ಚಿತ್ರಗಳು : ಕನ್ನಡಕ, ಟೋಪಿಯೊಂದಿಗೆ ವಾಟಾಳ್ ಯೋಗ!
ಬೆಂಗಳೂರು, ಜೂನ್ 20 : ಅವರು ವಾಟಾಳ್ ನಾಗರಾಜ್. ಸದಾ ಒಂದಿಲ್ಲೊಂದು ವಿಚಾರ ಎತ್ತಿಕೊಂಡು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಾರೆ. ಆದರೆ, ಅವರು ಇಂದು ಟ್ರಾಕ್ ಪ್ಯಾಂಟ್ ತೊಟ್ಟು ಯೋಗ ಪ್ರದರ್ಶನ ಮಾಡಿದರು. ಯೋಗ ಮಾಡುವಾಗಲೂ ಕನ್ನಡಕ, ಟೋಪಿ ತೆಗೆದಿರಲಿಲ್ಲ ಎಂಬುದು ವಿಶೇಷ.
ಹೌದು, ಬುಧವಾರ ವಾಟಾಳ್ ನಾಗರಾಜ್ ಯೋಗದ ವಿವಿಧ ಪಟ್ಟುಗಳನ್ನು ಹಾಕಿ. ನಾನಿನ್ನೂ ಫಿಟ್ ಆಗಿದ್ದೀನಿ ಎಂದು ಘೋಷಿಸಿದರು. ಬೆಂಬಲಿಗೆ ಚಪ್ಪಾಳೆ ನಡುವೆಯೇ ವಿವಿಧ ಆಸನಗಳನ್ನು ಮಾಡಿ ಮೆಚ್ಚುಗೆ ಗಳಿಸಿದರು.

ಜೂನ್ 21 ಅಂತರಾಷ್ಟ್ರೀಯ ಯೋಗ ದಿನ. ಆದ್ದರಿಂದ, ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಯೋಗ ಪ್ರದರ್ಶನ ಮಾಡಿದ ವಾಟಾಳ್, 'ಪ್ರಧಾನಿ ನರೇಂದ್ರ ಮೋದಿ ಅವರು ಅಂತರಾಷ್ಟ್ರೀಯ ಯೋಗ ದಿನ ಆಚರಣೆ ಮಾಡುತ್ತಿರುವುದು ಶ್ಲಾಘನೀಯ' ಎಂದರು.

'ಅನಾರೋಗ್ಯಕ್ಕೆ ಒಳಗಾದ ಎಲ್ಲಾ ಬಡ ಜನರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಸಂಪೂರ್ಣವಾಗಿ ಭರಿಸಬೇಕು. ಕ್ಯಾನ್ಸರ್, ಹೃದಯ ಸಂಬಂಧಿ ತೊಂದರೆ, ಕಿಡ್ನಿ ಮುಂತಾದ ಸಮಸ್ಯೆಗಳಿಗೆ ಉಚಿತವಾಗಿ ಚಿಕಿತ್ಸೆ ದೊರೆಯುವಂತಾಗಬೇಕು' ಎಂದು ಒತ್ತಾಯಿಸಿದರು.













Click it and Unblock the Notifications