Namma Metro: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ
ಬೆಂಗಳೂರು, ಮಾರ್ಚ್ 03: ಉದ್ಯಾನ ನಗರಿ ಬೆಂಗಳೂರಿನ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ. ಸುಮಾರು 20 ನಿಮಿಷದಿಂದ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್)ಕ್ಕೆ ರೈಲುಗಳು ಬಂದಿಲ್ಲ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ.
ಸೋಮವಾರ 12 ಗಂಟೆ ಸುಮಾರಿಗೆ ಚಲ್ಲಘಟ್ಟ-ವೈಟ್ ಫೀಲ್ಡ್ ನಡುವಿನ ನಮ್ಮ ಮೆಟ್ರೋ ನೇರಳೆ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಈ ಕುರಿತು ಹಲವಾರು ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಬಂದಿವೆ.

ಪ್ರಯಾಣಿಕರು ನೀಡುವ ಮಾಹಿತಿಯಂತೆ ಮಟ್ರೋ ರೈಲಿನ ತಾಂತ್ರಿಕ ದೋಷದ ಕಾರಣ ಅತ್ತಿಗುಪ್ಪೆ ನಿಲ್ದಾಣದಲ್ಲಿ ರೈಲು ನಿಂತಿದೆ. ಆದ್ದರಿಂದ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದ ಕಡೆಗೆ ರೈಲು ಸಾಗುತ್ತಿಲ್ಲ.
ಪ್ರಯಾಣಿಕರ ಟ್ವೀಟ್
ಕಳೆದ 30 ನಿಮಿಷದಿಂದ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ವೈಟ್ ಫೀಲ್ಡ್ ಕಡೆ ಹೋಗುವ ರೈಲು ಇನ್ನೂ ಬಂದಿಲ್ಲ, ಇಲ್ಲಿ ಹೇಳವವರು ಕೇಳುವವರು ಯಾರು ಇಲ್ಲ?
— ಗುರುದೇವ್ ನಾರಾಯಣಕುಮಾರ್(GURUDEV) (@Gurudevnk16) March 3, 2025
ದರ ಹೆಚ್ಚಾದ ಮೇಲೆ ಮೆಟ್ರೋ ಸೇವೆ ಅವ್ಯವಸ್ಥೆಯ ಆಗರವಾಗಿದೆ.@NammaMetro_ @MDNammaMetro @DKShivakumar @osd_cmkarnataka @OfficialBMRCL pic.twitter.com/uXqLDtEz1A
ಮೆಜೆಸ್ಟಿಕ್‌ನಿಂದ ವೈಟ್‌ಫೀಲ್ಡ್ ಕಡೆಗೆ ಸಂಚಾರ ನಡೆಸುವ ಪ್ರಯಾಣಿಕರು ರೈಲಿಗಾಗಿ ಮೆಜೆಸ್ಟಿಕ್‌ನಲ್ಲಿ ಕಾಯುತ್ತಿದ್ದಾರೆ. ಆದರೆ ತಾಂತ್ರಿಕ ದೋಷ ಸರಿಯಾಗಿ ರೈಲು ಯಾವಾಗ ಬರಲಿದೆ? ಎಂಬ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ.
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಮಾತ್ರ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹಸಿರು ಮಾರ್ಗದಲ್ಲಿ ಎಂದಿನಂತೆ ರೈಲುಗಳು ಸಂಚಾರ ನಡೆಸುತ್ತಿವೆ. ರೈಲು ಸಂಚಾರ ವ್ಯತ್ಯಯದ ಕುರಿತು ನಮ್ಮ ಮೆಟ್ರೋ ಯಾವುದೇ ಮಾಹಿತಿಯನ್ನು ಇದುವರೆಗೂ ನೀಡಿಲ್ಲ.












Click it and Unblock the Notifications