ಇಡೀ ಸರ್ಕಾರವೇ ಹಗರಣದಲ್ಲಿ ಸಿಲುಕಿದೆ, ಕಾಂಗ್ರೆಸ್‌ನಂತೆ ಬಿಜೆಪಿ ಅಂಜುಬುರಕ ಅಲ್ಲ: ಬಸವರಾಜ ಬೊಮ್ಮಾಯಿ

ಬೆಂಗಳೂರು, ಜುಲೈ 21: ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡೀ ಸರ್ಕಾರ ಸಿಲುಕಿಕೊಂಡಿದ್ದು, ಪೂರ್ಣ ತನಿಖೆಯಾದರೆ ಸಿಎಂ ರಾಜಿನಾಮೆ ನೀಡಬೇಕಾಗುತ್ತದೆ. ಹೀಗಾಗಿಯೇ ತಮ್ಮ ರಕ್ಷಣೆಗೆ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಯಾವುದೇ ತನಿಖೆ ನಡೆಸಿದರೂ ಬಿಜೆಪಿ ಎದುರಿಸಲಿದೆ. ಮುಖ್ಯಮಂತ್ರಿಗಳು ರಾಜಕೀಯ ದ್ವೇಷಕ್ಕಾಗಿ ಅಧಿಕಾರ ದುರುಪಯೋಗ ಮಾಡಿಕೊಳ್ಳಬಾರದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡೀ ಸರ್ಕಾರ ಸಿಕ್ಕಿಕೊಂಡಿದೆ. ಅದರ ಹಣ ಚುನಾವಣಾ ರಾಜಕಾರಣಕ್ಕೆ, ಸಾರಾಯಿ ಖರೀದಿಗೆ ಹೋಗಿರುವುದು ಸಿಕ್ಕಿದೆ. ಈ ಬಗ್ಗೆ ಪೂರ್ಣ ತನಿಖೆಯಾದರೆ ಸಿಎಂ ರಾಜಿನಾಮೆ ಕೊಡಬೇಕಾಗುತ್ತದೆ ಎಂದು ಬಿಜೆಪಿಯ ಅವಧಿಯಲ್ಲಿ 21 ಹಗರಣ ಆಗಿದೆ ಎಂದು ಆರೋಪಿಸಿದ್ದಾರೆ.

Valmiki Corruption- Scam Karnataka Govt Do Not Misuse The CM Power Basavaraj Bommai

ಬಹಳ ಕಷ್ಟ ಪಟ್ಟು ಬಿಜೆಪಿಯ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ ಅಂತ ಈಗ ಕಣ್ಣು ತೆರೆದು ನೋಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದೆ. ಅವರೇ ಮಾಡಿರುವ ಆರೋಪಕ್ಕೆ ದಾಖಲೆ ನೀಡಲಿ. ತನಿಖೆ ನಡೆದರೂ ನಾವು ಎದುರಿಸುತ್ತೇವೆ ಎಂದರು.

ನನ್ನ ವಿರುದ್ಧ ಮಾಡಿರುವ ಆರೋಪದಲ್ಲಿ ನಾ‌ನು ಎಪಿಎಂಸಿ ಸಚಿವನಾಗಿರಲಿಲ್ಲ ಆಗ ಗೃಹ ಸಚಿವನಾಗಿದ್ದೆ. ಎಪಿಎಂಸಿ ಪ್ರಕರಣದಲ್ಲಿ ತನಿಖೆ ನಡೆಸಿ ಬ್ಯಾಂಕಿನವರಿಂದ 48 ಕೋಟಿ ರೂ. ಜೊತೆಗೆ ಬಡ್ಡಿ ಸಮೇತ 52 ಕೋಟಿ ರೂ‌ ವಸೂಲಿ ಮಾಡಲಾಗಿತ್ತು. ಬೋವಿ ನಿಗಮದಲ್ಲಿ ಅವ್ಯವಹಾರ ಆಗಿದ್ದಾಗ ಅದನ್ನು ಸಿಐಡಿ ತನಿಖೆಗೆ ನಾವೇ ವಹಿಸಿದ್ದೇವೆ. ಅದರ ತನಿಖೆ ನಡೆಯುತ್ತಿದೆ.

