Get Updates
Get notified of breaking news, exclusive insights, and must-see stories!

U.S Polo Shop: ಬೆಂಗಳೂರು ಗ್ರಾಹಕರಿಗಾಗಿ ಹೊಸ ಔಟ್‌ಲೆಟ್ ತೆರೆದ 'ಯುಎಸ್‌ ಪೊಲೋ': ವಿವರ

ಬೆಂಗಳೂರು, ಫೆಬ್ರವರಿ 13: ಪ್ರೇಮಿಗಳ ದಿನಕ್ಕೆ ಒಂದು ದಿನ ಬಾಕಿ ಇದ್ದು, ನಿಮ್ಮ ಪ್ರೇಮಿಗಳಿಗೆ ಬ್ರ್ಯಾಂಡೆಂಡ್ ಬಟ್ಟೆಗಳನ್ನು ಗಿಫ್ಟ್ ಕೊಡಲು ಯೋಜಿಸಿದ್ದರೆ ನಿಮಗಾಗಿ ಇಲ್ಲೊಂದು ಸಿಹಿ ಸುದ್ದಿ ಇದೆ. ಯುಎಸ್‌ ಪೋಲೋ ಬೆಂಗಳೂರಿನಲ್ಲಿ ಬೃಹತ್ ಔಟ್‌ಲೆಟ್ ತೆರದಿದೆ.

ಹೌದು, ಅಮೆರಿಕಾ (US) ಮೂಲದ ಕ್ಯಾಶುವಲ್ ವೇರ್ ಬ್ರ್ಯಾಂಡ್ ಯುಎಸ್ ಪೋಲೋ ಅಸ್ಸೆನ್ ಬೆಂಗಳೂರಿನಲ್ಲಿ ತನ್ನ ಅತಿದೊಡ್ಡ ಔಟ್‌ಲೆಟ್‌ ಅನ್ನು ಆರಂಭಿಸಿದೆ. ಈ ಬೃಹತ್ ಮಳಿಗೆಯಲ್ಲಿ ನೀವು ಯುಎಸ್‌ ಪೊಲೋ (US Polo Assn.) ಬ್ರ್ಯಾಂಡ್‌ನ ಎಲ್ಲ ಮಾದರಿಯ ಬಟ್ಟೆಗಳನ್ನು ತೆಗೆದುಕೊಳ್ಳಬಹುದು. ಈ ಬಗ್ಗೆ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಇಂಡಿಯಾ ರೀಟೈಲಿಂಗ್.ಕಾಮ್ ವರದಿ ಮಾಡಿದೆ.

U.S. Polo Assn New Outlet opened in Jayanagar of Bengaluru, Know details

ಯುಎಸ್ ಪೋಲೊದ ಈ ಸ್ಟ್ಯಾಂಡ್-ಅಲೋನ್ ಸ್ಟೋರ್ ಬೆಂಗಳೂರಿನ ಜಯನಗರ 4 ನೇ ಬ್ಲಾಕ್ ನಲ್ಲಿ ನೆಲೆಗೊಂಡಿದೆ. ಒಟ್ಟು ಮೂರು ಮಹಡಿಗಳಲ್ಲಿ 6,190 ಚದರ ಅಡಿಗಳಷ್ಟು ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಇಷ್ಟು ದೊಡ್ಡ ಅಂಗಡಿಯನ್ನು ಚಿಲ್ಲರೆ ಮಾರಾಟಕ್ಕೆ ವಿಸ್ತರಣೆ ಮಾಡಿದೆ ಎಂಬುದೇ ವಿಶೇಷ.

ಮಾರುಕಟ್ಟೆ ವಿಸ್ತರಣೆ: ಗ್ರಾಹಕರಿಗೆ ವಿಶೇಷ ಅನುಭವ

ಜಯನಗರದಲ್ಲಿರುವ ಈ ಮಳಿಗೆ ಪ್ರಮುಖ ಮಳಿಗೆ ಕೇವಲ ಇಟ್ಟಿಗೆ ಜೋಡಿಸಿ ಮಳಿಗೆ ತೆರೆಯುವ ವಿಸ್ತರಣೆಯಲ್ಲ. ಇದು ಬೆಂಗಳೂರಿನ ಗ್ರಾಹಕರಿಗೆ ಒಂದು ರೀತಿಯ ವಿಶೇಷ ಅನುಭವ ನೀಡಲು ತೆರೆಯಲಾದ ಯೋಜನೆ ಆಗಿದೆ. ಇದು ಯುನೈಟೆಡ್ ಸ್ಟೇಟ್ಸ್ ಪೋಲೋ ಅಸೋಸಿಯೇಷನ್ (USPA) ನ ಸಾಮರ್ಥ್ಯದ ಕುರಿತು ತಿಳಿಯಪಡಿಸುತ್ತದೆ. ಮಾರುಕಟ್ಟೆಯ ವಿಸ್ತರಣೆಯ ಭಾಗವು ಆಗಿದೆ ಎಂದು U.S. ಪೋಲೋ Assn.ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದೆ.

