• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡೌನ್ಲೋಡ್ ಮಾಡ್ಕೊಳಿ: ವಚನಗಳು ಆಗಲಿ ನಿಮ್ಮ ಕರಗತ

By ಮಲೆನಾಡಿಗ
|

ಲೋಕದ ಡೊಂಕು ತಿದ್ದಲು, ಭಾರತೀಯ ಸಂಸ್ಕೃತಿಯ ಮೌಲ್ಯವನ್ನು ಎತ್ತಿ ಹಿಡಿಯಲು, ಜನ ಸಾಮಾನ್ಯರಿ ಜೀವನ ಮೌಲ್ಯ, ಸಮಾನತೆಯ ಅರಿವು ಮೂಡಿಸಲು ಶುರುವಾದ ಸಾಮಾಜಿಕ ಕ್ರಾಂತಿಯ ಫಲವಾಗಿ ಸಿಕ್ಕ ಕಾಣಿಕೆಯೇ ವಚನಗಳು. ಇಂಥ ವಚನಗಳು ಆಂಡ್ರಾಯ್ಡ್ ಲೋಕಕ್ಕೆ ಲಗ್ಗೆ ಇಟ್ಟಿದ್ದು ಅಪ್ಲಿಕೇಷನ್ ಮೂಲಕ ನಿಮ್ಮ ಅಂಗೈಗೆ ಜ್ಞಾನಭಂಡಾರವನ್ನು ನೀಡಿದ್ದಾರೆ ಸಾಫ್ಟ್ ವೇರ್ ತಜ್ಞ ಲೋಹಿತ್ ಡಿ.ಎಸ್.

11ನೇ ಶತಮಾನ ದಕ್ಷಿಣದ ಚಾಲುಕ್ಯರ ಕಾಲದ ಮಾದರ ಚೆನ್ನಯ್ಯರಿಂದ ಶುರುವಾಗಿ, ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಮಂತ್ರಿಯಾಗಿದ್ದ ಬಸವಣ್ಣ ಅವರಿಂದ ಜನಪ್ರಿಯಗೊಂಡ ಈ ಸಾಹಿತ್ಯ ಪ್ರಕಾರ ಗದ್ಯ, ಪದ್ಯ ಮಿಶ್ರಿತ ವಿಶಿಷ್ಟ ಸಾಹಿತ್ಯ ಪ್ರಕಾರ.[ಮೊಬೈಲಿನಲ್ಲೇ ಓದಿ ದಾಸ ವರೇಣ್ಯರ ಸಾಹಿತ್ಯ]

ಬಸವಣ್ಣ, ಅಕ್ಕ ನಾಗಮ್ಮ, ಜೇಡರ ದಾಸೀಮಯ್ಯ, ಅಂಬಿಗ ಚೌಡಯ್ಯ, ಮಾದಾರ ಚೆನ್ನಯ್ಯ, ಅಕ್ಕಮಹಾದೇವಿ, ಮತ್ತು ಅಲ್ಲಮಪ್ರಭು ಹೀಗೆ ವಚನಕಾರರ ಪಟ್ಟಿ ಬೆಳೆಯುತ್ತದೆ. ಲಿಂಗಾಯತರ ಆಂದೋಲನ ಭಾಗವಾಗಿ ಬೆಳೆದ ಕ್ರಾಂತಿಕಾರಿ ಸಾಹಿತ್ಯ ಪ್ರಕಾರ ಜನ ಸಾಮಾನ್ಯರಿಗೆ ದಾರಿದೀಪವಾಗಿದೆ. [ಅಂಗೈಯಲ್ಲೇ ಸುದ್ದಿ ಕಣಜ 60 ಸೆಕೆಂಡ್ಸ್ ನೌ]

ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾ

ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯಾ

ಕೂಡಲಸಂಗಮದೇವಾ ಕೇಳಯ್ಯಾ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ,

ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶಿಷ್ಟ ಕಾವ್ಯ ಪ್ರಕಾರವಾದ ವಚನಗಳು ಈಗ ಅಂಗೈಯಲ್ಲೇ ಲಭ್ಯ. ನಿಮ್ಮ ಸ್ಮಾರ್ಟ್ ಫೋನಿನ ಅಪ್ಲಿಕೇಷನ್ ನಲ್ಲಿ ಸಾವಿರಾರು ವಚನಗಳನ್ನು ಓದಬಹುದಾಗಿದೆ.. ವಚನ ಸಾಹಿತ್ಯ ಅಪ್ಲಿಕೇಷನ್ ಕುರಿತ ಇನ್ನಷ್ಟು ಮಾಹಿತಿ, ವಿವರ ಮುಂದಿದೆ ಓದಿ...

