Get Updates
Get notified of breaking news, exclusive insights, and must-see stories!

Bengaluru: ಎರಡನೇ ಅಧಿಕೃತ 'ಫುಡ್ ಸ್ಟ್ರೀಟ್' ಸಿದ್ಧ- ಎಲ್ಲಿ, ಯಾವಾಗ ತೆರೆಯಲಿದೆ? ಮಾಹಿತಿ, ವಿವರ ತಿಳಿಯಿರಿ

ಬೆಂಗಳೂರು, ಮಾರ್ಚ್‌ 28: ಬೆಂಗಳೂರಿನಲ್ಲಿ ( Bengaluru ) ಎರಡನೇ ಅಧಿಕೃತ 'ಫುಡ್‌ ಸ್ಟ್ರೀಟ್' (Food Street ) ಸಿದ್ಧವಾಗಿದೆ. ಇದು ಮೂರ್ನಾಲ್ಕು ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ. ಬಸವನಗುಡಿಯ ವಿವಿ ಪುರಂ ( ವಿಶ್ವೇಶ್ವರ ಪುರಂ ) ಮೊದಲನೆಯದ್ದು. ದಕ್ಷಿಣ ಬೆಂಗಳೂರಿನ ವಿವಿ ಪುರಂ ಫುಡ್‌ ಸ್ಟ್ರೀಟ್ ಜನಪ್ರಿಯವಾಗಿರುವ ಕಾರಣ, ಉತ್ತರ ಬೆಂಗಳೂರಿನಲ್ಲಿ ಹೊಸದೊಂದು ಪುಡ್‌ ಸ್ಟ್ರೀಟ್‌ ಅನ್ನು ಬಿಬಿಎಂಪಿ ನಿರ್ಮಾಣ ಮಾಡಿದೆ.

ಎರಡನೇ ಅಧಿಕೃತ ಫುಡ್‌ ಸ್ಟ್ರೀಟ್‌ ಯಲಹಂಕ ನ್ಯೂ ಟೌನ್‌ನ ಶೇಷಾದ್ರಿಪುರಂ ಕಾಲೇಜು ಬಳಿ ಸಿದ್ದವಾಗಿದೆ. ದೊಡ್ಡಬಳ್ಳಾಪುರ ರಸ್ತೆ ಮತ್ತು ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯ ನಡುವಿನ 500 ಮೀಟರ್ ಉದ್ದದ ಜಾಗದಲ್ಲಿ ಹೊಸ ಫುಡ್ ಸ್ಟ್ರೀಟ್ ನಿರ್ಮಾಣಗೊಂಡಿದೆ. ದಕ್ಷಿಣ ಬೆಂಗಳೂರಿನ ವಿವಿ ಪುರಂ ಫುಡ್ ಸ್ಟ್ರೀಟ್ ಹೊರತುಪಡಿಸಿ ಇದು ನಗರದ ಎರಡನೇ ಅಧಿಕೃತ ಆಹಾರ ಬೀದಿಯಾಗಿದೆ.

Bengaluru To Get Its 2nd Official Food Street - Where and when will it open? Know details

3-4 ತಿಂಗಳಲ್ಲಿ ಬೆಂಗಳೂರಿನ ಹೊಸ ಫುಡ್ ಸ್ಟ್ರೀಟ್ ಸಿದ್ಧ

ಈ ಹಿಂದೆ ತ್ಯಾಜ್ಯವನ್ನು ಸುರಿಯುವ ಪ್ರದೇಶವನ್ನು 3 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೀದಿ ವ್ಯಾಪಾರ ವಲಯವನ್ನಾಗಿ ಮಾಡಿದೆ. ಈ ಸ್ಥಳವನ್ನು ಆಹಾರದ ಬೀದಿಯಾಗಿ ಜನಪ್ರಿಯಗೊಳಿಸುವುದು ಬಿಬಿಎಂಪಿಯ ಗುರಿಯಾಗಿದೆ. ಅಲ್ಲಿ ಎಲ್ಲಾ ರೀತಿಯ ಭಾರತೀಯ ಆಹಾರ ಖಾದ್ಯವನ್ನು ರಸ್ತೆ ಬದಿಯ ತಿನಿಸು ಅಂಗಡಿಗಳಿಂದ ನೀಡಲಾಗುತ್ತದೆ. ಮೂರ್ನಾಲ್ಕು ತಿಂಗಳಲ್ಲಿ ಹೊಸ ಫುಡ್ ಸ್ಟ್ರೀಟ್ ಸಿದ್ಧವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು 'ಟೈಮ್ಸ್‌ ಆಫ್‌ ಇಂಡಿಯಾ'ಗೆ ತಿಳಿಸಿದ್ದಾರೆ.

