ಟ್ವಿನ್‌ ಟ್ಯೂಬ್ ಟನಲ್‌ ಪ್ರಾಜೆಕ್ಟ್‌: ಬಿಬಿಎಂಪಿಯಿಂದ ಕಾಪಿ - ಪೇಸ್ಟ್‌ ಕೆಲಸಕ್ಕೆ 14.2 ಕೋಟಿ ರೂಪಾಯಿ ಖರ್ಚು ?!

ಬೆಂಗಳೂರಿನಲ್ಲಿ ಸಾರ್ವಜನಿಕರ ತೆರಿಗೆ ದುಡ್ಡನ್ನ ಬಿಬಿಎಂಪಿ ಬೇಕಾ ಬಿಟ್ಟಿ ಖರ್ಚು ಮಾಡುತ್ತದೆ. ಬಿಬಿಎಂಪಿಯಲ್ಲಿ ಕಾಮಗಾರಿ ನಡೆಯುವಾಗ ಭಾರೀ ಭ್ರಷ್ಟಾಚಾರ ನಡೆಯುತ್ತದೆ ಎನ್ನುವ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿವೆ. ಇದೀಗ ಈ ಆರೋಪಗಳಿಗೆ ಹೊಸ ಸೇರ್ಪಡೆ ಬೆಂಗಳೂರಿನ ಟ್ವಿನ್‌ ಟ್ಯೂಬ್‌ ಟನಲ್‌ ಪ್ಲಾನ್ (ಸುರಂಗ ಮಾರ್ಗ)ನಲ್ಲೂ ಇದೇ ರೀತಿ ದುಂದು ವೆಚ್ಚ ಮಾಡುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ.

ಬೆಂಗಳೂರಿನ ಪ್ರಮುಖ ಯೋಜನೆಗಳಲ್ಲಿ ಟ್ವಿನ್‌ ಟ್ಯೂಬ್‌ ಟನಲ್‌ ಯೋಜನೆಯೂ ಒಂದಾಗಿದೆ. ನಗರದಲ್ಲಿ ಹೆಚ್ಚಾಗುತ್ತಿರುವ ಟ್ರಾಫಿಕ್‌ ಜಾಮ್‌ ಕಂಟ್ರೋಲ್‌ ಮಾಡುವ ಉದ್ದೇಶದಿಂದ ಈ ಬೃಹತ್‌ ಪ್ಲಾನ್ ಹಾಕಿಕೊಳ್ಳಲಾಗಿದೆ. ಆದರೆ, ಇದರಲ್ಲಿ ಪ್ರಾರಂಭದಲ್ಲೇ ಕೋಟ್ಯಾಂತರ ರೂಪಾಯಿ ಅನವಶ್ಯಕವಾಗಿ ವೆಚ್ಚ ಮಾಡಿರುವ ಅನುಮಾನ ವ್ಯಕ್ತವಾಗಿದೆ.

Twin Tube Tunnel Project 14 2 Crore Spent on Copy-Paste work form Bbmp

ಟ್ವಿನ್‌ ಟ್ಯೂಬ್‌ ಟನಲ್‌ನ ಯೋಜನೆಯ ಪ್ರಾರಂಭದ ಹಂತದಲ್ಲಿ ಒಂದು ಸಣ್ಣ ಕಾಪಿ ಪೇಸ್ಟ್‌ನಂತಹ ಕೆಲಸಕ್ಕೆ ಕೋಟ್ಯಾಂತರ ರೂಪಾಯಿ ಖರ್ಚಾಗಿರುವ ಆರೋಪ ಕೇಳಿ ಬಂದಿದೆ. ನಗರದಲ್ಲಿ ಟ್ರಾಫಿಕ್‌ ಕಂಟ್ರೋಲ್‌ ಮಾಡುವ ಉದ್ದೇಶದಿಂದ ಈ ಪ್ಲಾನ್ ಹಾಕಿಕೊಳ್ಳಲಾಗಿದೆ. ಈ ಟ್ವಿನ್‌ ಟ್ಯೂಬ್‌ ಟನಲ್‌ ಯೋಜನೆ ಜಾರಿ ಮಾಡುವುದಕ್ಕೆ ಈಗಾಗಲೇ ಬಿಬಿಎಂಪಿಯು ಬರೋಬ್ಬರಿ 8 ಸಾವಿರ ಕೋಟಿ ರೂಪಾಯಿ ಸಾಲದ ಮೊರೆಯೂ ಹೋಗಿದೆ.

ಈ ಯೋಜನೆಯನ್ನು ಸಾರ್ವಜನಿಕ - ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ನಿರ್ಮಾಣದ ವೆಚ್ಚವು ಖಾಸಗಿ ಹಾಗೂ ಬಿಬಿಎಂಪಿ ಸಹಭಾಗಿತ್ವದಲ್ಲಿ ನಡೆಯಲಿದೆ. ಅಂದರೆ ವೆಚ್ಚವು 60:40 ಅನುಪಾತದಲ್ಲಿ ನಡೆಯಲಿದೆ.

