾಳು ಮಾಡಿದ್ದಾರೆ. ಭಾರೀ ಪ್ರಮಾಣದಲ್ಲಿ ಗ್ಲಾಸ್‌ಗಳನ್ನೆಲ್ಲಾ ಪುಡಿ ಮಾಡಲಾಗಿದೆ. ಜೊತೆಗೆ ಕಾರುಗಳನ್ನು ಕೂಡ ಜಖಂಗೊಳಿಸಲಾಗಿದೆ.

Violence at iPhone production plant at Narasapura near Bengaluru over salary issue

ತೈವಾನ್ ಮೂಲದ ಐ-ಫೋನ್ ಉತ್ಪಾದನಾ ಘಟಕವನ್ನು ವಿಸ್ಟ್ರಾನ್ ಕಾರ್ಪ್ ಮುನ್ನೆಡೆಸುತ್ತಿತ್ತು. ಕಂಪನಿಯು ಸರಿಯಾದ ಸಮಯಕ್ಕೆ ವೇತನ ನೀಡದೆ ಸತಾಯಿಸುತ್ತಿದೆ ಎಂಬುದು ಅಲ್ಲಿನ ನೌಕರರ ಆರೋಪವಾಗಿದೆ. ಸ್ಥಳೀಯ ಪೊಲೀಸರು ಐ-ಫೋನ್ ಉತ್ಪಾದನಾ ಘಟಕದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+