ಡಿಜಿ ಲಾಕರ್ ಗೆ ಅಧಿಕೃತ ಮಾನ್ಯತೆ: ಡಿಎಲ್, ಆರ್‌ಸಿ ಆ್ಯಪ್ ನಲ್ಲೇ ಲಭ್ಯ

ಬೆಂಗಳೂರು, ಫೆಬ್ರವರಿ 07 : ವಾಹನಗಳ ದಾಖಲೆಯನ್ನು ಸಂಗ್ರಹಿಸಿಡುವ ಡಿಜಿ(ಡಿಜಿಟಲ್) ಲಾಕರ್ ಅಪ್ಲಿಕೇಷನ್ ಗೆ ಸಾರಿಗೆ ಇಲಾಖೆ ಅಧಿಕೃತ ಮಾನ್ಯತೆ ನೀಡಿದೆ.

ಇದರಿಂದಾಗಿ ಇನ್ನುಮುಂದೆ ಪೊಲೀಸರು, ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳನ್ನು ಅಡ್ಡಹಾಕಿ ದಾಖಲೆ ಕೇಳಿದರೆ ಸವಾರರು ಮೊಬೈಲ್ ನಲ್ಲಿರುವ ದಾಖಲೆ ತೋರಿಸಿ ದಂಡಾಸ್ತ್ರ ಹಾಗೂ ಕಾನೂನಿನ ಕ್ರಮದಿಂದ ಪಾರಾಗಬಹುದು.

ಈ ಸಂಬಂಧ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಸ್ಮಾರ್ಟ್ ಕಾರ್ಡ್ ಅಥವಾ ಕಾಗದ ರೂಪದ ದಾಖಲೆಗಳಿಗೆ ಡಿಜಿಟಲ್ ದಾಖಲೆ ಸಮಾನ ಎಂಬುದನ್ನು ಉಲ್ಲೇಖಿಸಲಾಗಿದೆ. ಸದ್ಯ ಇಲಾಖೆ ಡಿಜಿಲಾಕರ್ ಅಪ್ಲಿಕೇಷನ್ ನಲ್ಲಿ ಚಾಲನಾ ಪರವಾನಗಿ, ನೋಂದಣಿ ಪತ್ರ ಮತ್ತು ವಾಯುಮಾಲಿನ್ಯ ಪ್ರಮಾಣಪತ್ರ ಡಿಜಿಟಲ್ ಪ್ರತಿ ಲಭ್ಯವಿರುತ್ತದೆ.

Traffic cops to accept vehicle papers on DigiLocker app now

ಈ ಎಲ್ಲಾ ಮಾಹಿತಿ ಆಧಾರ್ ಮತ್ತು ಸಾರಿಗೆ ಇಲಾಖೆ ಡೇಟಾ ಬೇಸ್ ಗೆ ಜೋಡಿಸಲ್ಪಟ್ಟಿದ್ದು, ಇಲಾಕೆ ಡಿಜಿಟಲ್ ದಾಖಲೆಗಳನ್ನು ಪ್ರಾಮಾಣೀಕರಿಸಿದೆ. ವಿಮೆಯ ಪತ್ರವೂ ಡಿಜಿಟಲ್ ರೂಪದಲ್ಲಿ ಅಪ್ಲಿಕೇಷನ್ ಅಲ್ಲಿ ಲಭ್ಯವಾಗುವಂತೆ ಇಲಾಖೆ ಪ್ರಕ್ರಿಯೆ ಆರಂಭಿಸಿದೆ ಎಂದು ಸಾರಿಗೆ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಜಪ್ತಿ ಸಂದರ್ಭ ಹಾರ್ಡ್ ಕಾಪಿ: ಅಧಿಕಾರಿಗಳು ಕಾನೂನು ರೀತು ಡಿಎಲ್ ಮತ್ತು ಆರ್ ಸಿ ಜಪ್ತಿಮಾಡಬೇಕಾದ ಪ್ರಕರಣಗಳಲ್ಲಿ ದಾಖಲೆಯ ಮೂಲ ಪ್ರತಿ ಅಗತ್ಯವಾಗಿರಲಿದೆ. ಕುಡಿದು ಚಾಲನೆ ಮಾಡುವುದು, ಅಜಾಗರೂಕ ಚಾಲನೆ ಮುಂತಾದ ಸಂದರ್ಭದಲ್ಲಿ ಸಂಚಾರಿ ಪೊಲೀಸರು ಡಿಎಲ್ ಜಪ್ತಿ ಮಾಡುತ್ತಾರೆ.

Traffic cops to accept vehicle papers on DigiLocker app now

ದಾಖಲೆ ಹೀಗೆ ಪಡೆಯಿರಿ: ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡಿಜಿಲಾಕರ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿ, ಸೈನ್ ಅಪ್ ಆಯ್ಕೆ ಒತ್ತಿ, ಹೊಸ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಹಾಕಿ, ಆಧಾರ್ ಸಂಖ್ಯೆ ನಮೂಸಿದಿ. ಇಷ್ಯೂಡ್ ಡಾಕ್ಯುಮೆಂಟ್ ಆಯ್ಕೆ ಒತ್ತಿ ಅಲ್ಲಿ ಸರ್ಚ್ ನಲ್ಲಿ ಸಾರಿಗೆ ಇಲಾಖೆ-ಕರ್ನಾಟಕ ಸರ್ಕಾರ ಆಯ್ಕೆ ಮಾಡಿ. ಪ್ರಸ್ತುತ ಡಿ.ಎಲ್. ಆರ್ ಸಿ ಪಡೆಯಲು ನೋಂದಣಿ ಸಂಖ್ಯೆ, ಚಾರ್ಸಿ ಸಂಖ್ಯೆ ನಮೂದಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+