ಮೊಬೈಲ್ ಅಪ್ಲಿಕೇಷನ್ ಇದೇ ಮೊದಲು

ಮೊಬೈಲ್ ಅಪ್ಲಿಕೇಷನ್ ಇದೇ ಮೊದಲು

ವಚನ ಸಾಹಿತ್ಯ ಕುರಿತಂತೆ ಅನೇಕ ವೆಬ್ ಸೈಟ್ ಗಳಿವೆ. ವಿಚಾರಮಂಟಪ, ವಚನ.ಸಂಚಯ.ನೆಟ್ ಸಂಗ್ರಹ ಯೋಗ್ಯವಾಗಿವೆ. ಅದರೆ, ಮೊಬೈಲ್ ನಲ್ಲಿ ವಚನ ಸಾಹಿತ್ಯ ಕುರಿತಂತೆ ಸಮಗ್ರ ಅಪ್ಲಿಕೇಷನ್ ಇರಲಿಲ್ಲ.

ಈ ಕೊರತೆಯನ್ನು ವಚನ ಸಾಹಿತ್ಯ ಅಪ್ಲಿಕೇಷನ್ ನೀಗಿಸಿದೆ. 250ಕ್ಕೂ ಅಧಿಕ ವಚನಕಾರರು, 20,000ಕ್ಕೂ ಅಧಿಕ ವಚನಗಳು ನಿಮ್ಮ ಬೆರಳ ತುದಿಯಲ್ಲಿ ಸಿಗಲಿದೆ. ಗೂಗಲ್ ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಸಂಪೂರ್ಣ ಉಚಿತವಾಗಿದೆ.

ವಚನ ಸಾಹಿತ್ಯ ಡೌನ್ ಲೋಡ್ ಹೇಗೆ?

ವಚನ ಸಾಹಿತ್ಯ ಡೌನ್ ಲೋಡ್ ಹೇಗೆ?

ದಾಸ ಸಾಹಿತ್ಯ ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು, ಆಂಡ್ರಾಯ್ಡ್ ಆಧಾರಿತ ಮೊಬೈಲ್ ನಲ್ಲಿ ಇಳಿಸಿಕೊಳ್ಳಬಹುದಾಗಿದೆ. ಡೌನ್ ಲೋಡ್ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

* ಕೇವಲ 2.3 ಎಂಬಿ ತೂಕವಿರುವ ಅಪ್ಲಿಕೇಷನ್ ವಿನ್ಯಾಸವೂ ಕಣ್ಮನ ಸೆಳೆಯುತ್ತದೆ.

* ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ 2.3 ಅಥವಾ ಅದಕ್ಕಿಂತ ಹೆಚ್ಚಿನ OS ಬಳಸುವ ಮೊಬೈಲ್ ನಲ್ಲಿ ಇದನ್ನು ಬಳಸಬಹುದಾಗಿದೆ.

ವಚನ ಸಾಹಿತ್ಯ ಪೂರಕ ಮಾಹಿತಿಗೆ

ವಚನ ಸಾಹಿತ್ಯ ಪೂರಕ ಮಾಹಿತಿಗೆ

On Facebook : https://www.facebook.com/vachanasahitya

ಪ್ರತಿಕ್ರಿಯೆಗಾಗಿ : software.pada@gmail.com

ವೆಬ್ ಸೈಟ್ : http://www.pada.pro/

ವಚನಗಳ ಹುಡುಕಾಟ ಸುಲಭ

ವಚನಗಳ ಹುಡುಕಾಟ ಸುಲಭ

ಸಾವಿರಾರು ವಚನಗಳ ಪೈಕಿ ನಿಮ್ಮಿಷ್ಟದ ವಚನವನ್ನು ಹುಡುಕಲು 'ಅ' ಇಂದ 'ಹ' ತನಕ ಅಕ್ಷರಗಳನ್ನು ಕೊಡಲಾಗಿದ್ದು, ಅಕ್ಷರಗಳ ಮೇಲೆ ಬೆರಳಾಡಿಸಿದರೆ ಸಾಕು ಆ ಅಕ್ಷರದಲ್ಲಿ ಬರುವ ವಚನಕಾರರ ಹೆಸರುಗಳು ಕಾಣಿಸುತ್ತದೆ.

