ಸಿಲ್ಕ್ ಬೋರ್ಡ್- ಏರ್‌ಪೋರ್ಟ್‌ ಮಾರ್ಗ: 6 ಮೆಟ್ರೋ ನಿಲ್ದಾಣಗಳ ಬಳಿ TOD- ಏನಿದು? ಸೌಲಭ್ಯ, ಅನುಕೂಲಗಳೇನು? ತಿಳಿಯಿರಿ

ಬೆಂಗಳೂರು, ಜನವರಿ 21: ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಆರು ಮೆಟ್ರೋ ನಿಲ್ದಾಣಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಸಾರಿಗೆ ಆಧಾರಿತ ಅಭಿವೃದ್ಧಿ (TOD) ನೀತಿಯನ್ನು ಜಾರಿಗೆ ತರಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಗುರುವಾರ ಹೇಳಿದ್ದಾರೆ. ನಗರ ಪ್ರದೇಶಗಳಲ್ಲಿ ಸೂಕ್ತ ಭೂ ಬಳಕೆಯ ಮೂಲಕ ಸಾರ್ವಜನಿಕ ಸಾರಿಗೆ ಜಾಲವನ್ನು ಉತ್ತಮವಾಗಿ ಬಳಸಿಕೊಳ್ಳುವ ಗುರಿಯನ್ನು ನೀತಿ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 TOD ನೀತಿಗೆ ಅನುಮೋದನೆ

TOD ನೀತಿಗೆ ಅನುಮೋದನೆ

ನಗರಾಭಿವೃದ್ಧಿ ಇಲಾಖೆಯು ನವೆಂಬರ್ 17, 2022 ರ ಆದೇಶದಲ್ಲಿ ಬೆಂಗಳೂರಿನ TOD ನೀತಿಯನ್ನು ಅನುಮೋದಿಸಿದೆ. 'ಗ್ರೀನ್‌ಫೀಲ್ಡ್ ಅಭಿವೃದ್ಧಿ ಮೂಲಕ ಸುಸ್ಥಿರ ಸ್ಥಳಗಳನ್ನು ಸೃಷ್ಟಿಸುವ ಕ್ರಿಯೆ ಇದಾಗಿದೆ. ಯೋಜನೆಯು ಭೂ ಬಳಕೆಗಳ ಮೂಲಕ ನಗರದ ಪ್ರಮುಖ ಪ್ರದೇಶಗಳನ್ನು ಪುನಶ್ಚೇತನಗೊಳಿಸುವ ಸಾಧನವಾಗಿದೆ. ಸಾರ್ವಜನಿಕ ಸಾರಿಗೆಯ ಕಾರ್ಯಸಾಧ್ಯತೆಯನ್ನು ಹೆಚ್ಚಿಸಲು TOD ಗುರಿಯನ್ನು ಹೊಂದಿದೆ. ಇದು ಪ್ರಯಾಣಕ್ಕಾಗಿ ಖಾಸಗಿ ವಾಹನಗಳ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ' ಎಂದು ಅಧಿಕಾರಿಯೊಬ್ಬರು 'ಇಂಡಿಯನ್‌ ಎಕ್ಸಪ್ರೆಸ್‌' ಪತ್ರಿಕೆಗೆ ಹೇಳಿದ್ದಾರೆ.

 TOD ನೀತಿಯ ಅನುಷ್ಠಾನಕ್ಕಾಗಿ ಆರು ಮೆಟ್ರೋ ನಿಲ್ದಾಣ

TOD ನೀತಿಯ ಅನುಷ್ಠಾನಕ್ಕಾಗಿ ಆರು ಮೆಟ್ರೋ ನಿಲ್ದಾಣ

ನಗರ ಸಾರಿಗೆ ಯೋಜನೆ, ಕಾರ್ಯಕ್ರಮಗಳು ಮತ್ತು ಅನುಷ್ಠಾನವನ್ನು ಸಂಯೋಜಿಸುವ ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಪ್ರಾಯೋಗಿಕ ಆಧಾರದ ಮೇಲೆ TOD ನೀತಿಯ ಅನುಷ್ಠಾನಕ್ಕಾಗಿ ಆರು ಮೆಟ್ರೋ ನಿಲ್ದಾಣಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. DULT ಸಂಗ್ರಹಿಸಿದ ನೀತಿ ಒಳನೋಟಗಳ ಪ್ರಕಾರ, TOD ನೀತಿಯು ಮೋಟಾರುರಹಿತ ಸಾರಿಗೆ (NMT) ಮತ್ತು ಸಾರ್ವಜನಿಕ ಸಾರಿಗೆಯಲ್ಲಿ (ನಮ್ಮ ಮೆಟ್ರೋ, ಉಪನಗರ ರೈಲು ಮತ್ತು ಬಸ್ ಆದ್ಯತೆಯ ಕ್ರಮಗಳು) ನಡೆಯುತ್ತಿರುವ ಹೂಡಿಕೆಗಳ ಬಗ್ಗೆ ಮರು ಪರಿಶೀಲನೆ ನಡೆಸಲು ಅವಕಾಶ ಒದಗಿಸುತ್ತದೆ. ಸ್ಥಳಗಳನ್ನು ಮರುರೂಪಿಸಿ ಮತ್ತು ಬೆಂಗಳೂರಿನ ಸ್ವಚ್ಛ- ಸುಂದರ ವಾತಾವರಣವನ್ನು ಮರುಸ್ಥಾಪಿಸಲು ಇದು ಸಹಾಯ ಮಾಡುತ್ತದೆ.

