ಮತದಾರರ ಪಟ್ಟಿ ಸಮಸ್ಯೆ ಸರಿಪಡಿಸಲು ಯುನೈಟೆಡ್ ಬೆಂಗಳೂರು ಮನವಿ
ಬೆಂಗಳೂರು, ನವೆಂಬರ್ 20: ರಾಜ್ಯದ ಮತದಾರರ ಪಟ್ಟಿಯನ್ನು ಚುನಾವಣೆ ಆಯೋಗದಿಂದ ಪ್ರಕಟಿಸಿದ್ದು, ಅದು ಪಿಡಿಎಫ್ ಫಾರ್ಮಾಟ್ ನಲ್ಲಿದೆ. ಅದರಲ್ಲಿ ಮತದಾರರ ಹೆಸರು ಹುಡುಕುವುದು ಕಷ್ಟ. ಆದ್ದರಿಂದ ಆ ಪಟ್ಟಿಯನ್ನು ವರ್ಡ್ ಫಾರ್ಮಾಟ್ ನಲ್ಲಿ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಯನ್ನು ಒಳಗೊಂಡ ಮನವಿ ಪತ್ರವನ್ನು ರಾಜ್ಯ ಚುನಾವಣೆ ಆಯೋಗಕ್ಕೆ ಯುನೈಟೆಡ್ ಬೆಂಗಳೂರು ಸೇರಿ ವಿವಿಧ ಸಂಘಟನೆಯಿಂದ ಸಲ್ಲಿಸಲಾಯಿತು.
ರಾಜ್ಯ ಚುನಾವಣೆ ಆಯೋಗದ ವೆಬ್ ಸೈಟ್ ನಲ್ಲಿ ಮತದಾರರ ಪಟ್ಟಿಯನ್ನು ಅಪ್ ಲೋಡ್ ಮಾಡಲಾಗಿದೆ. ಆದರೆ ಅದು ಪಿಡಿಎಫ್ ಫಾರ್ಮಾಟ್ ನಲ್ಲಿದೆ. ಹೀಗಿರುವುದರಿಂದ ಅದರಲ್ಲಿ ತಮ್ಮ ಹೆಸರುಗಳನ್ನು ಹುಡುಕಿಕೊಳ್ಳಲು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸದ್ಯಕ್ಕೆ ಇರುವ ನಿಯಮಗಳನ್ನು ಗಮನಿಸಿ, ಅದಕ್ಕೆ ತಕ್ಕಂತೆ ಮಾಹಿತಿಯನ್ನು ಒದಗಿಸಬೇಕು ಎಂದು ಕೋರಲಾಯಿತು.

ಇದೇ ವೇಳೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು, ಬದಲಾವಣೆ ಮಾಡಲು ನಿಗದಿ ಮಾಡಿರುವ ದಿನಾಂಕದ ವಿಸ್ತರಣೆ ಮಾಡಬೇಕು ಎಂದು ಕೂಡ ಮನವಿ ಸಲ್ಲಿಸಲಾಯಿತು. ಬೆಂಗಳೂರು ಅಪಾರ್ಟ್ ಮೆಂಟ್ಸ್ ಗಳ ಒಕ್ಕೂಟ, ಸಿಟಿಜನ್ ಆಕ್ಷನ್ ಫೋರಂ, ನಮ್ಮ ಬೆಂಗಳೂರು ಫೌಂಡೇಷನ್ ಮತ್ತಿತರ ಸಂಘಟನೆ ಹಾಗೂ ಸಾಮಾಜಿಕ ಕಾರ್ಯಕರ್ತರು ಸೇರಿ ಸೋಮವಾರ ಮನವಿ ಸಲ್ಲಿಸಿದರು.












Click it and Unblock the Notifications