Twin Tube Tunnel Project 14 2 Crore Spent on Copy-Paste work form Bbmp

ಈ ಯೋಜನೆಯ ಪ್ರಾರಂಭದ ಹಂತದಲ್ಲೇ ಬರೋಬ್ಬರಿ 14 ಕೋಟಿ ರೂಪಾಯಿಯನ್ನು ನೀರಿನಲ್ಲಿ ಹೋಮ ಮಾಡಿರುವ ಆರೋಪ ಕೇಳಿ ಬಂದಿದೆ. ಅದರ ವಿವರ ಮುಂದಿದೆ. ಹೊಸ ಯೋಜನೆಯು ಪೂರ್ವ-ಪಶ್ಚಿಮ ಕಾರಿಡಾರ್‌ ಸುರಂಗ ಮಾರ್ಗವಾಗಿದೆ. ನಗರದ ಕೆ.ಆರ್‌.ಪುರದಿಂದ ಜವಾಹರಲಾಲ್‌ ನೆಹರೂ ಪಾರ್ಕ್‌, ಸಿ.ವಿ. ರಾಮನ್‌ ಆಸ್ಪತ್ರೆ, ಇಂದಿರಾನಗರ, ದೊಮ್ಮಲೂರು, ಲಾಲ್‌ಬಾಗ್‌, ನ್ಯಾಷನಲ್‌ ಕಾಲೇಜು, ಚಾಮರಾಜಪೇಟೆ, ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಹಾಗೂ ನಾಯಂಡಹಳ್ಳಿ ಬಳಿಯ ನೈಸ್‌ ರಸ್ತೆ ಜಂಕ್ಷನ್‌ವರೆಗೆ ಈ ಸುರಂಗ ನಿರ್ಮಾಣವಾಗಲಿದೆ.

ಐದು ಪಥಗಳಾಗಿ ಈ ಟ್ವಿನ್‌ ಟ್ಯೂಬ್‌ ಟನಲ್‌ ಅನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಮೇಲೆ ಎರಡು ಹಾಗೂ ಕೆಳಗೆ ಮೂರು ಪಥಗಳು ಬರಲಿವೆ. ಈ ಮಾರ್ಗದಲ್ಲಿ ಪ್ರತಿ ಗಂಟೆಗೆ ಸುಮಾರು 4,500 ವಾಹನಗಳು ಸುಗಮವಾಗಿ ಸಂಚರಿಸಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇಂತಹ ಮಹತ್ವದ ಯೋಜನೆಯಲ್ಲಿ ಪ್ರಾರಂಭದಲ್ಲೇ ಭಾರೀ ಅವ್ಯವಹಾರ ನಡೆದಿರುವ ಆರೋಪಗಳು ಕೇಳಿ ಬಂದಿವೆ.

14.2 ಕೋಟಿ ರೂಪಾಯಿ ವ್ಯರ್ಥ: ಬೆಂಗಳೂರಿನಲ್ಲಿ ಟ್ವಿನ್‌ ಟ್ಯೂಬ್‌ ಯೋಜನೆ ಜಾರಿ ಮಾಡುವ ಸಂದರ್ಭದಲ್ಲಿ ಡಿಪಿಆರ್ (Detailed Project Report) ಮಾಡುವುದಕ್ಕೆ ಹಾಗೂ ಒಂದೇ ರೀತಿಯ ಕೆಲಸಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಸಂಸದ ಪಿ.ಸಿ ಮೋಹನ್‌ ಅವರು ಈ ಯೋಜನೆಯ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನ ನೀರಿನಂತೆ ಹಾಗೂ ಅನವಶ್ಯಕವಾಗಿ ಖರ್ಚು ಮಾಡಲಾಗಿದೆ ಅಂತ ಆರೋಪ ಮಾಡಿದ್ದಾರೆ.

ಬೆಂಗಳೂರಿನ ಸುರಂಗ ರಸ್ತೆ ಯೋಜನೆಗೆ ಬಿಬಿಎಂಪಿ ಬರೋಬ್ಬರಿ ಪ್ರಾರಂಭಿಕ ಹಂತದಲ್ಲೇ 14.2 ಕೋಟಿ ರೂಪಾಯಿ ಖರ್ಚು ಮಾಡಿದೆ. ಡಿಪಿಆರ್‌ಗಾಗಿ ರೋಡಿಕ್ ಕನ್ಸಲ್ಟೆಂಟ್ಸ್‌ಗೆ ಬರೋಬ್ಬರಿ 9.5 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಅಲ್ಲದೆ ಯೋಜನೆಯ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಆಲ್ಟಿನೋಕ್‌ಗೆ 4.7 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ ಎರಡೂ ಅಧ್ಯಯನಗಳು ಒಂದೇ ವ್ಯಾಪ್ತಿಗೆ ಬರುತ್ತವೆ. ಕಟ್-ಕಾಪಿ-ಪೇಸ್ಟ್‌ ಕೆಲಸಕ್ಕಾಗಿ ತೆರಿಗೆದಾರರ ದುಡ್ಡು 14.2 ಕೋಟಿ ರೂಪಾಯಿಯನ್ನು ಪೋಲು ಮಾಡಲಾಗಿದೆ ಅಂತ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+