ಯುವತಿಯನ್ನು ನಂಬಿಸಿ ಅತ್ಯಾಚಾರ ಎಸಗಿದ ಗ್ರಾಂ. ಪಂ ಸದಸ್ಯ

ಬೆಂಗಳೂರು, ಜೂ. 18: ಫೇಸ್‌ಬುಕ್‌ನಲ್ಲಿ ಪರಿಚಿತ ಯುವತಿಯನ್ನು ಮಾಡೆಲ್ ಮಾಡುವುದಾಗಿ ಗ್ರಾಮ ಪಂಚಾಯಿತಿ ಸದಸ್ಯ ನಂಬಿಸಿದ್ದ. ಕೊರೊನಾ ಸೋಂಕಿತರಿಗೆ ಆಹಾರ ಕಿಟ್ ವಿತರಿಸುವ ಈತನ ಸೇವೆ ನೋಡಿ ಆಕೆ ನಂಬಿದ್ದಳು. ಕೆಲಸದ ವಿಚಾರವಾಗಿ ಮಾತನಾಡಬೇಕು ಎಂದು ಹೇಳಿ ಫಾರಂ ಹೌಸ್‌ಗೆ ಯುವತಿಯನ್ನು ಕರೆಸಿಕೊಂಡ ಗ್ರಾಮ ಪಂಚಾಯಿತಿ ಸದಸ್ಯ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲು ಪಾಲಾಗಿದ್ದಾನೆ.

ಹೌದು ಮಾಡಲ್ ಮಾಡುವುದಾಗಿ ಯುವತಿಯನ್ನು ನಂಬಿಸಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವನು ಗ್ರಾಮ ಪಂಚಾಯಿತಿ ಸದಸ್ಯ ಅಹ್ಮದ್ ಪಾಷಾ, ಈತನಿಗೆ ಸಹಕರಿಸಿದ್ದ ಓಲಾ ಕಾರು ಚಾಲಕ ವಾಹಿಡ್‌ನನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಕೃತ್ಯಕ್ಕೆ ಬಳಸಿದ್ದ ಕಾರನ್ನು ಸಹ ಎಸಿಪಿ ಮಹದೇವಪ್ಪ ನೇತೃತ್ವದಲ್ಲಿ ಬನ್ನೇರುಘಟ್ಟ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್‌ ಮಹಾನಂದ ಜಪ್ತಿ ಮಾಡಿದ್ದಾರೆ.

ಹೆಬ್ಬಾಳ ಸಮೀಪದ ಯುವತಿಯೊಬ್ಬಳು ಮಾಡಲ್ ಆಗುವ ಕನಸು ಹೊತ್ತಿದ್ದಳು. ತನಗೊಂದು ಅವಕಾಶ ಸಿಗಬಹುದೆಂದು ತನ್ನ ಪೋಟೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿದ್ದಳು. ಇದನ್ನು ನೋಡಿದ್ದ ಅಹ್ಮದ್‌ ಪಾಷಾ, ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ತಾನು ಗ್ರಾಮ ಪಂಚಾಯಿತಿ ಸದಸ್ಯ ಎಂದು ಪರಿಚಯಿಸಿಕೊಂಡಿದ್ದ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ. ಇದನ್ನು ನಂಬಿದ್ದ ಯುವತಿ ಈತನೊಂದಿಗೆ ಚಾಟ್ ಮಾಡುತ್ತಿದ್ದಳು. ಇಬ್ಬರೂ ಪರಸ್ಪರ ಚಾಟಿಂಗ್ ಮಾಡುತ್ತಿದ್ದರು.

Village Panchayath Member arrested in charges of raping a model

Recommended Video

      History of Former CM Devaraj Urs :ಆಸಲಿಗೆ Devaraj Urs ಬಡವರಿಗೆ ಏನ್ ಮಾಡಿದ್ರು ಗೊತ್ತಾ? | Oneindia Kannada

      ಕಳೆದ ಜೂ. 14 ರಂದು ನಿನ್ನ ಬಳಿ ಮಾತನಾಡಬೇಕಿದೆ. ಯಾವತ್ತಿದ್ದರೂ ನೀನು ನಿನ್ನ ಕಾಲ ಮೇಲೆ ನೀನು ನಿಂತುಕೋಬೇಕು. ಒಮ್ಮೆ ನನ್ನನ್ನು ಭೇಟಿ ಮಾಡು ಎಂದು ಹೇಳಿದ್ದ. ಈತನನ್ನು ಭೇಟಿ ಮಾಡಲು ಯುವತಿ ಕೂಡ ಒಪ್ಪಿದ್ದಳು. ತನ್ನ ಕಾರು ಚಾಲಕ ವಾಹಿದ್ ಮೂಲಕ ಕಾರು ಕಳಿಸಿದ್ದ. ಕಾರಿನಲ್ಲಿ ಕರೆದುಕೊಂಡು ಅಹಮದ್ ಪಾಷಾನ ಶಾನಭೋಗನಹಳ್ಳಿಯಲ್ಲಿರುವ ಫಾರಂ ಹೌಸ್‌ಗೆ ಕರೆದು ತಂದಿದ್ದ. ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿರುವ ಅಹಮದ್ ಪಾಷಾ ಗನ್ ತೋರಿಸಿ ನಾನು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ನಿನ್ನ ಬೆತ್ತಲೆ ಚಿತ್ರ ತೆಗೆದು ಸಾಮಾಜಿಕ ಜಾಲ ತಾಣದಲ್ಲಿ ಹಾಕುವುದಾಗಿ ಹೆದರಿಸಿ ಅತ್ಯಾಚಾರ ಎಸಗಿದ್ದಾನೆ. ಮಾಡಲ್ ಮಾಡುವುದಾಗಿ ನಂಬಿಸಿ ಕರೆದು ಅತ್ಯಾಚಾರ ಎಸಗಿದ ಅಹಮದ್ ಪಾಷಾ ವಿರುದ್ಧ ಸಂತ್ರಸ್ತ ಯುವತಿ ಬನ್ನೆರುಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ದೂರಿನ ಮೇರೆಗೆ ಅಹಮದ್ ಪಾಷಾನನ್ನು ಅತ್ಯಾಚಾರ ಆರೋಪದಡಿ ಬಂಧಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+