ವೀಕೆಂಡ್‌ ಮೂಡ್‌ನಲ್ಲಿದ್ದವರಿಗೆ ಪೊಲೀಸರಿಂದ ಶಾಕ್‌!

ನಿನ್ನೆ ವೀಕೆಂಡ್‌ ಮೂಡ್‌ನಲ್ಲಿದ್ದ ಸಿಲಿಕಾನ್‌ ಸಿಟಿ ಮಂದಿಗೆ ಪೊಲೀಸರು ಶಾಕ್‌ ನೀಡಿದ್ದಾರೆ. ಜಾಲಿಯಾಗಿ ಸುತ್ತಾಡಿಕೊಂಡು ಹೋಗೋಣ ಎಂದು ವಾಹನಗಳಲ್ಲಿ ಬಂದಿದ್ದವರಿಗೆ ಟೋಯಿಂಗ್‌ ಭೂತ ಹೆಗಲೇರಿತ್ತು. ಹೌದು ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್‌ ಪೊಲೀಸರು ದಿಢೀರನೆ ಟೋಯಿಂಗ್‌ ಶುರು ಮಾಡಿದ್ದಾರೆ. ನಿನ್ನೆ ಮೆಜೆಸ್ಟಿಕ್‌ ಸುತ್ತಮುತ್ತಲೂ ಈ ಟೋಯಿಂಗ್ ಸಖತ್‌ ಸದ್ದು ಮಾಡಿದೆ.

ಸರಿಸುಮಾರು ಎರಡು ವರ್ಷಗಳಿಂದ ಮರೆಯಾಗಿದ್ದ ಟೋಯಿಂಗ್‌ ವಾಹನಗಳನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಅದರಂತೆ ನೋ ಪಾರ್ಕಿಂಗ್‌ ಜಾಗಗಳಲ್ಲಿ ನಿಲ್ಲಿಸಿದ ವಾಹನಗಳನ್ನು ಪೊಲೀಸರು ಎತ್ತಾಕೊಂಡು ಹೋಗಿದ್ದಾರೆ. ಉಪ್ಪಾರಪೇಟೆ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಬರೋಬ್ಬರಿ 70ಕ್ಕೂ ಹೆಚ್ಚು ವಾಹನಗಳ ವಿರುದ್ಧ ಕೇಸ್‌ ಕೂಡ ಹಾಕಿದ್ದಾರೆ.

Traffic Police Have Started Towing In Bengaluru

ಮೊನ್ನೆ ಶನಿವಾರದಿಂದ ಮತ್ತೆ ಟೋಯಿಂಗ್‌ ಶುರು ಮಾಡಿರುವ ಸಂಚಾರ ಪೊಲೀಸರು ಮೊದಲ ದಿನವೇ 30ಕ್ಕೂ ಹೆಚ್ಚು ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಕೊಂಡೊಯ್ದಿದ್ದರು.

ಮೆಜೆಸ್ಟಿಕ್‌ ಸುತ್ತಮುತ್ತಲೂ ಟೋಯಿಂಗ್‌ ಮಾಡಲೆಂದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಎರಡು ಟೋಯಿಂಗ್‌ ವಾಹನಗಳನ್ನು ಪೊಲೀಸರಿಗೆ ನೀಡಿದೆ. ಇನ್ನು ಪೊಲೀಸರು ಮೊದಲಿಗೆ ಮೈಕ್‌ ಮೂಲಕ ವಾಹನ ಮಾಲೀಕರಿಗೆ ಸೂಚನೆ ನೀಡುತ್ತಾರೆ. ಆದರೂ ನೋ ಪಾರ್ಕಿಂಗ್‌ ಸ್ಥಳದಲ್ಲೇ ವಾಹನ ನಿಲ್ಲಿಸಿದ್ದರೆ ಅವುಗಳನ್ನು ಟೋಯಿಂಗ್‌ ಮಾಡುವ ಕೆಲಸ ನಡೆಯುತ್ತಿದೆ. ಸದ್ಯ ಟೋಯಿಂಗ್‌ಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಗಾಂಧಿನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿದ್ದ ವಾಹನಗಳನ್ನು ತೆರವು ಮಾಡುವ ಉದ್ದೇಶದಿಂದ ಟೋಯಿಂಗ್‌ ಅನ್ನು ಮತ್ತೆ ಶುರು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ನಗರದ ಫ್ರೀಡಂ ಪಾರ್ಕ್‌ನಲ್ಲಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿರುವ ಕಾಂಪ್ಲೆಕ್ಸ್‌ನಲ್ಲೇ ವಾಹನ ನಿಲ್ಲಿಸಲು ಸೂಚಿಸಲಾಗಿದೆ.

