Airport Road: ಅಪಘಾತ ಪೀಡಿತ ಏರ್‌ಪೋರ್ಟ್‌ ರಸ್ತೆಯಲ್ಲಿ ಬಂತು ಹೊಸ ರೂಲ್ಸ್!

ಬೆಂಗಳೂರು, ಜುಲೈ. 16: ಸಿಲಿಕಾನ್ ಸಿಟಿಯ ಹೆಚ್ಚು ಟ್ರಾಫಿಕ್ ಜಾಮ್ ಪೀಡಿತ ರಸ್ತೆಗಳಲ್ಲಿ ಏರ್‌ಪೋರ್ಟ್ ರೋಡ್ ಕೂಡ ಒಂದು. ಎಷ್ಟು ನಿಯಮಗಳನ್ನು ಹಾಕಿದರೂ ಕೂಡ ಅಪಘಾತ ಮತ್ತು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದೇ ವೇಳೆ ಸಂಚಾರ ಪೊಲೀಸರು ಹೊಸ ರೂಲ್ಸ್ ಹಾಕಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ಲೇನ್ ಅಶಿಸ್ತು ನಿವಾರಿಸಲು, ಲೇನ್ ನಿಯಮಗಳನ್ನು ಅನುಸರಿಸದವರಿಗೆ ದಂಡ ವಿಧಿಸಲಾಗುವುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಾಹನಗಳ ವೇಗದಿಂದಾಗಿ ವಿಮಾನ ನಿಲ್ದಾಣದ ರಸ್ತೆಯಲ್ಲಿ ಅನೇಕ ಅಪಘಾತಗಳು ವರದಿಯಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

Traffic Police To Fine Tose Who Skip Lane Discipline On Airport Road

ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ರಸ್ತೆ (ಬಿಬಿ ರಸ್ತೆ - ಎನ್‌ಎಚ್ -44) ನಲ್ಲಿರುವ ಎಲ್ಲಾ ವಾಹನಗಳ ಚಾಲಕರು ತಮ್ಮ ವಾಹನಗಳನ್ನು ನಿಗದಿತ ಲೇನ್‌ನಲ್ಲಿ ಚಲಾಯಿಸಬೇಕು ಎಂದು ಬೆಂಗಳೂರು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ತಪ್ಪದೆ ದಂಡ ವಿಧಿಸಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.

ಎಲ್ಲಾ ಭಾರೀ ವಾಹನಗಳು, ಟ್ರಕ್‌ಗಳು ಮತ್ತು ದ್ವಿಚಕ್ರ ವಾಹನಗಳು ಗಂಟೆಗೆ 50 ಕಿಲೋಮೀಟರ್‌ ವೇಗವನ್ನು ದಾಟಬಾರದು. ಆದರೆ, ಕಾರುಗಳು ಗಂಟೆಗೆ 80 ಕಿಲೋಮೀಟರ್‌ ವೇಗದಲ್ಲಿ ಚಲಾಯಿಸಬಹುದು. ಅದಕ್ಕಿಂತ ಹೆಚ್ಚು ವೇಗಕ್ಕೆ ಅನುಮತಿಸುವುದಿಲ್ಲ. ನಿಗದಿತ ಮಾರ್ಗದಲ್ಲಿ ಸಂಚರಿಸದವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು.

Traffic Police To Fine Tose Who Skip Lane Discipline On Airport Road

ಎಂಟು ಎಐ ಚಾಲಿತ ಸ್ಪೀಡ್ ಟ್ರ್ಯಾಪ್ ಕ್ಯಾಮೆರಾ

ಈ ಹಿಂದೆ ಬೆಂಗಳೂರು ಸಂಚಾರ ಪೊಲೀಸರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಎಂಟು ಎಐ ಚಾಲಿತ ಸ್ಪೀಡ್ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಬಳ್ಳಾರಿ ರಸ್ತೆಯ ಎಲಿವೇಟೆಡ್ ಕಾರಿಡಾರ್‌ನಲ್ಲಿ ಅನುಮತಿಸಲಾಗಿರುವ 80 ಕಿಮೀ ವೇಗದ ಮಿತಿಯನ್ನು ಮೀರಿದ ವಾಹನಗಳನ್ನು ಪತ್ತೆಹಚ್ಚಲು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಬೆಂಗಳೂರು ಪೊಲೀಸರ ಪ್ರಕಾರ, ಬೆಂಗಳೂರಿನಲ್ಲಿ ಸಂಭವಿಸಿದ ಶೇಕಡಾ ಒಂಬತ್ತು ಪ್ರತಿಶತ ಅಪಘಾತಗಳು ವಿಮಾನ ನಿಲ್ದಾಣ ರಸ್ತೆಯಲ್ಲಿ ವರದಿಯಾಗಿವೆ. ಬಳ್ಳಾರಿ ರಸ್ತೆಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ರಸ್ತೆಯು ನಗರದಲ್ಲಿ ಅತಿ ಹೆಚ್ಚು ಅಪಘಾತಕ್ಕೀಡಾಗುವ ಪ್ರದೇಶವಾಗಿದ್ದು, ವಾಹನ ಸವಾರರು ಆಗಾಗ್ಗೆ ವೇಗದ ಮಿತಿಯನ್ನು ಮೀರುತ್ತಾರೆ.

ವಿಮಾನ ನಿಲ್ದಾಣದ ರಸ್ತೆಗಳಲ್ಲಿ ಅತಿ ವೇಗದ ಚಾಲನೆ, ನಿಯಮ ಮೀರುವ ದ್ವಿಚಕ್ರ ವಾಹನಗಳಿಗೆ 1000 ರೂಪಾಯಿ ದಂಡ ವಿಧಿಸಲಾಗುತ್ತದೆ. ಅತಿ ವೇಗದ ಕಾರುಗಳಿಗೆ 2000 ರೂಪಾಯಿ ದಂಡ ವಿಧಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+