U.S. Polo Assn New Outlet opened in Jayanagar of Bengaluru, Know details

ಭಾರತೀಯರಿಗೆ ಇಷ್ಟದ ಬ್ರ್ಯಾಂಡ್

ಈ ಬ್ರ್ಯಾಂಡ್‌ಗೆ ಅತ್ಯುತ್ತಮ ಲೆಜೆಂಡರಿ ಬ್ರ್ಯಾಂಡ್ ಬಿಂಬಿತ ಎಂದು ಕಂಪನಿ ತಿಳಿಸಿದೆ. ಭಾರತೀಯ ಅಭಿಮಾನಿಗಳಿಗೆ ಈ ಬಟ್ಟೆಗಳ ಬದ್ಧತೆ ಬಗ್ಗೆ ತಿಳಿದಿದೆ. ಹೆಚ್ಚು ಹೆಚ್ಚು ಖರೀದಿಸಲು ಮನಸ್ಸು ಮಾಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ USPA ಬ್ರ್ಯಾಂಡ್ ನ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ ಆಗಿದೆ. ಇದು ನಮ್ಮ ಅತಿದೊಡ್ಡ ಪ್ರಮುಖ ಮಳಿಗೆಯನ್ನು ತೆರೆಯಲು ಪರಿಪೂರ್ಣ ಆಯ್ಕೆಯು ಆಗಿದೆ. ಜಯನಗರವು ದೇಶದ ಅತಿದೊಡ್ಡ ವಸತಿ ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿದೆ ಎಂದರು.

ಮಹಿಳೆಯರ ಉಡುಪುಗಳು ಇಲ್ಲಿ ಲಭ್ಯ

ಈ ಹಿಂದೆ ಆನ್‌ಲೈನ್‌ನಲ್ಲಿ ಲಭ್ಯವಿದ್ದ ಬ್ರ್ಯಾಂಡ್‌ನ ಸ್ಪ್ರಿಂಗ್ ಸಮ್ಮರ್ 2024 ಮಹಿಳಾ ಉಡುಪುಗಳ ಸಂಗ್ರಹವನ್ನು ಲೈವ್ ಆಫ್‌ಲೈನ್‌ನಲ್ಲಿ ಪ್ರದರ್ಶಿಸಲು ತೆರೆಯಲಾದ ಹೊಸ ಔಟ್‌ಲೆಟ್ ಭಾರತದ ಮೊದಲ ಮಳಿಗೆ ಇದಾಗಿದೆ. ಇದು ಯುಎಸ್‌ ಪೊಲೋ ಮೇನ್‌ಲೈನ್, ಯುಎಸ್‌ ಪೊಲೋ ಸ್ಪೋರ್ಟ್, ಡೆನಿಮ್ & ಕಂ., ಮಹಿಳಾ ಉಡುಪು, ಪಾದರಕ್ಷೆ, ಕಿಡ್ಸ್‌ವೇರ್, ಪರಿಕರಗಳು ಮತ್ತು ಒಳಉಡುಪುಗಳಂತಹ ಸಂಪೂರ್ಣ ಶ್ರೇಣಿಯ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ ಎಂದು ವಿವರಿಸಿದರು.

ಯುಎಸ್‌ ಪೋಲೋ ಬ್ರ್ಯಾಂಡ್ 2007ಲ್ಲಿ ಭಾರತದಲ್ಲಿ ತನ್ನ ಮಾರುಕಟ್ಟೆಗೆ ಕಾಲಿಟ್ಟು, ಅರವಿಂದ್ ಫ್ಯಾಶನ್ಸ್ ಮೂಲಕ ಭಾರತದಲ್ಲಿ ಪರವಾನಿಗೆ ಪಡೆಯಿತು. ಭಾರತದಲ್ಲಿ ಅದರ ಚಿಲ್ಲರೆ ಹೆಜ್ಜೆಗುರುತು 400ಕ್ಕೂ ಹೆಚ್ಚು ಬ್ರಾಂಡ್ ಸ್ಟೋರ್‌ಗಳನ್ನು ಮತ್ತು 2000 ಕ್ಕೂ ಹೆಚ್ಚು ಶಾಪ್-ಇನ್-ಶಾಪ್‌ಗಳನ್ನು ಭಾರತದ 200 ನಗರಗಳಲ್ಲಿ ಒಳಗೊಂಡಿದೆ.

ಯುಎಸ್‌ ಪೊಲೋ ಹೊರತಾಗಿ, ಅರವಿಂದ್ ಫ್ಯಾಶನ್ಸ್ ಭಾರತದಲ್ಲಿ Arrow, Tommy Hilfiger, Calvin Klein, Flying Machine, ಮತ್ತು Sephora ಮುಂತಾದ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳನ್ನು ಪರಿಚಯಿಸಿದೆ. ಯುಎಸ್‌ ಪೋಲೋ ಅಸ್ಸೆನ್. 1890 ರಲ್ಲಿ ಸ್ಥಾಪಿಸಲಾಗಿದೆ ಎಂದು ಕಂಪನಿ ಕುರಿತು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+