ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಬೈಕ್ ಸಂಚಾರ ನಿಷೇಧ?
ಬೆಂಗಳೂರು, ಅಕ್ಟೋಬರ್ 26 : ಎಲೆಕ್ಟ್ರಾನಿಕ್ ಸಿಟಿಯ ಎಕ್ಸ್‌ಪ್ರೆಸ್ ವೇ ಫ್ಲೈ ಓವರ್ ಮೇಲೆ ಬೈಕ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಕಳೆದ ವಾರವಷ್ಟೇ ಇಬ್ಬರು ಬೈಕ್ ಸವಾರರು ಫ್ಲೈ ಓವರ್ ಮೇಲಿನಿಂದ ಬಿದ್ದು ಮೃತಪಟ್ಟಿದ್ದರು.
ಬೆಂಗಳೂರು ಸಂಚಾರಿ ಪೊಲೀಸರು ಹೊಸೂರು ರಸ್ತೆ-ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಬೈಕ್ ಸಂಚಾರ ನಿರ್ಬಂಧಿಸುವ ಕುರಿತು ಗಂಭೀರ ಚಿಂತನೆ ನಡೆಸಿದ್ದಾರೆ. ಫ್ಲೈ ಓವರ್ ರಚನೆ ಬಗ್ಗೆ ಪೊಲೀಸರು ಅಧ್ಯಯನ ನಡೆಸಲಿದ್ದು ನಂತರ ನಿರ್ಧಾರ ಕೈಗೊಳ್ಳಲಿದ್ದಾರೆ.

ಫ್ಲೈ ಓವರ್ ಮೇಲೆ ಸರಣಿ ಬೈಕ್ ಅಪಘಾತಗಳು ನಡೆಯುತ್ತಿವೆ. ಇದು ಬೈಕ್ ಸವಾರರಿಗೆ ಸುರಕ್ಷಿತವಲ್ಲ ಎಂದು ಪೊಲೀಸರು ನಿರ್ಧರಿಸಿದ್ದಾರೆ. ಆದ್ದರಿಂದ, ಫ್ಲೈ ಓವರ್ ಮೇಲೆ ಬೈಕ್ ಸಂಚಾರ ನಿರ್ಬಂಧಿಸಲು ಚಿಂತನೆ ನಡೆಸಲಾಗುತ್ತಿದೆ.
ಅಕ್ಟೋಬರ್ 14ರಂದು ಫ್ಲೈ ಓವರ್ ಮೇಲಿನ ಗಾರ್ವೆಬಾವಿಪಾಳ್ಯ ಬಳಿ ಊಬರ್ ಟ್ಯಾಕ್ಸಿ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಬೈಕ್‌ನಲ್ಲಿದ್ದ ಇಬ್ಬರು ಫ್ಲೈ ಓವರ್‌ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು. ಈ ವರ್ಷದಲ್ಲೇ ಫ್ಲೈ ಓವರ್ ಮೇಲೆ ಮೂರು ಬೈಕ್ ಅಪಘಾತಗಳು ನಡೆದಿವೆ.












Click it and Unblock the Notifications