ಗುತ್ತಿಗೆದಾರರಿಗೆ ನೋಟಿಸ್ ಕೊಟ್ಟಿಲ್ಲ

ಗಂಗಾ ಕಲ್ಯಾಣ ಯೋಜನೆ ದುರುಪಯೋಗದ ಆರೋಪ ಕೇಳಿ ಬಂದಾಗ ನಾನೇ ಸದನದಲ್ಲಿ ಸಿಐಡಿ ತನಿಖೆಗೆ ನೀಡಿದ್ದೇನೆ. ಅದರ ತನಿಖೆ ಕೊನೆ ಹಂತಕ್ಕೆ ಬಂದಿದೆ. ನಮ್ಮ ವಿರುದ್ದ 40% ಆರೊಪವನ್ನು ಮಾಡಿದ್ದರು. ಇದವರೆಗೂ ಯಾವುದೇ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ನೊಟಿಸ್ ಕೊಟ್ಟಿಲ್ಲ. ರಾಜಕೀಯ ಉದ್ಯೇಶದಿಂದ ಆಯೊಗ ಮಾಡಿದರೆ, ತನಿಖೆ ನಡೆಸಿದರೆ ಹೀಗೆ ಆಗುವುದು ಎಂದು ಬೊಮ್ಮಾಯಿಯವರು ತಿರುಗೇಟು ನೀಡಿದರು.

ಎಲ್ಲ ಹಗರಣ ಹೊರ ಬರುತ್ತಿವೆ: ನಾವು ಅಂಜುಬುರಕಲ್ಲ

ವಾಲ್ಮೀಕಿ ನಿಗಮ ಹಗರಣ ಮಾತ್ರವಲ್ಲದೇ, ಎಲ್ಲ ಇಲಾಖೆಗಳಲ್ಲಿ ಹಗರಣ ಹೊರ ಬರುತ್ತಿವೆ‌ ಕೊಮುಲ್ ನಿಂದ‌ ಹಿಡಿದು ಪ್ರವಾಸೋದ್ಯಮ ಇಲಾಖೆ ಹಗರಣ ಎಲ್ಲವೂ ಹೊರ ಬರುತ್ತಿವೆ‌. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ ಅನ್ನುವಂತಾಗಿದೆ. ಸ್ವಾತಂತ್ರ್ಯಾ ನಂತರ ಭ್ರಷ್ಟಾಚಾರ ಹುಟ್ಟು ಹಾಕಿದ್ದೆ ಕಾಂಗ್ರೆಸ್.

ಬಿಜೆಪಿ ಎಂದಿಗೂ ಕಾಂಗ್ರೆಸ್‌ನವರಂತೆ ಇಡಿ ಯಾಕೆ, ಸಿಬಿಐ ಯಾಕೆ ಬಂತು ಎಂದು ಕೇಳುವುದಿಲ್ಲ. ನಾವು ಅವರ ಹಾಗೆ ಅಂಜುಬುರುಕರಲ್ಲ. ಪೊಲಿಸ್ ಇಲಾಖೆಯನ್ನು ತಮ್ಮ ವಿರುದ್ಧ ಬಂದಿರುವ ಆರೋಪದಿಂದ ರಕ್ಷಣೆ ಪಡೆಯಲು ದುರ್ಬಳಕೆ ಮಾಡಿಕೊಂಡರೆ ಆ ಹಗರಣವೂ ಶೀಘ್ರವೇ ಹೊರ ಬರಲಿದೆ ಎಂದು ಅವರು ಎಚ್ಚರಿಸಿದರು.

40 ಕ್ಕಿಂತ ಹೆಚ್ಚು ಪ್ರಕರಣಗಳು

ಇಡಿ ತನಿಖೆ ಬಗ್ಗೆ ಇವರಿಗೆ ಯಾಕೆ ಭಯ. ಈಗಾಗಲೇ ಇವರ ವಿರುದ್ದ ಸುಮಾರು 40 ಕ್ಕಿಂತ ಹೆಚ್ಚು ಪ್ರಕರಣಗಳು ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಬಿಬಿಎಂಪಿಯಲ್ಲಿ ಗುತ್ತಿಗೆದಾರಿಗೆ ಶೇ 68% ರಷ್ಟು ಹೆಚ್ಚಿಗೆ ನೀಡಿದ್ದಾರೆ. ಇವೆಲ್ಲವೂ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿ ಯವರು ಶುಕ್ರವಾರ ಅಧಿವೇಶನ ಕೊನೆ ಗಳಿಗೆಯಲ್ಲಿ ಆರೋಪ ಮಾಡಿ ವಿರೋಧ ಪಕ್ಷದವರು ಬಾಯಿ‌ಮುಚ್ಚಿಕೊಂಡಿದ್ದಾರೆ ಎನ್ನುತ್ತಾರೆ‌.

