40 ಹೆಲಿಕಾಪ್ಟರ್ ಉತ್ಪಾದನೆ: 18 ಕೋಟಿ ರೂ. ದಾಟಿದ ಎಚ್‌ಎಎಲ್ ವಹಿವಾಟು

ಬೆಂಗಳೂರು, ಏಪ್ರಿಲ್ 03: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) 2017-18ನೇ ಸಾಲಿನ ಆರ್ಥಿಕ ವರ್ಷದಲ್ಲಿ ಹೊಸ ದಾಖಲೆ ಬರೆದಿದೆ.

ಎಚ್‌ಎಎಲ್ ವಾರ್ಷಿಕ ವಹಿವಾಟು 18ಸಾವಿರ ಕೋಟಿ ರೂಪಾಯಿ ದಾಟಿದ್ದು, 2016-17ಕ್ಕೆ ಹೋಲಿಸಿದರೆ 400 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆದಿದೆ. 2016-17ರ ಆರ್ಥಿಕ ವರ್ಷದಲ್ಲಿ ಎಚ್‌ಎಎಲ್ 17,605 ಕೋಟಿ ರೂ. ವಹಿವಾಟು ನಡೆಸಿತ್ತು. 2017-18ರಲ್ಲಿ ಎಚ್‌ಎಎಲ್ 40 ಏರ್ ಕ್ರಾಫ್ಟ್ ಮತ್ತು ಹೆಲಿಕಾಪ್ಟರ್ ಹಾಗೂ 105 ಹೊಸ ಎಂಜಿನ್ ಉತ್ಪಾದನೆ ಮಾಡಿದೆ.

Top defence PSUs HAL and BEL achieve record turnover

ಜತೆಗೆ, 220 ಅಧಿಕ ಏರ್ ಕ್ರಾಫ್ಟ್ ಮತ್ತು ಹೆಲಿಕಾಪ್ಟರ್, 550ಕ್ಕೂ ಅಧಿಕ ಎಂಜಿನ್ ನಿರ್ವಹಣೆ ಮಾಡಿದೆ. ಭಾರತೀಯ ಸೇನೆ 41ಅಡ್ವಾನ್ಸ್ಡ್ ಲಘು ಹೆಲಿಕಾಪ್ಟರ್ ಮತ್ತು 8 ಚೇತಕ್ ಹೆಲಿಕಾಪ್ಟರ್ ಗಳಿಗೆ ಈಗಾಗಲೇ ಬೇಡಿಕೆ ಇಟ್ಟಿದೆ. ಎಚ್‌ಎಎಲ್ ಉತ್ಪಾದಿಸಿರುವ ಲಘು ಯುದ್ಧ ವಿಮಾನ ಹೆಲಿಕಾಪ್ಟರ್ ಗೆ ಐಒಸಿ ದೊರಕಿದ್ದು, ನಾಗರಿಕ ವಿಮಾನ ಡ್ರೋನಿಯರ್ ಡಿಒ 228ಗೆ ನಾಗರಿಕ ವಿಮಾನಯಾನ ಸಚಿವಾಲಯದಿಂದ ಒಪ್ಪಿಗೆ ದೊರೆತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+