Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ: ಬರೀ ಎರಡು ದಿನಕ್ಕೆ ಪೊಲೀಸರು ಸಂಗ್ರಹಿಸಿದ ದಂಡ ಎಷ್ಟು ಗೊತ್ತಾ?

Traffic Violation Fine: ಬೆಂಗಳೂರಿನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುವವರಿಗೆ ಸಂಚಾರ ಪೊಲೀಸರು ವಿಶೇಷ ಅಭಿಯಾನ ನಡೆಸಿ ದಂಡ ವಸೂಲಿ ಮಾಡಿದ್ದಾರೆ. ಹಾಗಾದರೆ ಸೋಮವಾರ ಹಾಗೂ ಮಂಗಳವಾರ (ಡಿಸೆಂಬರ್ 23, 24) ವಸೂಲಿ ಮಾಡಿದ ದಂಡ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕ್ರಿಸ್‌ ಮಸ್‌ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವುದನ್ನು ತಡೆಯಲು ಬೆಂಗಳೂರು ಸಂಚಾರ ಪೊಲೀಸರು ಕಣ್ಗಾವಲು ಇರಿಸಿದ್ದಾರೆ. ಸತತ ಎರಡು ದಿನದಿಂದ ನಗರದ ವಿವಿಧ ಕಡೆಗಳಲ್ಲಿ ವಿಶೇಷ ಅಭಿಯಾನವನ್ನು ಕೈಗೊಂಡು ನಿಯಮ ಉಲ್ಲಂಘಿಸುವವರ ಮೇಲೆ ದಂಡಾಸ್ತ್ರದ ಪ್ರಯೋಗ ಮಾಡುತ್ತಿದ್ದಾರೆ.

Traffic Violation in Bengaluru Police Collect 18 Lakh Fines in Just Two Days

ಇನ್ನು ಸೋಮವಾರ ಹಾಗೂ ಮಂಗಳವಾರ ತಲಾ 5 ಗಂಟೆಗಳ ಕಾಲ ತಪಾಸಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 18,00,000 ಲಕ್ಷ ರೂಪಾಯಿ ದಂಡವನ್ನು ಸಂಗ್ರಹಿಸಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಬೆಂಗಳೂರಿನ ಸಂಚಾರ ವಿಭಾಗದ ಜಂಟಿ ಆಯುಕ್ತರ ಸೂಚನೆ ಮೇರೆಗೆ ಎಲ್ಲಾ ಸಂಚಾರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ. ಆಯಾ ಸಂಚಾರ ಠಾಣೆ ವ್ಯಾಪ್ತಿಯ ಪ್ರಮುಖ ವೃತ್ತ, ರಸ್ತೆಗಳಲ್ಲಿ ವಿಶೇಷ ತಪಾಸಣೆಗಳನ್ನು ಮಾಡಲಾಗುತ್ತಿದೆ.

ಅದರಲ್ಲೂ ರಸ್ತೆ ನಿಯಮ ಉಲ್ಲಂಘನೆ ಟ್ರಿಪಲ್‌ ರೈಡಿಂಗ್‌, ಹೆಲ್ಮೆಟ್‌ ರಹಿತ ಚಾಲನೆ, ಫುಟ್‌ಪಾತ್‌ ಮೇಲೆ ವಾಹನ ನಿಲುಗಡೆ, ನೋ ಪಾರ್ಕಿಂಗ್‌ ಪ್ರದೇಶದಲ್ಲಿ ನಿಲುಗಡೆ, ಫುಟ್‌ಪಾತ್‌ಗಳ ಮೇಲೆ ವಾಹನಸಂಚಾರದಂತಹ ನಿಯಮ ಉಲ್ಲಂಘನೆಗಳಿಗೆ ದಂಡ ಹಾಕಲಾಗುತ್ತಿದೆ. ಅಷ್ಟೇ ಅಲ್ಲದೆ, ವಾಹನ ಚಾಲನೆ ಮಾಡುವಾಗಲೇ ಮೊಬೈಲ್‌ನಲ್ಲಿ ಮಾತನಾಡುವುದು, ಏಕಮುಖ ರಸ್ತೆಯಲ್ಲಿ ಸಂಚಾರ, ಕಾರಿನಲ್ಲಿ ಸೀಟ್‌ ಬೆಲ್ಟ್‌ ಹಾಕದೇ ಸಂಚರಿಸುವವರ ಮೇಲೂ ನಿಗಾ ಇರಿಸಿ ದಂಡ ಹಾಕಲಾಗುತ್ತಿದೆ.

ಬೆಂಗಳೂರು ಸಂಚಾರ ಪೊಲೀಸರು ಸೋಮವಾರ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ವಿಶೇಷ ಸಂಚಾರ ನಡೆಸಿ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ₹5.35 ಲಕ್ಷ ದಂಡ ಸಗ್ರಹಿಸಿದ್ದಾರೆ. ದಂಡದ ಸಿಂಹಪಾಲು ಕ್ರಮವಾಗಿ ಪ್ರವೇಶ ನಿಷೇಧ 2.31 ಲಕ್ಷ ಮತ್ತು ಏಕಮುಖ ಉಲ್ಲಂಘನೆ ಮಾಡಿದವರಿಗೆ 1.955 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗಿದೆ.

ಮಂಗಳವಾರ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಸಂಚಾರ ನಿಯಮ ಉಲ್ಲಂಘನೆ ವಿರುದ್ಧದ ವಿಶೇಷ ಅಭಿಯಾನದಲ್ಲಿ ಬೆಂಗಳೂರು ಸಂಚಾರ ಪೊಲೀಸರು 6.395 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದ್ದಾರೆ. 372 ಸವಾರರಿಂದ ನೋ ಎಂಟ್ರಿ ಉಲ್ಲಂಘನೆಗಳಿಗಾಗಿ 1.88 ಲಕ್ಷ ರೂಪಾಯಿ, ಏಕಮುಖವಾಗಿ ಚಾಲನೆ ಮಾಡಿದ 311 ಸವಾರರ ಬಳಿ 1.56 ಲಕ್ಷ ರೂಪಾಯಿ, ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದ 64 ಪ್ರಕರಣಗಳಲ್ಲಿ 1.02 ಲಕ್ಷ ರೂಪಾಯಿ ಮತ್ತು 178 ನೋ ಪಾರ್ಕಿಂಗ್ ಉಲ್ಲಂಘಿಸಿದವರಿಂದ 90,500 ವಸೂಲು ಮಾಡಲಾಗಿದೆ.

ಫುಟ್‌ಪಾತ್‌ನಲ್ಲಿ ಟ್ರಿಪಲ್ ರೈಡಿಂಗ್ ಮತ್ತು ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆ ಮಾಡಿದ್ದಕ್ಕಾಗಿ ಸಂಚಾರ ಉಲ್ಲಂಘನೆ 1,130 ಪ್ರಕರಣ ದಾಖಲಿಸಿದೆ. ಒಟ್ಟು 6,685 ವಾಹನಗಳನ್ನು ಪರಿಶೀಲಿಸಿದ ನಂತರ 120 ಪಾನಮತ್ತ ಚಾಲಕರ ಮೇಲೆ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ. ಈ ಮೂಲಕ ಎರಡೂ ದಿನದಲ್ಲಿಯೇ ಸುಮಾರು 18 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಜೊತೆಗೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ವಿಶೇಷ ಅಭಿಯಾನಗಳು ನಡೆದಿವೆ ಎಂದು ಹಿಂದೂಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+