 ಕೋರ್ TOD ವಲಯಗಳ ರಚನೆ

ಕೋರ್ TOD ವಲಯಗಳ ರಚನೆ

ಕೋರ್ TOD ವಲಯಗಳ ರಚನೆಯ ಮೂಲಕ ನೀತಿಯನ್ನು ಕಾರ್ಯಗತಗೊಳಿಸಲಾಗುತ್ತದೆ. ಈ ವಲಯಗಳು ನಿಲ್ದಾಣದಿಂದ ಆರು ನಿಮಿಷಗಳ ನಡಿಗೆಯಷ್ಟು ದೂರ ಇರಲಿವೆ. ಇದು ಸಾರಿಗೆ ನಿಲ್ದಾಣದಿಂದ 500 ಮೀಟರ್‌ಗಳಷ್ಟು ಹರಡಿಕೊಂಡಿರುತ್ತದೆ. ಈ ಪ್ರದೇಶವು ಸಾಮಾನ್ಯವಾಗಿ ಸಾಗಣೆ-ಬೆಂಬಲಿತ ಭೂ ಬಳಕೆಗಳನ್ನು ಹೊಂದಿರುವ ವಸತಿ ಪ್ರದೇಶದಕ್ಕೆ ಅನುಕೂಲಕರವಾಗಿದೆ. ನೀತಿಯು ಸ್ಟ್ಯಾಂಡರ್ಡ್ TOD ವಲಯವನ್ನು ರಚಿಸುವುದನ್ನು ಸಹ ಕಲ್ಪಿಸುತ್ತದೆ. ನಿಲ್ದಾಣಕ್ಕೆ ಆರು ನಿಮಿಷಗಳಲ್ಲಿ ಸೈಕ್ಲಿಂಗ್ ಅಥವಾ ವಾಕಿಂಗ್‌ ಮೂಲಕ ಪ್ರವೇಶಿಸಬಹುದು. ವಾಕಿಂಗ್ ಮತ್ತು ಸೈಕ್ಲಿಂಗ್ ಎರಡಕ್ಕೂ ಸೂಕ್ತವಾಗಿದೆ. ಈ ವಲಯವು ಸಾರಿಗೆ-ಬೆಂಬಲಿತ ಚಟುವಟಿಕೆಗಳನ್ನು ಆಯೋಜಿಸಲು ಯೋಜಿಸಲಾಗಿದೆ.

