ನಿಲ್ಲದ ಟ್ಯಾಕ್ಸಿ ಚಾಲಕರ ಆಟಾಟೋಪ: ಮಹಿಳಾ ಟಿಕ್ಕಿ ಮೇಲೆ ದೌರ್ಜನ್ಯ

ಬೆಂಗಳೂರು, ಜು.11: ಮಹಿಳಾ ಟೆಕ್ಕಿಯ ಜೊತೆಗೆ ಊಬರ್‌ ಚಾಲಕ ಅನುಚಿತವಾಗಿ ವರ್ತಿಸಿದ ಘಟನೆ ಮಂಗಳವಾರ ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ ಬಳಿ ನಡೆದಿದೆ.

ಮಹಿಳೆಯು ಬೆಳ್ಳಂದೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ, ಕಚೇರಿಗೆ ತೆರಳಲು ಊಬರ್‌ ಬುಕ್‌ ಮಾಡಿದ್ದಾರೆ, ಎಚ್‌ಆರ್‌ಲೇಟ್‌ನಿಂದ ಕಂಪನಿಗೆ ಹೋಗುವ ವೇಳೆ ಚಾಲಕ ಮಾರ್ಗ ಬದಲಾಯಿಸಿದ್ದಾನೆ, ಯಾಕೆ ಮಾರ್ಗ ಬದಲಾಯಿಸಿದ್ದು ಎಂದು ಕೇಳಿದಾಕ್ಷಣ ಆಕೆಯ ಜತೆಗೆ ಅನುಚಿತವಾಗಿ ವರ್ತಿಸಿದ್ದಾನೆ.

Uber driver misbehaves with lady techie in Bengaluru again

ಈಗಲೇ ಟ್ರಿಪ್‌ ಕ್ಯಾನ್ಸಲ್‌ ಮಾಡುತ್ತೇನೆ, ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಚಾಲಕ ಹೇಳಿದ್ದಾನೆ, ಅಷ್ಟೇ ಅಲ್ಲದೆ ಅವಾಚ್ಯ ಶಬ್ದಗಳಿಂದ ಆಕೆಯನ್ನು ನಿಂತಿದಿಸಿದ್ದಾನೆ, ಟೆಕ್ಕಿಯನ್ನು ಮಾರ್ಗ ಮಧ್ಯೆಯೇ ಬಿಟ್ಟು ಹೋಗಿದ್ದಾನೆ, ಮಹಿಳಾ ಟೆಕ್ಕಿ ಕ್ಯಾಬ್‌ ಕೆಎ 42, ಎ 4692 ಇಟಿಯೋಸ್‌ನಲ್ಲಿ ಕಂಪನಿಗೆ ತೆರಳುತ್ತಿದ್ದರು. ಟೆಕ್ಕಿ ಟ್ವಿಟ್ಟರ್‌ ಮೂಲಕ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಹಿಂದೆ ಜೀವನ್‌ ಭೀಮಾ ನಗರ, ಚಿಕ್ಕಜಾಲ, ಏರ್‌ಪೋರ್ಟ್‌ ರಸ್ತೆಯಲ್ಲಿ ಇಂಥದ್ದೇ ಪ್ರಕರಣಗಳು ನಡೆದಿತ್ತು.

ಕಳೆದ ಒಂದು ವಾರದ ಹಿಂದೆ ಏರ್‌ಪೋರ್ಟ್‌ ರಸ್ತೆಯಲ್ಲಿ ಯುವತಿಯನ್ನು ಅಪಹರಿಸಲು ಓಲಾ ಚಾಲಕ ಮುಂದಾಗಿದ್ದ ಕೊನೆಗೆ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+