ಯಲಹಂಕ ವಲಯದ ಕಾರ್ಯಪಾಲಕ ಎಂಜಿನಿಯರ್ ಸುಧಾಕರ ರೆಡ್ಡಿ ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯಿಸಿ, ಈ ಜಾಗವನ್ನು ಈ ಹಿಂದೆ ಸಾರ್ವಜನಿಕರು ಕಸವನ್ನು ಸುರಿಯಲು ಬಳಸುತ್ತಿದ್ದರು. ಇದು ಅವ್ಯವಸ್ಥೆಯ ಆಗರವೇ ಆಗಿತ್ತು. ರಾಶಿ ರಾಶಿ ತ್ಯಾಜ್ಯ ಸಂಗ್ರಹಗೊಂಡಿದ್ದರಿಂದ ಜನರು ರಸ್ತೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

Bengaluru To Get Its 2nd Official Food Street - Where and when will it open? Know details

ಕಾಮಗಾರಿಗೆ ಟೆಂಡರ್‌ ಕರೆಯಲಾಗಿದ್ದು, ಹೊರಗಡೆ ಆಸನ ವ್ಯವಸ್ಥೆ ಹೊಂದಿರುವ ಸಣ್ಣ ಅಂಗಡಿಗಳು ಮತ್ತು ಹೊಟೆಲ್‌ಗಳನ್ನು ನಿರ್ಮಿಸುವ ಕೆಲಸ ಈಗಾಗಲೇ ನಡೆಯುತ್ತಿದೆ. ಪಾಲಿಕೆಯು ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿಗಳನ್ನು ಒದಗಿಸುವ ಯೋಜನೆಯನ್ನು ಹೊಂದಿದೆ.

'ಬಿಬಿಎಂಪಿ ಸ್ಥಳವನ್ನು ಸ್ವಚ್ಛಗೊಳಿಸಿ ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳಲು ನಿರ್ಧರಿಸಿದೆ. ನಾವು ಟೆಂಡರ್ ಕರೆದಿದ್ದೇವೆ. ಕಾಮಗಾರಿಗಳು ಇತ್ತೀಚೆಗೆ ಪ್ರಾರಂಭವಾಗಿದೆ. ಸಾರ್ವಜನಿಕರಿಗೆ ಸಿಟ್ ಔಟ್‌ಗಳೊಂದಿಗೆ ಸಣ್ಣ ಅಂಗಡಿಗಳು ಮತ್ತು ಗುಡಿಸಲುಗಳನ್ನು ನಿರ್ಮಿಸುವ ಮತ್ತು ರಸ್ತೆಯನ್ನು ಸುಂದರಗೊಳಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಂದಿನ ಕೆಲವು ತಿಂಗಳೊಳಗೆ ಇದು ಪೂರ್ಣಗೊಳ್ಳಲಿದೆ. ಅಲ್ಲಿನ ಅಂಗಡಿಗಳು ಮತ್ತು ಹೊಟೆಲ್‌ ಜಾಗಗಳನ್ನು ತಿನಿಸುಗಳ ಮಾರಾಟ ಮಾಡುವ ಮಾಲೀಕರಿಗೆ ನೀಡಲಾಗುವುದು. ಸಾರ್ವಜನಿಕರು ಬೀದಿಗೆ ಭೇಟಿ ನೀಡಿ ತಮ್ಮ ನೆಚ್ಚಿನ ಆಹಾರವನ್ನು ಸವಿಯಬಹುದು ಎಂದು ರೆಡ್ಡಿ ತಿಳಿಸಿದ್ದಾರೆ.

Bengaluru To Get Its 2nd Official Food Street - Where and when will it open? Know details

ವಿವಿ ಪುರಂ ಫುಡ್ ಸ್ಟ್ರೀಟ್ ನವೀಕರಣ

ಏತನ್ಮಧ್ಯೆ, ವಿವಿ ಪುರಂನಲ್ಲಿರುವ ಬೆಂಗಳೂರಿನ ಅತ್ಯಂತ ಹಳೆಯ ಅಧಿಕೃತ ಆಹಾರ ಬೀದಿಯನ್ನು ಬಿಬಿಎಂಪಿ ನವೀಕರಿಸಲಿದೆ. ರಸ್ತೆಗೆ ಪಾಲಿಶ್ ಮಾಡಿದ ಗ್ರಾನೈಟ್ ಕಲ್ಲುಗಳನ್ನು ಹಾಕಲಾಗುವುದು, ಇಲ್ಲಿ ಎಲ್‌ಇಡಿ ಬೀದಿದೀಪಗಳನ್ನು ಅಳವಡಿಸಲಾಗುವುದು, ವಿವಿಧ ಮಾದರಿಗಳಲ್ಲಿ ಗ್ರಿಲ್‌ಗಳನ್ನು ಅಳವಡಿಸಿ, ಮರು ಬಣ್ಣ ಬಳಿಯುವ ಕೆಲಸವನ್ನೂ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿವಿ ಪುರಂನ ಮೊದಲ ಅಧಿಕೃತ ರಸ್ತೆಯಂತೆ ಈ ಆಹಾರ ಬೀದಿಯನ್ನು ಜನಪ್ರಿಯಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ.

ವಿವಿ ಪುರಂ ಫುಡ್ ಸ್ಟ್ರೀಟ್ ನಗರದ ದಕ್ಷಿಣ ಭಾಗಕ್ಕೆ ಸೇವೆ ಸಲ್ಲಿಸಿದರೆ, ಹೊಸ ಫುಡ್ ಸ್ಟ್ರೀಟ್ ಯಲಹಂಕ ಮತ್ತು ಪಕ್ಕದ ವಿದ್ಯಾರಣ್ಯಪುರ, ಸಹಕಾರನಗರ, ತಿಂಡ್ಲು, ಕೊಡಿಗೇಹಳ್ಳಿ, ಕೋಗಿಲು, ರಾಮಗೊಂಡನಹಳ್ಳಿ ಮತ್ತು ಉತ್ತರ ಹೊರವಲಯದ ಇತರ ಭಾಗಗಳಿಂದ ಸಾರ್ವಜನಿಕರನ್ನು ಆಕರ್ಷಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+