ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಗೈಯಲ್ಲೇ ಸುದ್ದಿ ಕಣಜ : 60 ಸೆಕೆಂಡ್ಸ್ ನೌ App

By Mahesh
|
Google Oneindia Kannada News

ಇಂಟರ್ನೆಟ್, ವೆಬ್ ಸೈಟ್ ಬಂದ ಮೇಲೆ ದಿನಪತ್ರಿಕೆಗಳನ್ನು ಕೂಡಾ ಮೊಬೈಲ್ ಫೋನಿ ಓದುವ ಚಟ ಓದುಗರಲ್ಲಿ ಹೆಚ್ಚಾಯಿತು. ಈಗ ಎಲ್ಲಾ ದಿನಪತ್ರಿಕೆ, ವೆಬ್ ಸೈಟ್ ಗಳ ಸುದ್ದಿಯನ್ನು 60 ಸೆಕೆಂಡುಗಳಲ್ಲೇ ಅಂಗೈ ಸಾಧನಗಳಲ್ಲೇ ಓದುವಂತಾದರೆ..ಆಹಾ ಎಷ್ಟು ಸೊಗಸಾಗಿರುತ್ತದೆ.

ಸುದ್ದಿಗಾಗಿ ನಿಮ್ಮ ನೆಚ್ಚಿನ ವೆಬ್ ಸೈಟ್ ಗಳನ್ನು ಹುಡಕಬೇಕಿಲ್ಲ, ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಹ್ಯಾಶ್ ಟ್ಯಾಗ್, ಲಿಸ್ಟ್ ಮಾಡಿಕೊಂಡು ನೋಡುವ ತೊಂದರೆ ಇನ್ನಿಲ್ಲ. [ಆಪ್ ಇನ್ ಸ್ಟಾಲ್ ಮಾಡಿರಿ]

ಒನ್ ಇಂಡಿಯಾ ಸಂಸ್ಥೆ ಹೊರ ತಂದಿರುವ 60SecondsNow ಅಪ್ಲಿಕೇಷನ್ ನಿಮ್ಮ ಆಂಡ್ರಾಯ್ಡ್ ಮೊಬೈಲ್ ಫೋನಿನಲ್ಲಿ ಹಾಕಿಕೊಂಡರೆ ಸಾಕು ಜನಪ್ರಿಯ ಮಾಧ್ಯಮ ಸಂಸ್ಥೆಗಳು ನೀಡುವ ಸುದ್ದಿಗಳನ್ನು ಈ ಅಪ್ಲಿಕೇಷನ್ ನಿಮಗೆ ನೀಡುತ್ತದೆ. [60ಸೆಕೆಂಡ್ಸ್ ನೌ ವೆಬ್ ಪುಟ ಲಿಂಕ್]

60SecondsNow ಅಪ್ಲಿಕೇಷನ್ ನಿಮ್ಮ ಮೊಬೈಲಿಗೆ ಇಳಿಸಿಕೊಳ್ಳುವುದು ಹೇಗೆ? ಏನೆಲ್ಲ ಇಲ್ಲಿ ಓದಬಹುದು? ಯಾವ ಯಾವ ಭಾಷೆಯಲ್ಲಿ ಈ ಅಪ್ಲಿಕೇಷನ್ ಲಭ್ಯ? ಸುದ್ದಿ ಎಲ್ಲೆಲ್ಲಿ ಹಂಚಬಹುದು ಎಂಬ ಮಾಹಿತಿ ನಿಮ್ಮ ಮುಂದಿದೆ...

ನಿಮ್ಮ ಮೊಬೈಲಿಗೆ ಇಳಿಸಿಕೊಳ್ಳುವುದು ಹೇಗೆ?

ನಿಮ್ಮ ಮೊಬೈಲಿಗೆ ಇಳಿಸಿಕೊಳ್ಳುವುದು ಹೇಗೆ?

* ಗೂಗಲ್ ಪ್ಲೇ ಸ್ಟೋರ್ ನಲ್ಲಿ ನ್ಯೂಸ್ ಅಂಡ್ ಮ್ಯಾಗಜೀನ್ ವಿಭಾಗದಲ್ಲಿ 60 Seconds Now ಅಪ್ಲಿಕೇಷನ್ ಇದೆ. ಸರ್ಚ್ ಬಾಕ್ಸ್ ನಲ್ಲಿ 60 Seconds Now ಅಥವಾ Oneindia ಎಂದು ಹಾಕಿ ಪಡೆದುಕೊಳ್ಳಬಹುದು.
* ಸುಮಾರು 4.4 ಎಂಬಿ ಗಾತ್ರ ಈ ಸಾಫ್ಟ್ ವೇರ್ ಅಪ್ಲಿಕೇಷನ್ ಎಲ್ಲಾ ಆಂಡ್ರಾಯ್ಡ್ ಆಧಾರಿತ ಮೊಬೈಲ್ ಫೋನ್ ನಲ್ಲಿ ಇಳಿಸಿಕೊಳ್ಳಬಹುದಾಗಿದೆ.
* ಆಂಡ್ರಾಯ್ಡ್ ಓಸ್ 2.3 ಹಾಗೂ ಮೇಲ್ಪಟ್ಟ ಓಸ್ ಬಳಕೆ ಮಾಡುತ್ತಿರುವ ಎಲ್ಲಾ ಸ್ಮಾರ್ಟ್ ಫೋನ್ ನಲ್ಲಿ ಬಳಸಬಹುದು.
* ವಿಂಡೋಸ್, ಐಓಸ್ ಫೋನ್ ಗಳಲ್ಲಿ ಸದ್ಯಕ್ಕೆ ಲಭ್ಯವಿಲ್ಲ. ಮುಂದಿನ ದಿನಗಳಲ್ಲಿ ನಿರೀಕ್ಷಿಸಿ

