• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುನ್ನೋಟ ಪುಸ್ತಕದಂಗಡಿಯಲ್ಲಿ ಇಂಗ್ಲೀಷ್ ತರಗತಿ ಆರಂಭ

|

ಬೆಂಗಳೂರು, ಸೆಪ್ಟೆಂಬರ್ 13: ಕನ್ನಡ ಮಾಧ್ಯಮದಲ್ಲಿ ಮೊದಲ ಹಂತದ ಕಲಿಕೆ ತಮ್ಮ ಮಕ್ಕಳಿಗೆ ಕೊಡುತ್ತಿರುವ ಪಾಲಕರ ಗಮನಕ್ಕೆ, ವಿಶಿಷ್ಟವಾದ ಪುಸ್ತಕದಂಗಡಿ ಮುನ್ನೋಟದಲ್ಲಿ ಇಂಗ್ಲಿಷ್ ತರಗತಿಗಳನ್ನು ಆರಂಭಿಸಲಾಗುತ್ತಿದೆ.

3 ರಿಂದ 8ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಇಂಗ್ಲಿಷ್ ಸರಾಗವಾಗಿ ಕಲಿಸುವ ತರಗತಿಗಳನ್ನು ಮುನ್ನೋಟ ಟ್ರಸ್ಟ್ ಆಗಸ್ಟ್ 16ನೇ ತಾರೀಕಿನಿಂದ ಬೆಂಗಳೂರಿನ ಮುನ್ನೋಟ ಪುಸ್ತಕ ಮಳಿಗೆಯಲ್ಲಿ ಹಮ್ಮಿಕೊಳ್ಳುತ್ತಿದೆ. ನುರಿತ ಭಾಷಾ ಕಲಿಸುಗರು ಇದನ್ನು ನಡೆಸಲಿದ್ದು ವಾರಕ್ಕೊಂದರಂತೆ ಆರು ತಿಂಗಳ ಕಾಲ ಈ ತರಗತಿಗಳು ನಡೆಯಲಿವೆ.

ಕನ್ನಡ ಸಾಹಿತ್ಯ ಜಾಲ: ಪುಸ್ತಕಪ್ರೇಮಿಗಳಿಗೆ ಬುಕ್ ಬ್ರಹ್ಮ

"ಕನ್ನಡ ಮಾಧ್ಯಮದಲ್ಲಿ ಓದುವ ಮಕ್ಕಳ ಪೂರಕ ಕಲಿಕೆಗೆ ಬೇಕಾಗುವ ಎಲ್ಲ ವ್ಯವಸ್ಥೆಗಳನ್ನೂ ಕಟ್ಟುವ ಆಶಯದಡಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿವರ ಪೋಸ್ಟರಿನಲ್ಲಿದೆ. ಇದನ್ನು ಹಂಚಿಕೊಂಡು ಮಕ್ಕಳಿಗೆ ಇದರ ಲಾಭ ದೊರೆಯಲು ನೆರವಾಗಿ" ಎಂದು ಮುನ್ನೋಟದ ಮುಖ್ಯಸ್ಥರಾದ ವಸಂತ್ ಶೆಟ್ಟಿ ಕೋರಿದ್ದಾರೆ.

ಮಕ್ಕಳಿಗೆ ಇಂಗ್ಲೀಷ್ ಭಾಷೆಯ ಪರಿಚಯ ನೀಡುತ್ತಾಮ್ ವ್ಯಾಕರಣ, ಕೇಳುವುದು ಹಾಗೂ ಮಾತನಾಡುವ ಮೊದಲ ಹಂತದ ತರಬೇತಿಯನ್ನು ನೀಡುವ English for beginners ಹಾಗೂ ಇನ್ನಷ್ಟು ಮುಂದುವರೆದ ಕಲಿಕೆಯ English for Intermediate Learner ಹೆಸರಿನ ಎರಡು ಕಲಿಕೆಯ ತರಗತಿಯ ಆಗಸ್ಟ್ 16ರಂದು ಶುರುವಾಗಲಿವೆ.

ಇಂಗ್ಲೀಷ್ ಭಾಷೆಯನ್ನು ವೈಜ್ಞಾನಿಕವಾಗಿ ಕಲಿಸುವ ಬಗೆಯಲ್ಲಿ ಈ ತರಗತಿಗಳು ನಡೆಯಲಿದ್ದು, ಭಾಷಾ ತರಬೇತಿದಾರರಾದ ಅಶ್ವಿನಿ ಆರ್ ಅವರು ಈ ತರಗತಿಗಳನ್ನು ನಡೆಸಿಕೊಡಲಿದ್ದಾರೆ. ಶುಲ್ಕ ತಿಂಗಳಿಗೆ 1,000 ರೂಪಾಯಿಯಂತೆ, 6 ತಿಂಗಳಿಗೆ 6,000 ರುಪಾಯಿಗಳು

ಆಸಕ್ತರು ಸಂಪರ್ಕಿಸಿ:

ಮುನ್ನೋಟ ಪುಸ್ತಕ ಮಳಿಗೆ,

ನಂ 67, ಅವೆನ್ಯೂ ಕಾಂಪ್ಲೆಕ್ಸ್,

ಡಿ. ವಿ. ಜಿ ರಸ್ತೆ,

ನಾಗಸಂದ್ರ ಸರ್ಕಲ್ ಬಳಿ

ಬಸವನಗುಡಿ,

ಬೆಂಗಳೂರು-560 004.

English summary
Columnist Vasanth Shetty's Munnota book shop in Bengaluru will be conducting English Classes for 4th to 8th classes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X