Traffic Police Have Started Towing In Bengaluru

ಇದರ ಹೊರತಾಗಿಯೂ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವ ಮೂಲಕ ಸಂಚಾರಕ್ಕೆ ಕಿರಿಕಿರಿ ಉಂಟು ಮಾಡಲಾಗುತ್ತಿದೆ. ಹಾಗಾಗಿ ರೂಲ್ಸ್‌ ಬ್ರೇಕ್‌ ಮಾಡಿದರೆ ದಂಡ ವಿಧಿಸುವುದಾಗಿ ಪೊಲೀಸರು ವಾರ್ನ್‌ ಮಾಡಿದ್ದಾರೆ. ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ವಾಹನ ಟೋಯಿಂಗ್‌ ಅನ್ನು ಪೊಲೀಸರು ಸದ್ದಿಲ್ಲದೆ ಮತ್ತೆ ಶುರು ಮಾಡಿದ್ದಾರೆ. ಇದರಿಂದ ವಾಹನ ಮಾಲೀಕರಿಗೆ ಮತ್ತೆ ತಲೆನೋವು ಶುರುವಾಗಿದೆ. ನಗರದ ಕೇಂದ್ರಭಾಗವಾದ ಮೆಜೆಸ್ಟಿಕ್‌ ಸುತ್ತಮುತ್ತ ಈಗಾಗಲೇ ಪೊಲೀಸರ ಟೋಯಿಂಗ್‌ ವಾಹನಗಳು ಅಖಾಡಕ್ಕೆ ಇಳಿದಿವೆ ಎಂದು ವರದಿಯಾಗಿದೆ.

ಕೆಂಪೇಗೌಡ ಬಸ್‌ ನಿಲ್ದಾಣ (ಮೆಜೆಸ್ಟಿಕ್) ಅಂದ ಕೂಡಲೇ ಅಲ್ಲಿ ಜನಜಂಗುಳಿ, ವಾಹನ ದಟ್ಟಣೆಗೆ ಹೆಸರುವಾಸಿ. ಹಾಗಾಗಿ, ಟ್ರಾಫಿಕ್‌ ಕಂಟ್ರೋಲ್‌ ಮಾಡುವ ಉದ್ದೇಶದ ಮೇರೆಗೆ ಟೋಯಿಂಗ್‌ ವಾಹನಗಳು ಕಾರ್ಯಾಚರಣೆಗೆ ಇಳಿದಿವೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಉಪ್ಪಾರಪೇಟೆ ಪೊಲೀಸ್‌ ಸ್ಟೇಷನ್‌ ಲಿಮಿಟ್‌ನಲ್ಲಿ ಮಾತ್ರ ನೋ ಪಾರ್ಕಿಂಗ್‌ ವಾಹನಗಳ ಟೋಯಿಂಗ್‌ ಶುರುವಾಗಿದೆ.

ಇನ್ನು ಈ ಭಾಗದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಹಾಗಾಗಿ ಈ ಒಂದು ಏರಿಯಾದಲ್ಲಿ ಮಾತ್ರವೇ ಟೋಯಿಂಗ್‌ ಶುರು ಮಾಡಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ. ಈಗಾಗಲೇ ಟೋಯಿಂಗ್‌ ವಾಹನಗಳ ಎತ್ತಂಗಡಿ ಕೆಲಸ ಶುರುವಾಗಿದ್ದು, ಟೋಯಿಂಗ್ ವಾಹನದಲ್ಲಿ ಒಬ್ಬರು ಎಎಸ್‌ಐ ಹಾಗೂ ಟೋಯಿಂಗ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+