Vande Bharat Sleepers: ಆರು ತಿಂಗಳಲ್ಲಿ ಹಳಿಗಳಿಗೆ ಇಳಿಯಲಿವೆ ವಂದೇ ಭಾರತ್ ಸ್ಲೀಪರ್ ರೈಲುಗಳು, ವಿಶೇಷತೆ ತಿಳಿಯಿರಿ
ಬೆಂಗಳೂರು, ಮಾರ್ಚ್ 10: ದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ರೈಲ್ವೇ ಪ್ರಯಾಣದ ಹೊಸ ಆನಂದ ಒದಗಿಸುತ್ತಿವೆ. ನಲವತ್ತು ಸಾವಿರ ರೈಲುಗಳನ್ನು ವಂದೇ ಭಾರತ್ ರೈಲುಗಳ ದರ್ಜೆಗೆ ಏರಿಸಲು ಸರ್ಕಾರ ನಿರ್ಧರಿಸಿದೆ. ಇದೇ ವೇಳೆ ಮುಂದಿನ ಆರು ತಿಂಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳು ಹಳಿಗಳಿಗೆ ಇಳಿಯಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಬೆಂಗಳೂರಿನ ಬಿಇಎಂಎಲ್ ಲಿಮಿಟೆಡ್ ಕ್ಯಾಂಪಸ್‌ನಲ್ಲಿ ವಂದೇ ಭಾರತ್ ಸ್ಲೀಪರ್ ಕೋಚ್‌ಗಳ ತಯಾರಿಕೆಯನ್ನು ಪರಿಶೀಲಿಸಿದ ನಂತರ ಅಶ್ವಿನಿ ವೈಷ್ಣವ್, EML ನಿಂದ ಸ್ಥಳೀಯವಾಗಿ ನಿರ್ಮಿಸಲಾದ ಮೆಟ್ರೋ ಕೋಚ್‌ನಲ್ಲಿ ಪರೀಕ್ಷಾ ಸವಾರಿ ಮಾಡಿದರು. ಮುಂದಿನ ಆರು ತಿಂಗಳಲ್ಲಿ 10 ವಂದೇ ಭಾರತ್ ಸ್ಲೀಪರ್ ರೈಲುಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಲಿವೆ ಮತ್ತು ಭಾರತೀಯ ರೈಲ್ವೇ 100 ಅಮೃತ್ ಭಾರತ್ ರೈಲುಗಳಿಗೆ ಆರ್ಡರ್ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

ಭಾರತೀಯ ರೈಲ್ವೇಯ ಹೊಸ ಯೋಜನೆಯಾದ ವಂದೇ ಭಾರತ್ ಸ್ಲೀಪರ್ ಟ್ರಾನ್ಸಿಟ್‌ನ ಕಾರ್ಬೊಡಿ ರಚನೆಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಉದ್ಘಾಟಿಸಿದರು. ಪ್ರಸ್ತುತ BEML ನಲ್ಲಿ ನಿರ್ಮಾಣ ಹಂತದಲ್ಲಿರುವ ಸ್ಲೀಪರ್ ಟ್ರಾನ್ಸಿಟ್, ಪ್ರಯಾಣಿಕರ ರಾತ್ರಿಯ ಪ್ರಯಾಣವನ್ನು ಸುಖಕರಗೊಳಿಸುವ ಗುರಿಯನ್ನು ಹೊಂದಿದೆ. ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸೆಟ್ ಮುಂಬರುವ ತಿಂಗಳುಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಬೆಂಗಳೂರಿನಲ್ಲಿ ಬಿಇಎಂಎಲ್ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ಮೂಲಮಾದರಿಯ ಉತ್ಪಾದನೆಯನ್ನು ಪ್ರಾರಂಭಿಸಿದೆ. ವಂದೇ ಭಾರತ್ ಸ್ಲೀಪರ್ ರೈಲುಉತ್ತಮ ವೈಶಿಷ್ಟ್ಯಗಳನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಮಧ್ಯಮ ವರ್ಗದ ಜನರು ವಂದೇ ಭಾರತ್ ರೈಲುಗಳಿಂದ ಖುಷಿಯಾಗಿದ್ದರೆ, ಕಡಿಮೆ ಆದಾಯದ ಗುಂಪುಗಳು ಅಮೃತ್ ಭಾರತ್ ರೈಲುಗಳನ್ನು ಬಯಸುತ್ತಿದ್ದಾರೆ. ಎರಡಕ್ಕೂ ಬೇಡಿಕೆಯಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
10 ವಂದೇ ಭಾರತ್ ಸ್ಲೀಪರ್ ರೈಲು ಸೆಟ್
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು 10 ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳನ್ನು ಉತ್ಪಾದಿಸುವ ಯೋಜನೆಯಿದೆ ಎಂದು ಮಾಹಿತಿ ನ ನೀಡಿದ್ದಾರೆ. ಬಿಇಎಂಎಲ್ ಈ ಸೆಟ್‌ಗಳನ್ನು ತಯಾರಿಸಲು ಸಜ್ಜಾಗಿದೆ. ವಂದೇ ಭಾರತ್ ಸ್ಲೀಪರ್‌ಗಳಿಗಾಗಿ ಹೆಚ್ಚುವರಿ ಯೋಜನೆಗಳು ಪ್ರಗತಿಯಲ್ಲಿವೆ. ವಂದೇ ಭಾರತ್ ಸ್ಲೀಪರ್ ರೈಲುಗಳನ್ನು 160 kmph ವೇಗದಲ್ಲಿ ವಿನ್ಯಾಸಗೊಳಿಸಲಾಗಿದೆ. ಭಾರತೀಯ ರೈಲ್ವೆಯ ಹೆಚ್ಚಿನ ಸಂಚಾರ ದಟ್ಟಣೆ ಇರುವ ಮಾರ್ಗಗಳಲ್ಲಿ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಗುರಿಯನ್ನು ಈ ರೈಲುಗಳು ಹೊಂದಿವೆ.

