Bengaluru traffic police: ನೆಟ್ಟಿಗರ ಮನಗೆದ್ದ ಬೆಂಗಳೂರು ಟ್ರಾಫಿಕ್ ಪೊಲೀಸರ ನೃತ್ಯ

ಸಾಮಾಜಿಕ ಜಾಲತಾಣಗಳಲ್ಲಿ ಯಾವ ವಿಷಯ ವೈರಲ್ ಆಗುತ್ತದೋ ಹೇಳಲು ಆಗುವುದಿಲ್ಲ. ಹಾಗೇಯೇ ನಮ್ಮ ಬೆಂಗಳೂರಿನ ಟ್ರಾಫಿಕ್ ಪೊಲೀಸರ ನೃತ್ಯವು ಕೂಡ ನೆಟ್ಟಿಗರ ಗಮನ ಸೆಳೆದಿದೆ.

ಬೆಂಗಳೂರು, ಫೆಬ್ರವರಿ. 03: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ನಡೆಯುವ ಸಂಚಾರ ನಿಯಮ ಉಲ್ಲಂಘನೆಯನ್ನು ತಪ್ಪಿಸಲು ಪ್ರತಿಕ್ಷಣ ತಯಾರಾಗಿರುವ ನಮ್ಮ ಟ್ರಾಫಿಕ್ ಪೊಲೀಸರ ನೃತ್ಯದ ವಿಡಿಯೋವೊಂದು ನೆಟ್ಟಿಗರ ಹೃದಯ ಕದ್ದಿದೆ.

ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರು ಹೀಗೆ ಕೆಲ ಕಾಲ ಆರಾಮಾವಾಗಿ ನೃತ್ಯ ಮಾಡುತ್ತಿರುವುದನ್ನು ನೋಡಲು ಖುಷಿಯಾಗುತ್ತದೆ ಎಂದು ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ 13,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಹಲವು ಮಂದಿ ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋವನ್ನು ಹಂಚಿಕೊಂಡಿರುವ ಟ್ವಿಟ್ಟರ್ ಬಳಕೆದಾರರೊಬ್ಬರು, "ಈ ಟ್ವೀಟ್ ಅನ್ನು ಉಲ್ಲೇಖಿಸಿ ಮತ್ತು ಶೀರ್ಷಿಕೆ ನೀಡಿ" ಎಂದಿದ್ದಾರೆ. ಇದಕ್ಕೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ.

ಇನ್ನು, ಹಲವು ಮಂದಿ ಹಾಸ್ಯ ಚಟಾಕಿಗಳನ್ನು ಹಾರಿಸಿದ್ದಾರೆ. "ಬೆಂಗಳೂರಿನಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿರುವ ಸಾರ್ವಜನಿಕರನ್ನು ಮನರಂಜಿಸಲು ಅಭ್ಯಾಸ ಮಾಡುತ್ತಿದ್ದೇನೆ" ಎಂದು ಒಬ್ಬರು ಬರೆದರೇ, ಇನ್ನೊಬ್ಬರು, ತಿಂಗಳ ಗುರಿಯನ್ನು 1 ದಿನದಲ್ಲಿ ತಲುಪಿದ ಖುಷಿಯಿದು ಎಂದು ವ್ಯಂಗ್ಯವಾಡಿದ್ದಾರೆ.

Traffic police dance video goes viral

"ಎಲ್ಲರೂ ಗುರಿಯನ್ನು ತಲುಪಿರುವ ಕಾರಣ, ಬಡ್ತಿ ಮತ್ತು ಒಂದು ವಾರದ ರಜೆಯನ್ನು ಪಾವತಿಸಿರುವ ಖುಷಿ " ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು "ಹೆಲ್ಮೆಟ್ ಧರಿಸಿಲ್ಲ ಎಂದು ನಿಮ್ಮನ್ನು ಟ್ರಾಫಿಕ್ ಪೊಲೀಸರು ಹಿಡಿದ ಸಂದರ್ಭದಲ್ಲಿ, ನಿಮ್ಮ ಬಳಿ ಡಿಎಲ್, ಗಾಡಿ ದಾಖಲೆಗಳಿಲ್ಲ ಮತ್ತು ನೀವು ಕುಡಿದಿದ್ದೀರಿ ಎಂದು ಅವರಿಗೆ ತಿಳಿಯುತ್ತದೆ" ಎಂದು ಹೇಳಿದ್ದಾರೆ. ಎಲ್ಲಾ ತಪ್ಪುಗಳನ್ನು ಮಾಡಿ ಪೊಲೀಸರ ಕೈಗೆ ಸಿಕ್ಕಾಗ ಅವರ ಖುಷಿ ಹೀಗೆ ಇರುತ್ತದೆ ಎಂಬುದನ್ನು ವ್ಯಂಗ್ಯವಾಡಿ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+