 ಮೈಕ್ರೋ ಪ್ಲಾನಿಂಗ್ ಬದಲಾವಣೆ

ಮೈಕ್ರೋ ಪ್ಲಾನಿಂಗ್ ಬದಲಾವಣೆ

'ಈ ನೀತಿಯ ಸಂಪೂರ್ಣ ಮೈಕ್ರೋ ಪ್ಲಾನಿಂಗ್ ಅನ್ನು ಬದಲಾಯಿಸಬೇಕಾಗಿದೆ. ಫ್ಲೋರ್ ಏರಿಯಾ ರೇಶಿಯೋ (ಎಫ್‌ಎಆರ್) ಎಷ್ಟು ನೀಡಬೇಕು, ನಾವು ರಸ್ತೆಗಳನ್ನು ಹೇಗೆ ಯೋಜಿಸಲಿದ್ದೇವೆ ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸಬೇಕಿದೆ. ಜೊತೆಗೆ ಆಸ್ತಿಗಳ ಸಂಘಟನೆಗೆ ಯಾವ ರೀತಿಯ ನಿಬಂಧನೆಗಳನ್ನು ಹಾಕಬೇಕು ಎಂಬುದನ್ನು ನಾವು ಪರಿಶೀಲಿಸಬೇಕಿದೆ. ಇಡೀ ಕಲ್ಪನೆಯು ಪ್ರದೇಶವನ್ನು ಸಾಂದ್ರತೆ ಮತ್ತು ಸಮೂಹ ಸಾರಿಗೆ ವ್ಯವಸ್ಥೆಗೆ ಹತ್ತಿರವಾಗಿ ವಾಸಿಸಲು ಮತ್ತು ಕೆಲಸ ಮಾಡಲು ಜನರಿಗೆ ಅನುವು ಮಾಡಿಕೊಡುತ್ತದೆ. ಇದರಿಂದ ರಸ್ತೆಗಳಲ್ಲಿ ಪ್ರಯಾಣದ ಅವಶ್ಯಕತೆ ತೀವ್ರವಾಗಿ ಕಡಿಮೆಯಾಗುತ್ತದೆ. ಸದ್ಯಕ್ಕೆ ಈ ನೀತಿಯನ್ನು ಪ್ರಾಯೋಗಿಕವಾಗಿ ಹೊರ ವರ್ತುಲ ರಸ್ತೆಯ ವಿಸ್ತರಣೆಯಲ್ಲಿ ಅಳವಡಿಸಲಾಗುವುದು. ಇದರ ಫಲಿತಾಂಶಗಳನ್ನು ಅವಲಂಬಿಸಿ ಅಸ್ತಿತ್ವದಲ್ಲಿರುವ ಇತರ ಮೆಟ್ರೋ ನಿಲ್ದಾಣಗಳಲ್ಲಿ ಅಳವಡಿಸಲಾಗುವುದು' ಎಂದು ಪರ್ವೇಜ್ ಹೇಳಿದ್ದಾರೆ.

 ರೆಡಿಯಾಗಿದೆ TOD ಫ್ರೇಮ್‌

ರೆಡಿಯಾಗಿದೆ TOD ಫ್ರೇಮ್‌

'TOD ಪ್ರೇಮ್‌ ಸಿದ್ಧವಾಗಿದೆ ಮತ್ತು ರಾಜ್ಯ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ. ಜನರನ್ನು ನಡಿಗೆ, ಸೈಕಲ್ ಮತ್ತು ಸಾರ್ವಜನಿಕ ಸಾರಿಗೆ ಸ್ನೇಹಿಯಾಗಿಸುವಲ್ಲಿ TOD ಸಹಕಾರಿಯಾಗಲಿದೆ. ಪರಿಸರ, ಐತಿಹಾಸಿಕ ಮತ್ತು ಪಾರಂಪರಿಕ ಅಂಶಗಳನ್ನು ಪರಿಗಣಿಸಿ ಟೈಪೊಲಾಜಿಗೆ ಅನುಗುಣವಾಗಿ TOD ನೀತಿಯನ್ನು ಕಾರ್ಯಗತಗೊಳಿಸಲಾಗುತ್ತದೆ. ಸದ್ಯಕ್ಕೆ, ನಾವು TOD ಚೌಕಟ್ಟಿನ ಭಾಗವಾಗಿ ಆರು ಮೆಟ್ರೋ ನಿಲ್ದಾಣಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದೇವೆ ಮತ್ತು ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದ್ದೇವೆ' ಎಂದು DULT ನ ಕಮಿಷನರ್ ವಿ ಮಂಜುಳಾ ಹೇಳಿದ್ದಾರೆ.

 ಭಾರತದಲ್ಲಿ TOD ನೀತಿ

ಭಾರತದಲ್ಲಿ TOD ನೀತಿ

ನಗರಗಳ ನಗರೀಕರಣದ ಗಂಭೀರ ಸವಾಲುಗಳನ್ನು ಎದುರಿಸಲು ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯವು 'ಸಾರಿಗೆ ಆಧಾರಿತ ಅಭಿವೃದ್ಧಿ (TOD) ನೀತಿ' ಯನ್ನು ರೂಪಿಸಿತು. ಮೆಟ್ರೊಗಳು, ಮೊನೊರೈಲ್ ಮತ್ತು ಬಸ್ ಕ್ಷಿಪ್ರ ಸಾರಿಗೆ (ಬಿಆರ್‌ಟಿ) ಕಾರಿಡಾರ್‌ಗಳಂತಹ ಸಾಮೂಹಿಕ ನಗರ ಸಾರಿಗೆ ಕಾರಿಡಾರ್‌ಗಳಿಗೆ ಹತ್ತಿರದಲ್ಲಿ ಜನ ಜೀವನವನ್ನು ಉತ್ತೇಜಿಸುವುದು ಈ ನೀತಿಯ ಗುರಿ ಆಗಿದೆ. ನಗರ ಸ್ಥಳಗಳನ್ನು ನಿರ್ವಹಿಸುವ ಅನುಷ್ಠಾನ ಕಾರ್ಯತಂತ್ರವು ರಾಜ್ಯ ಸರ್ಕಾರಗಳ ಹೊಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+