ಬೆಂಗಳೂರು: ಡಿ.30, 31ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರು, ಡಿಸೆಂಬರ್ 30: ಬೆಂಗಳೂರಿನಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಸುತ್ತಿರುವುದರಿಂದ ಸಿಲಿಕಾನ್ ಸಿಟಿಯ ಹಲವು ಏರಿಯಾಗಳಲ್ಲಿ ಇಂದು (ಡಿ.30) ಮತ್ತು ನಾಳೆ (ಡಿ.31) ಪವರ್ ಕಟ್ ಇರಲಿದೆ.

ಬೆಂಗಳೂರಿಗರಿಗೆ ಪ್ರತಿನಿತ್ಯ ಇರುವ ಹಲವು ಸಮಸ್ಯೆಗಳ ಜೊತೆ ವಿದ್ಯುತ್ ಕಡಿತ ಸಂಪರ್ಕ ಸಮಸ್ಯೆಯು ದೊಡ್ಡ ತೊಂದರೆಯಾಗಿ ಪರಿಣಮಿಸಿದೆ. ಈಗಾಗಲೇ ಒಂದಲ್ಲ ಒಂದು ಕಾರಣ ಹೇಳಿ ಪ್ರತಿನಿತ್ಯ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಬೆಸ್ಕಾಂ ವಿದ್ಯುತ್ ಕಡಿತ ಮಾಡುತ್ತಲೇ ