ಕೇರಳದಲ್ಲಿ ಟೆಕ್ಕಿ ರೇಪ್: ಕೆಲಸದಾಳುಗಳು ಸೆರೆ

ತಿರುವನಂತಪುರ, ಡಿ.3: ಬೆಂಗಳೂರು ಮೂಲದ 40 ವರ್ಷದ ಐಟಿ ಮಹಿಳಾ ಉದ್ಯೋಗಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಕಳೆದ ತಿಂಗಳ ಕೊನೆಯಲ್ಲಿ ಇಲ್ಲಿನ ಪೊಳಿಯಾರ್ ದ್ವೀಪ ರೆಸಾರ್ಟ್ ನಲ್ಲಿ ಟೆಕ್ಕಿ ಮೇಲೆ ಅತ್ಯಾಚಾರ ಎಸಗಲಾಗಿತ್ತು.

ಈಶಾನ್ಯ ರಾಜ್ಯಗಳಿಂದ ವಲಸೆ ಬಂದಿರುವ ಕೆಲಸಗಾರರೇ ಈ ಕೃತ್ಯ ಎಸಗಿದ್ದು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ನ.28ರಂದು ತಿರುವನಂತಪುರದಿಂದ ಸುಮಾರು 30-40 ಕಿ.ಮೀ ದೂರದಲ್ಲಿರುವ ಪೂವರ್ ನ ಫ್ಲೊಟೆಲ್ ಇಂಡಿಯಾ ಪೈ ಲಿ,ಗೆ ಸೇರಿರುವ ಸ್ಟಾರ್ ಶ್ರೇಣಿಯ ವಿಹಾರಧಾಮದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.

ಬಂಧಿತರಿಬ್ಬರು ಅಸ್ಸಾಂ ಮೂಲದವರಾಗಿದ್ದು ಏಜೆನ್ಸಿಯೊಂದರ ಮೂಲಕ ಹೌಸ್ ಕೀಪಿಂಗ್ ಉದ್ಯೋಗ ಪಡೆದವರಾಗಿದ್ದಾರೆ. ಆರೋಪಿಗಳಲ್ಲಿ ಒಬ್ಬ ಕೆಲಸಕ್ಕೆ ಸೇರಿ 2 ತಿಂಗಳಾಗಿದ್ದರೆ ಮತ್ತೊಬ್ಬ 2 ವರ್ಷದಿಂದ ಕೆಲಸದಲ್ಲಿದ್ದಾನೆ. ಮಹಿಲೆ ನೆಲೆಸಿದ್ದ ಕಾಟೇಜ್ ನ ಹಿಂಬಾಗಿಲ ಬೋಲ್ಟ್ ಹಾಗೂ ಸ್ಕ್ರೂಗಳನ್ನು ಸಡಿಲಗೊಳಿಸಿ ರೂಮಿನೊಳಗೆ ಇಬ್ಬರು ಅಡಗಿ ಕುಳಿತ್ತಿದ್ದಾರೆ.

Two arrested for allegedly raping IT professional at resort near Bangalore

ಕಂಪನಿಯ ಅಧಿಕೃತ ಪ್ರವಾಸಕ್ಕೆ ಬಂದಿದ್ದ ಮಹಿಳಾ ಟೆಕ್ಕಿ ಡಿನ್ನರ್ ಮುಗಿಸಿಕೊಂಡು ರೂಮಿಗೆ ಹಿಂತಿರುಗಿದಾಗ ಇಬ್ಬರು ದಾಳಿ ಮಾಡಿ ಅತ್ಯಾಚಾರ ಮಾಡಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಟೆಕ್ಕಿ ಸೇರಿದಂತೆ 30ಕ್ಕೂ ಅಧಿಕ ಐಟಿ ಉದ್ಯೋಗಿಗಳ ತಂಡ ಬೆಂಗಳೂರಿನಿಂದ ಕೇರಳಕ್ಕೆ ಬಂದಿದ್ದರು.

ಕೇರಳ ಪ್ರವಾಸೋದ್ಯಮ ಈ ವರ್ಷ ಡಲ್ ಹೊಡೆಯುತ್ತಿರುವುದರಿಂದ ಪರರಾಜ್ಯಗಳಿಂದ ಕಾರ್ಮಿಕರು, ಕೆಲಸಗಾರರನ್ನು ಕರೆಸಿಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಉತ್ತರ ಭಾರತ ಹಾಗೂ ಈಶಾನ್ಯ ರಾಜ್ಯಗಳಿಂದ ಉದ್ಯೋಗ ಅರಸಿ ಬಂದವರು ಇಲ್ಲಿ ನೆಲೆ ಕಂಡಿದ್ದಾರೆ. ಆದರೆ, ಸ್ಟಾರ್ ರೆಸಾರ್ಟ್ ನಲ್ಲಿ ಸುರಕ್ಷತೆ ಇಲ್ಲದಿರುವುದು ಆತಂಕಕಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+