ವಿಜಯಪುರ-ಯಶವಂತಪುರ ರೈಲಿನ ವೇಳಾಪಟ್ಟಿ ಬದಲು

ಬೆಂಗಳೂರು, ಜನವರಿ 02 : ಯಶವಂತಪುರ-ವಿಜಯಪುರ ನಡುವಿನ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿ ಬದಲಾವಣೆಯಾಗಿದೆ. 2019ರ ಅಕ್ಟೋಬರ್‌ನಲ್ಲಿ ಯಶವಂತಪುರ-ವಿಜಯಪುರ ನಡುವೆ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಆರಂಭಿಸಲಾಗಿದೆ.

ನೈಋತ್ಯ ರೈಲ್ವೆ ಯಶವಂತಪುರ- ವಿಜಯಪುರ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ. ಯಶವಂತಪುರದಿಂದ ಹೊರಡುವ ರೈಲು ದಾವಣಗೆರೆ, ಕೊಪ್ಪಳ, ಗದಗ ಮಾರ್ಗವಾಗಿ ವಿಜಯಪುರ ತಲುಪಲಿದೆ.

ಯಶವಂತಪುರ-ವಿಜಯಪುರ ನಡುವೆ ಸಂಚಾರ ನಡೆಸುವ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06541) ಸಮಯವನ್ನು ಜನವರಿ 1ರಿಂದಲೇ ಜಾರಿಗೆ ಬರುವಂತೆ ಬದಲಾವಣೆ ಮಾಡಲಾಗಿದೆ.

Vijayapura Yeshwantpur Train Timings Changed

ಬದಲಾದ ವೇಳಾಪಟ್ಟಿ: ಯಶವಂತಪುರದಿಂದ ಸಂಜೆ 5.45ಕ್ಕೆ ಹೊರಡುತ್ತಿದ್ದ ರೈಲು ಪರಿಷ್ಕೃತ ವೇಳಾಪಟ್ಟಿಯಂತೆ 10.30ಕ್ಕೆ ಹೊರಡಲಿದೆ. ಮರುದಿನ ಬೆಳಗ್ಗೆ 3.40ಕ್ಕೆ ದಾವಣಗೆರೆ ತಲುಪಲಿದ್ದು, 12.10ಕ್ಕೆ ವಿಜಯಪುರಕ್ಕೆ ತಲುಪಲಿದೆ.

ವಿಜಯಪುರದಿಂದ ಮಧ್ಯಾಹ್ನ 1 ಗಂಟೆಗೆ ಹೊರಡುತ್ತಿದ್ದ ರೈಲು ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಸಂಜೆ 6.30ಕ್ಕೆ ಹೊರಡಲಿದೆ. ರಾತ್ರಿ 10.18ಕ್ಕೆ ಗದಗ ತಲುಪಲಿದ್ದು, ಬೆಳಗ್ಗೆ 10.20ಕ್ಕೆ ಯಶವಂತಪುರ ತಲುಪಲಿದೆ.

ನಿಲ್ದಾಣಗಳು : ಯಶವಂತಪುರ-ವಿಜಯಪುರ ರೈಲು ಬಸವನಬಾಗೇವಾಡಿ ರೋಡ್, ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಗದಗ, ಕೊಪ್ಪಳ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕಡೂರು, ಅರಸೀಕೆರೆ, ದಾವಣಗೆರೆ, ತುಮಕೂರು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+