Valmiki Corruption- Scam Karnataka Govt Do Not Misuse The CM Power Basavaraj Bommai

ಸದನದಲ್ಲಿ ಪ್ರತಿಪಕ್ಷದ ಶಾಸಕರನ್ನು ಟಾರ್ಗೆಟ್ ಮಾಡಿದರೂ ಯಾರೂ ಬಗ್ಗುವುದಿಲ್ಲ. ಅವರ ಮುಖಕ್ಕೆ ಮಸಿ ಬಳಿದಿದ್ದು, ತಾವೆಲ್ಲರು ಒಂದು ಎಂದು ತೋರಿಸಲು ಹೊರಟಿದ್ದಾರೆ. ಭ್ರಷ್ಟಾಚಾರದ ಬ್ರಹ್ಮ ಯಾರು ಅಂತ ಎಲ್ಲರಿಗೂ ಗೊತ್ತಾಗಿದೆ. ಅವರು ಈಗ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ತನಿಖೆ ನಂತರ ಸತ್ಯ ಹೊರಬರಲಿದೆ. ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಹೋರಾಟ ಸದನದ ಹೊರಗೆ ಹಾಗೂ ಒಳಗೆ ಮುಂದುವರೆಯಲಿದೆ ಎಂದು ತಿಳಿಸಿದರು.

ಇಡಿ ಬಗ್ಗೆ ಭಯ ಏಕೆ?

ರಾಜ್ಯ ಸರ್ಕಾರ ಇಡಿ ವಿರುದ್ಧ ಕಾನೂನು ಸಮರಕ್ಕೆ ಚಿಂತನೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದೆಯೂ ಅವರು ಇಡಿ ವಿರುದ್ಧ ದೂರು ಕೊಡುವ ಕೆಲಸ ಮಾಡಿದ್ದರು. ಇವರಿಗೆ ಯಾರ ಭಯ, ಯಾಕೆ ಭಯ?. ಯಾರ ಹೆಸರು ಹೊರಗೆ ಬರುತ್ತದೆ ಎಂದು ಇವರಿಗೆ ಭಯ ಶುರುವಾಗಿದೆ.

ಹಗರಣಗಳನ್ನು ಮಾಡಿದ ಎಲ್ಲ ರಾಜಕಾರಣಿಗಳ ಸಾಮಾನ್ಯ ನಡೆ ಇದು. ಕುಂಬಳಕಾಯಿ ಕಳ್ಳ ಅಂದರೆ, ಇವರು ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು. ಹಿಂದೆ ಕಾಂಗ್ರೆಸ್ ಶಾಸಕರು, ಸಚಿವರು ಎಲ್ಲೊ ಐಟಿ ದಾಳಿ ಆದರೆ ನಮ್ಮನೆ ಮೇಲೆ ಐಟಿ ದಾಳಿ ಆಗುತ್ತದೆ ಎಂದು ಹೇಳುತ್ತಿದ್ದರು ಲೇವಡಿ ಮಾಡಿದರು.

ಸರ್ಕಾರದಿಂದ ಪ್ರವಾಹ ನಿರ್ಲಕ್ಷ್ಯ

ಇದೇ ವೇಳೆ, ರಾಜ್ಯದಲ್ಲಿ ಪ್ರವಾಹ ಬಂದರೂ ಮುಖ್ಯಮಂತ್ರಿ ಹಾಗೂ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದಿರುವ ಕುರಿತು ಕೇಳಿದ ಪ್ರಶ್ನೆಗೆ, ಬರ ಮತ್ತು ಪ್ರವಾಹದ ವಿಚಾರದಲ್ಲಿ ಈ ಸರ್ಕಾರ ನಿರ್ಲಕ್ಷ್ಯ ಮಾಡಿರುವುದು ಸ್ಪಷ್ಟವಾಗಿದೆ. ನಮ್ಮ ಕೇಂದ್ರ ಸಚಿವರು, ಪಕ್ಷದ ನಾಯಕರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡಿದ ನಂತರ ಸಿಎಂ ಭೇಟಿ ಮಾಡಿದ್ದಾರೆ.

ಕೇಂದ್ರ ಸರ್ಕಾರ 700 ಕೋಟಿ ರೂ. ನೀಡಿದೆ. ಇವರು ರಾಜ್ಯ ಸರ್ಕಾರದಿಂದ ಬರ ಬಂದಾಗಲೂ ಹಣ ಬಿಡುಗಡೆ ಮಾಡಲಿಲ್ಲ. ಈಗಲೂ ಬಿಡುಗಡೆ ಮಾಡಿಲ್ಲ. ಈ ಸರ್ಕಾರಕ್ಕೆ ಒಳ್ಳೆಯ ಆಡಳಿತ ಕೊಡುವ ಉದ್ದೇಶ ಇಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಯಾವಾಗಲೂ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಾರೆ ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+