ಉದಾಹರಣೆ: 'ಅ' ಕ್ಲಿಕ್ ಮಾಡಿದರೆ ಅಮುಗೆ ರಾಯಮ್ಮ, ಅಕ್ಕ ಮಹಾದೇವಿ ಸೇರಿದಂತೆ ಅನೇಕ ವಚನಕಾರರ ಪಟ್ಟಿ ಬರುತ್ತದೆ. ನಿಮ್ಮ ಅಯ್ಕೆ ಮಾಡಿಕೊಳ್ಳಿ

ವಚನ ಸಂಗ್ರಹಕ್ಕೆ ನೆರವಾಗಿ

ವಚನ ಸಂಗ್ರಹಕ್ಕೆ ನೆರವಾಗಿ

ಸಾರ್ವಜನಿಕರ ಬಳಕೆ ಹೆಚ್ಚಿದ್ದಂತೆ ಇನ್ನಷ್ಟು ಉಪಯುಕ್ತ ಅಪ್ಲಿಕೇಷನ್ ಗಳನ್ನು ಸಿದ್ದಪಡಿಸುತ್ತೇನೆ. ಇದಕ್ಕೆ ತಾಂತ್ರಿಕ ನೆರವು ನೀಡಲು ಬಯಸುವವರು ಸಂಪರ್ಕಿಸಬಹುದು. ಕನ್ನಡಕ್ಕೆ ಇನ್ನಷ್ಟು ವಿಶಿಷ್ಟ ಜನ ಉಪಯೋಗಿ ತಂತ್ರಾಂಶ ನೀಡುತ್ತೇನೆ. ಇದುವರೆವಿಗೂ ಪದ ತಂತ್ರಾಂಶ ಸೇರಿದಂತೆ ಕೆಲ ಉಪಯುಕ್ತ ತಂತ್ರಾಂಶಗಳನ್ನು ನೀಡಿರುವ ಲೋಹಿತ್ ಅವರು ಮೊಬೈಲ್ ನಲ್ಲಿ ಪದ ತಂತ್ರಾಂಶ ಬಳಸಲು ಇಚ್ಛಿಸುವವರಿಗೆ ಮಾತ್ರ ಶುಲ್ಕ ವಿಧಿಸಿದ್ದಾರೆ. ಉಳಿದಂತೆ ಎಲ್ಲವೂ ಮುಕ್ತವಾಗಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗೆ, ಆಸಕ್ತರು ಲೋಹಿತ್ ಗೆ ಇಮೇಲ್(software.pada@gmail.com) ಮಾಡಿ.

ವಚನ ಸಾಹಿತ್ಯ ಅಪ್ಲಿಕೇಷನ್ ಹೇಗಿದೆ?

ವಚನ ಸಾಹಿತ್ಯ ಅಪ್ಲಿಕೇಷನ್ ಹೇಗಿದೆ?

ದಾಸ ಸಾಹಿತ್ಯ ಅಪ್ಲಿಕೇಷನ್ ನಂತೆ ವಚನ ಸಾಹಿತ್ಯ ಅಪ್ಲಿಕೇಷನ್ ಕೂಡಾ ಸರಳವಾಗಿ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಇದೆ. ಹುಡುಕಾಟ ಸುಲಭವಾಗಿದೆ. ಅದರೆ, ವಚನಗಳ ಲೋಡಿಂಗ್ ಸಮಯ ಜಾಸ್ತಿಯಾಗಿದೆ. ಮಧ್ಯೆ ಮಧ್ಯೆ ಆಡ್ ಕಿರಿಕಿರಿ ಅನುಭವಿಸಲೇಬೇಕು.

ವಚನ ಓಪನ್ ಆದ ಮೇಲೆ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಲು ಯಾವುದೇ ಷೇರ್ ಲಿಂಕ್ ಕೊಟ್ಟಿಲ್ಲ. ಈ ಬಗ್ಗೆ ಲೋಹಿತ್ ಅವರು ಗಮನ ಹರಿಸುತ್ತಾರೆ ಎಂಬ ಆಶಯವಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lohith DS of Pada Software fame after Dasa Sahitya Mobile Application now released new Android App which contains more than 20,000 Vachanas. Vachana sahitya (ವಚನ ಸಾಹಿತ್ಯ) is a form of rhythmic writing in Kannada that evolved in the 11th Century C.E. and flourished in the 12th century, as a part of the Lingayatha 'movement'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more