ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತತ್ವ ಉಳಿಸಲು ವಿಶ್ವವಿದ್ಯಾಪೀಠ ಸ್ಥಾಪನೆ: ರಾಘವೇಶ್ವರ ಶ್ರೀ

|
Google Oneindia Kannada News

ಬೆಂಗಳೂರು, ಜುಲೈ 16: ದೇಶದ ಭಾರತತ್ವವನ್ನು ಉಳಿಸುವ ಸಲುವಾಗಿ ಆಚಾರ್ಯ ವಿಷ್ಣುಗುಪ್ತ ಚಾಣಕ್ಯನ ಹೆಸರಿನಲ್ಲಿ ಜಗತ್ತಿನ ಏಕೈಕ ವಿಶ್ವವಿದ್ಯಾಪೀಠ ಆರಂಭಿಸಲಾಗುತ್ತಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಮಹಾಸ್ವಾಮೀಜಿಗಳು ನುಡಿದರು.

ರಾಮಾಯಣ ಚಾತುರ್ಮಾಸ್ಯ ವ್ರತ ಆರಂಭದ ದಿನವಾದ ಗುರುಪೂರ್ಣಿಮೆಯಂದು (ಜುಲೈ 16) ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಪರಮಶ್ರೇಷ್ಠ ಗುರುವಿಗೆ, ಸ್ವಾರ್ಥರಹಿತ ಜೀವನಕ್ಕೆ ಚಾಣಕ್ಯ ಉದಾಹರಣೆ. ಚಂದ್ರಗುಪ್ತನಂಥ ಧರ್ಮನಿಷ್ಠ, ಸಂಸ್ಕತಿನಿಷ್ಠ ಧರ್ಮಯೋಧರನ್ನು ಸಿದ್ಧಪಡಿಸುವುದು ಇದರ ಉದ್ದೇಶ ಎಂದು ಶ್ರೀಗಳು ಬಣ್ಣಿಸಿದರು.

ಶರಾವತಿ ಯೋಜನೆ ಅನ್ನೋದು ತುಘಲಕ್ ದರ್ಬಾರ್ ಇದ್ದಂತೆಶರಾವತಿ ಯೋಜನೆ ಅನ್ನೋದು ತುಘಲಕ್ ದರ್ಬಾರ್ ಇದ್ದಂತೆ

ಭಾರತದ ಗತವೈಭವ ಮರುಕಳಿಸುವಂತೆ ಮಾಡುವ ಈ ವಿಶ್ವವಿದ್ಯಾಪೀಠ, ಚಲಿಸುವ ವಿಶ್ವವಿದ್ಯಾನಿಲಯವೇ ಆಗಿದ್ದ ಶಂಕರಾಚಾರ್ಯರ ಸ್ಮರಣೆಯಲ್ಲಿ, ಅವರಿಗೇ ಸಮರ್ಪಣೆಯಾಗುತ್ತಿದೆ. ಈ ವಿಶಿಷ್ಟ ಪರಿಕಲ್ಪನೆ ಸಾಕಾರಗೊಳ್ಳಲು ಸಮಾಜದ ಕೊಡುಗೆ ಅಗತ್ಯ. ಭಾರತವನ್ನು ಬೆಳಗುವ ಜ್ಞಾನಬೆಳಕಿನ ಕಟ್ಟಿಗೆಯಾಗೋಣ, ಭವ್ಯ ಭಾರತ ಕಟ್ಟುವ ಇಟ್ಟಿಗೆಯಾಗೋಣ ಎಂದು ಶ್ರೀಗಳು ಕರೆ ನೀಡಿದರು.

Acharya Vishnugupta Chanakya university is opened to save our countrys nationalism, Raghaveshwara Swamiji

ಗುರು, ದೇವರಿಂದ ಹರಿದುಬರುವ ಜ್ಞಾನ ಪರಂಪರೆ ಹರಿಯಲು ಇದು ಸಾಧನವಾಗುತ್ತದೆ. ಗುರುಪೂರ್ಣಿಮೆ ಅಂಥ ಸ್ಮರಣೆಗೆ ಮಹಾಪರ್ವದಿನ. ಗುರುವಿಲ್ಲದ ಬದುಕು ನಿರರ್ಥಕ. ಸಕಾಲದಲ್ಲಿ ಸರಿ ನಿರ್ಣಯ ಕೈಗೊಳ್ಳಲು ಗುರುಕೃಪೆ ಅಗತ್ಯ. ಶಿಷ್ಯಕೋಟಿಗೆ ಮಾರ್ಗದರ್ಶನ ನೀಡುವುದು ಗುರು ಪರಂಪರೆ ಎಂದು ರಾಘವೇಶ್ವರ ಶ್ರೀಗಳು ಬಣ್ಣಿಸಿದರು.

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಗೆ ಮುಂದಾದ ರಾಮಚಂದ್ರಾಪುರ ಮಠ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಗೆ ಮುಂದಾದ ರಾಮಚಂದ್ರಾಪುರ ಮಠ

ಪ್ರತಿ ಚಾತುರ್ಮಾಸ್ಯದಿಂದ ಪುಣ್ಯಸಂಚಯವಾಗುತ್ತದೆ. ಗುರುಶಿಷ್ಯ ಬಂಧದ ವಿಶೇಷ ಪರ್ವ. ಇಡೀ ಚಾತುರ್ಮಾಸ್ಯದಲ್ಲಿ ಸುವರ್ಣಮಂಟಪದಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲುತ್ತಿದ್ದು, ಇದು ಶ್ರೀಮಠದ ಇತಿಹಾಸದಲ್ಲೇ ಮೊದಲು. ಇದು ಸುವರ್ಣಯುಗದ ಪ್ರಾರಂಭದ ಸಂಕೇತ. ಸ್ವರ್ಣಮಂಟಪದ ಕಾಂತಿ ಎಲ್ಲರ ಬದುಕನ್ನು ಸ್ವರ್ಣಮಯ ಮಾಡಬಲ್ಲದು ಎಂದು ಶ್ರೀಗಳು ಹೇಳಿದರು.

ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ಶ್ರೀಮಠದ ನೂತನ ಶಾಸನತಂತ್ರವನ್ನು ಘೋಷಿಸಲಾಯಿತು. ಗುರುಗಳ ಸಂಕಲ್ಪಶಕ್ತಿಯನ್ನು ಸಾಕಾರಗೊಳಿಸುವ ಕ್ರಿಯಾಶಕ್ತಿಯೇ ಶಾಸನತಂತ್ರ ಎಂದು ಶ್ರೀಗಳು ಇದನ್ನು ಬಣ್ಣಿಸಿದರು. ಶ್ರೀಮಠದ ಕಾರ್ಯಕರ್ತರ ಶ್ರಮ, ತ್ಯಾಗದ ಫಲವಾದ ಪುನರ್ವಸು ಭವನವನ್ನೂ ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು. ಸುಮಾರು 12 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಈ ವಿವಿಧೋದ್ದೇಶ ಭವನ ನಿರ್ಮಿಸಲಾಗಿದೆ.

English summary
Acharya Vishnugupta Chanakya university is opened to save our country's nationalism, Raghaveshwara Swamiji of Ramachandrapura Math.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X