ವಿಜಯನಗರ: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಟಿ ಬಂಧನ

ಬೆಂಗಳೂರು, ಜೂ.10: ನಗರದಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ಪತ್ತೆಯಾಗಿದ್ದು, ಬ್ಯೂಟಿಪಾರ್ಲರ್‌ನಲ್ಲಿ ಕೆಲಸ ಕೊಡಿಸುವುದಾಗಿ ಕತ್ತಲ ಕೂಪಕ್ಕೆ ಮುಗ್ದ ಯುವತಿರನ್ನು ಕಿರುತೆರೆ ನಟಿಯೊಬ್ಬಳು ತಳ್ಳುತ್ತಿದ್ದಳು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಓರ್ವ ಯುವತಿಯನ್ನು ರಕ್ಷಿಸಿ, ಪಿಂಪ್ ಬಂಧಿಸಿದ್ದಾರೆ.

ವಿಜಯನಗರದ ಗೋವಿಂದರಾಜ್‌ನಗರದಲ್ಲಿರುವ ಎಂ ಆರ್ ಸಿ ಲೇಔಟ್ ನ ಮನೆಯಲ್ಲಿ ಈ ದಂಧೆ ನಡೆಸುತ್ತಿದ್ದ ಕಿರುತೆರೆ ನಟಿಗೆ ಬಣ್ಣದ ಲೋಕದ ಮಂದಿ ಪರಿಚಯವಿದ್ದಾರೆ. ಇದರ ಲಾಭ ಪಡೆದು ಗಿರಾಕಿಗಳನ್ನು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಳು. ಬ್ಯೂಟಿ ಪಾರ್ಲರ್​ನಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಬೇರೆ ಕಡೆಗಳಿಂದ ಮಹಿಳೆಯರನ್ನು ಕರೆತರುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿತ್ತು.

CCB Police raid brothel house one rescued pimp arrested

ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಹಾಗೂ ಮಾದಕದ್ರವ್ಯ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ದಂಧೆ ನಡೆಸಲು ಬಳಸುತ್ತಿದ್ದ ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿ ವಶದಲ್ಲಿದ್ದ ತುಮಕೂರು ಮೂಲದ ಯುವತಿಯೊಬ್ಬಳನ್ನು ರಕ್ಷಿಸಿದ್ದಾರೆ.

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 370ರಂತೆ ಪ್ರಕರಣ ದಾಖಲಾಗಿದೆ (ಸಂಖ್ಯೆ 302/2015, ವಿಜಯನಗರ ಪೊಲೀಸ್ ಠಾಣೆ). ಸಿಸಿಬಿಯ ಅಧಿಕಾರಿಗಳು ಈ ಪ್ರಕರಣದಲ್ಲಿ ಇನ್ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+