ಬೆಂಗಳೂರಲ್ಲಿ ಬೈಕ್ ಸವಾರನಿಗೆ 23 ಸಾವಿರ ರೂ. ದಂಡ!
ಬೆಂಗಳೂರು, ಡಿಸೆಂಬರ್ 11: ಬೆಂಗಳೂರು ನಗರದಲ್ಲಿ ಸಂಚಾರಿ ಪೊಲೀಸರು ಬೈಕ್ ಸವಾರನೊಬ್ಬನಿಗೆ 23,000 ರೂ. ದಂಡವನ್ನು ಹಾಕಿದ್ದಾರೆ. ಬೈಕ್ ಸವಾರನನ್ನು ಸಂಚಾರಿ ನಿಯಮದ ಅರಿವು ತರಬೇತಿಗೆ ಕಳಿಸಲಾಗಿದೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಸಂಚಾರಿ ಪೊಲೀಸ್ ಪೂರ್ವ ವಿಭಾಗದ ಹಲಸೂರು ಸಂಚಾರಿ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬಿ. ಜಿ. ಮ್ಯಾಥ್ಯೂ ಬೈಕ್ ಸವಾರನನ್ನು ಹಿಡಿದಿದ್ದಾರೆ. ಸಿ. ಕೆ. ಡಿ -8524 ನಂಬರ್‌ನ ಸವಾರನ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಆಗ ಬೈಕ್ ಸವಾರ 27 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ಬೈಕ್ ಮಾಲೀಕನಿಗೆ ಪೊಲೀಸರು 23,000 ರೂ. ದಂಡವನ್ನು ಹಾಕಿದರು. ಈ ಕುರಿತು ಸಂಚಾರಿ ಪೊಲೀಸರು ಟ್ವೀಟ್ ಮಾಡಿದ್ದಾರೆ.

ದಂಡವನ್ನು ಹಾಕಿದ ಬಳಿಕ ಬೈಕ್ ಸವಾರನನ್ನು ಸಂಚಾರಿ ನಿಯಮಗಳ ಅರಿವು ತರಬೇತಿಯನ್ನು ಪಡೆಯಲು ಕಳುಹಿಸಲಾಗಿದೆ. ತರಬೇತಿ ಪಡೆದು ಆತನಿಗೆ ನಿಯಮಗಳು ತಿಳಿದಿದೆ ಎಂದು ಪ್ರಮಾಣ ಪತ್ರ ನೀಡಿದ ಬಳಿಕ ವಾಹವನ್ನು ವಾಪಸ್ ನೀಡಲಾಗುತ್ತದೆ.
ಇಂದು ಸಂಚಾರ ಪೂರ್ವ ವಿಭಾಗದ ಹಲಸೂರು ಸಂಚಾರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀಮತಿ. ಬಿಜಿ ಮ್ಯಾಥ್ಯೂ ರವರು ಸುಮಾರು 27 ಬಾರಿ ಸಂಚಾರ ಉಲ್ಲಂಘನೆ ಮಾಡಿದ್ದ ಸಿ.ಕೆ.ಡಿ -8524 ದ್ವಿ-ಚಕ್ರ ವಾಹನದ ಮಾಲೀಕರಿಂದ ರೂ.23,000/ ದಂಡವನ್ನು ಕಟ್ಟಿಸಿದರು. ಸದರಿಯವರನ್ನು ಸಂಚಾರ ಅರಿವು ತರಬೇತಿಯನ್ನು ಪಡೆಯಲು ಕಳುಹಿಸಲಾಯಿತು. pic.twitter.com/HTcxxkalXk
— DCP Traffic East (@DCPTrEastBCP) December 11, 2020
ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರನ್ನು ಪುನಃ ತರಬೇತಿಗಾಗಿ ಕಳಿಸಲಾಗುತ್ತಿದೆ. 10ಕ್ಕೂ ಹೆಚ್ಚು ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರು ತರಬೇತಿ ಪಡೆದು, ಪ್ರಮಾಣ ಪತ್ರ ಪಡೆದ ಬಳಿಕ ವಾಹನಗಳನ್ನು ವಾಪಸ್ ನೀಡಲಾಗುತ್ತಿದೆ.












Click it and Unblock the Notifications