ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್, ಇದು ರಜಾ ಮಹಿಮೆ ಸ್ವಾಮೀ..

ಮೈಸೂರು ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ವಿಪರೀತ ಸಂಚಾರ ದಟ್ಟಣೆ ಏರ್ಪಟ್ಟಿತು. ವಾರಾಂತ್ಯಗಳಲ್ಲಿ ಮೈಸೂರಿಗೆ ಹೆಚ್ಚಿನ ಪ್ರಯಾಣಿಕರು ತೆರಳುತ್ತಾರೆ. ಅದ್ದರಿಂದ ನಾನೂರು ಹೆಚ್ಚುವರಿ ಬಸ್ ನಿಯೋಜಿಸಲಾಗಿದೆ. ಆದರೆ ಮೆಟ್ರೋ ಕಾಮಗಾರಿಯಿಂದ ಹೀಗಾಗಿದೆ

ಬೆಂಗಳೂರು, ಏಪ್ರಿಲ್ 30: ಭಾನುವಾರ ಬೆಳಗ್ಗೆ ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿ, ವಾಹನಗಳು ನಿಧಾನವಾಗಿ ಚಲಿಸಿದವು. ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ತೆರಳುತ್ತಾರೆ ಎಂಬ ಕಾರಣಕ್ಕೆ ಹೆಚ್ಚುವರಿಯಾಗಿ ಬಸ್ ಗಳನ್ನು ನಿಯೋಜಿಸಲಾಗಿದೆ.

ಪೊಲೀಸರ ಪ್ರಕಾರ, ನಾಲ್ಕುನೂರು ಹೆಚ್ಚುವರಿ ಬಸ್ ಗಳು ರಸ್ತೆಯಲ್ಲಿ ಸಂಚರಿಸುವ ಜತೆಗೆ ಟ್ಯಾಕ್ಸಿ, ಖಸಗಿ ವಾಹನಗಳು ಈ ಮಾರ್ಗಗಳು ಸಂಚರಿಸುತ್ತವೆ. ರಾಜರಾಜೇಶ್ವರಿ ನಗರ ಹಾಗೂ ಕೆಂಗೇರಿಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ.[ಆಲಿಕಲ್ಲು ಮಳೆಯಲ್ಲಿ ಮಿಂದು ತಂಪಾದ ಬೆಂಗಳೂರು]

Traffic disrupted on Mysuru Road

ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ವಾಹನ ಸಂಚಾರ ನಿಧಾನವಾಗಿ ಮೈಸೂರು ರಸ್ತೆ ಕಡೆಗೆ ಬರುತ್ತಿದ್ದ ವಾಹನಗಳೆಲ್ಲ ದೊಡ್ಡ ಮಟ್ಟದ ದಟ್ಟಣೆಯಲ್ಲಿ ಸಿಕ್ಕಿಕೊಂಡು, ಟೌನ್ ಹಾಲ್ ವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಶನಿವಾರದಿಂದಲೇ ಈ ರೀತಿ ಸಂಚಾರ ದಟ್ಟಣೆ ಏರ್ಪಟ್ಟು, ವಾಹನಗಳು ಚಲಿಸುವುದೇ ನಿಧಾನವಾಗಿದೆ. ಏಕೆಂದರೆ ಮೂರು ದಿನ ನಿರಂತರವಾಗಿ ರಜೆ ಸಿಕ್ಕಿರುವುದರಿಂದ ಸೋಮವಾರದವರೆಗೆ ಇದೇ ಸ್ಥಿತಿ ಇರುತ್ತದೆ ಎನ್ನಲಾಗಿದೆ.

ಮೈಸೂರಿಗೆ ತೆರಳುವ ಮಾರ್ಗದಲ್ಲಿ ಹೆಚ್ಚುವರಿಯಾಗಿ ಪೊಲೀಸರನ್ನು ನೇಮಿಸಲಾಗಿದ್ದರೂ ರಾಜರಾಜೇಶ್ವರಿ ನಗರದಿಂದ ಕೆಂಗೇರಿಗೆ ತೆರಳಲು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತಿತ್ತು. ಈ ಬಗ್ಗೆ 'ದ ಹಿಂದೂ' ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+