ವಂದೇ ಭಾರತ್ ಸ್ಲೀಪರ್ ರೈಲುಗಳ ವಿಶೇಷತೆಗಳು
ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ನ ಮೊದಲ ಮೂಲಮಾದರಿಯು 11 ಎಸಿ 3-ಟೈರ್ ಕೋಚ್‌ಗಳು, 4 ಎಸಿ 2-ಟೈರ್ ಕೋಚ್‌ಗಳು ಮತ್ತು 1 ಎಸಿ 1 ನೇ ಕೋಚ್‌ಗಳನ್ನು ಒಳಗೊಂಡಿರುತ್ತದೆ. ಈ ರೈಲುಗಳು ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳಿಗಿಂತ ಉತ್ತಮ ಮೆತ್ತನೆಯ ಮತ್ತು ಹೆಚ್ಚು ಆರಾಮದಾಯಕ ಬರ್ತ್‌ಗಳನ್ನು ಒಳಗೊಂಡಿರುತ್ತವೆ.
ವಂದೇ ಭಾರತ್ ಸ್ಲೀಪರ್ ರೈಲಿನ ಇತರ ಪ್ರಮುಖ ಲಕ್ಷಣಗಳು
* ಆಧುನಿಕ ಪ್ರಯಾಣಿಕರ ಸೌಕರ್ಯಗಳು
* ಮಾಡ್ಯುಲರ್ ಪ್ಯಾಂಟ್ರಿ
* Crash-worthy features
* ಜಿಎಫ್‌ಆರ್‌ಪಿ ಪ್ಯಾನೆಲ್‌ಗಳೊಂದಿಗೆ ಅತ್ಯುತ್ತಮ ಒಳಾಂಗಣಗಳು
* ಸಾರ್ವಜನಿಕ ಪ್ರಕಟಣೆ ಮತ್ತು ದೃಶ್ಯ ಮಾಹಿತಿ ವ್ಯವಸ್ಥೆ
* ಏರೋಡೈನಾಮಿಕ್ ಹೊರಾಂಗಣ ನೋಟ
* ವಿಕಲಚೇತನರಿಗಾಗಿ ವಿಶೇಷ ಬರ್ತ್‌ಗಳು ಮತ್ತು ಶೌಚಾಲಯಗಳು
* ವಾಸನೆ ಮುಕ್ತ ಶೌಚಾಲಯ ವ್ಯವಸ್ಥೆ
* ಸ್ವಯಂಚಾಲಿತ ಪ್ರಯಾಣಿಕರ ಬಾಗಿಲುಗಳು
* ಸೆನ್ಸರ್ ಬೇಸ್ಡ್ ಬಾಗಿಲುಗಳು
* ಇಎನ್ 45545 ರ ಪ್ರಕಾರ ಅಗ್ನಿ ಸುರಕ್ಷತೆ, ಅಪಾಯದ ಮಟ್ಟ: 03
* 1ನೇ ಎಸಿ ಭೋಗಿಯಲ್ಲಿ ಬಿಸಿ ನೀರಿನ ಸ್ನಾನ











Click it and Unblock the Notifications