ವಿಶ್ವೇಶ್ವರಯ್ಯ ಕಾಲೇಜು ಇಂಜಿನಿಯರಿಂಗ್ ಫೀ ಪರಿಷ್ಕರಣೆ
ಬೆಂಗಳೂರು, ಸೆ. 5: ಮಹಾನಗರದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ಷರಿಷ್ಕೃತ ಶುಲ್ಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಲವು ಗೊಂದಲಗಳ ನಡುವೆಯೂ ಬೆಂಗಳೂರು ವಿಶ್ವವಿದ್ಯಾಲಯ ಈ ತೀರ್ಮಾನ ತೆಗೆದುಕೊಂಡಿದೆ.
ವಾರ್ಷಿಕ ಶುಲ್ಕವನ್ನು 2 ಸಾವಿರ ರೂಪಾಯಿ ಜಾಸ್ತಿ ಮಾಡಲಾಗಿದೆ. ಈ ಮೊದಲು 20,430 ರೂ . ಇದ್ದ ವಾರ್ಷಿಕ ಶುಲ್ಕವನ್ನು 22,430ಕ್ಕೆ ಏರಿಸಲಾಗಿದೆ.

ಬಾಕಿ ಹಣವನ್ನು ವಿಶ್ವವಿದ್ಯಾಲಯಕ್ಕೆ ಸರ್ಕಾರ ನೀಡಬೇಕು. ಇದು ಸಾಧ್ಯವಾಗದಿದ್ದರೆ ಕಾಲೇಜು ಪ್ರಾಚಾರ್ಯರು ವಿದ್ಯಾರ್ಥಿಗಳಿಂದಲೇ ಬಾಕಿ ಹಣ ವಸೂಲಿ ಮಾಡಬೇಕಾಗುತ್ತದೆ ಎಂದು ವಿಶ್ವವಿದ್ಯಾಲಯದ ಉಪ ಕುಲಪತಿ ಬಿ.ತಿಮ್ಮೇಗೌಡ ಹೇಳಿದ್ದಾರೆ.












Click it and Unblock the Notifications