ಏನೆಲ್ಲ ಇಲ್ಲಿ ಓದಬಹುದು?

ಏನೆಲ್ಲ ಇಲ್ಲಿ ಓದಬಹುದು?

* ರಾಜ್ಯ, ನಗರ, ಅಂತಾರಾಷ್ಟ್ರೀಯ, ಚಲನಚಿತ್ರ, ಕ್ರೀಡೆ, ವಾಣಿಜ್ಯ ಹೀಗೆ ಆಯಾ ವಿಭಾಗದಲ್ಲಿ ವಿವಿಧ ವೆಬ್ ಸೈಟ್ ಗಳಿಂದ ಸಿಗುವ ಆ ಕ್ಷಣದ ಸುದ್ದಿ ನೀವು ಓದಬಹುದು.
* ಕನ್ನಡ ಪ್ರಭ, ವಿಜಯಕರ್ನಾಟಕ, ಉದಯವಾಣಿ,ಈ ಸಂಜೆ ಅಲ್ಲದೆ ಯೂನಿಕೋಡ್ ಬಳಕೆ ಮಾಡುವ ಯಾವುದೇ ವೆಬ್ ಸೈಟ್ ನ ಸುದ್ದಿಯನ್ನು ಇಲ್ಲೇ ಕಾಣಬಹುದು.

ಸುದ್ದಿಗೆ ತಕ್ಕ ಶೀರ್ಷಿಕೆ, ಚಿತ್ರ ಹಾಗೂ ಸುದ್ದಿಸಾರ

ಸುದ್ದಿಗೆ ತಕ್ಕ ಶೀರ್ಷಿಕೆ, ಚಿತ್ರ ಹಾಗೂ ಸುದ್ದಿಸಾರ

ಸುದ್ದಿಗೆ ತಕ್ಕ ಶೀರ್ಷಿಕೆ, ಚಿತ್ರ ಹಾಗೂ ಸುದ್ದಿ ಸಾರ ಹಾಗೂ ಸುದ್ದಿಯ ಲಿಂಕ್ ಇರುತ್ತದೆ. ಲಿಂಕ್ ಕ್ಲಿಕ್ ಮಾಡಿ ಸುದ್ದಿಯ ವಿವರ ಓದಬಹುದು.

ಯಾವ ಯಾವ ಭಾಷೆಯಲ್ಲಿ ಈ ಅಪ್ಲಿಕೇಷನ್ ಲಭ್ಯ?

ಯಾವ ಯಾವ ಭಾಷೆಯಲ್ಲಿ ಈ ಅಪ್ಲಿಕೇಷನ್ ಲಭ್ಯ?

* ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿ ಸದ್ಯಕ್ಕೆ ಅಪ್ಲಿಕೇಷನ್ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಭಾಷೆಗಳನ್ನು ಅಳವಡಿಸಲಾಗುತ್ತಿದೆ.
* ಇವೆಲ್ಲವೂ http://www.60secondsnow.com/ ವೆಬ್ ಸೈಟ್ ನಲ್ಲೂ ಲಭ್ಯವಿರುತ್ತದೆ

ಓದಿದ ಸುದ್ದಿ ಎಲ್ಲೆಲ್ಲಿ ಹಂಚಬಹುದು

ಓದಿದ ಸುದ್ದಿ ಎಲ್ಲೆಲ್ಲಿ ಹಂಚಬಹುದು

ನೀವು ಓದಿದ ಸುದಿಯನ್ನು ಫೇಸ್ ಬುಕ್, ಟ್ವಿಟ್ಟರ್, ಜಿಪ್ಲಸ್ ಅಲ್ಲದೆ ಇತರೆ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಬಹುದು.

* ಅಪ್ಲಿಕೇಷನ್ ಬಗ್ಗೆ ನಿಮ್ಮ ಪ್ರತಿಕ್ರಿಯೆಯನ್ನು ಇಮೇಲ್ ಮಾಡಲು ವಿಳಾಸ: [email protected]

* ಫೇಸ್ ಬುಕ್ ಪುಟದ ಲಿಂಕ್ ಇಲ್ಲಿದೆ

English summary
Oneindia.com, one of the unsurpassed in Internet News Portal has expanded its apps domain, after viewing the unrivalled triumph of Oneindia, Oneindia News Regional Apps. 'News in brief’ from varied news sources in a package named 60SecondsNow for Android mobile phones.Here are the steps to install the app.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X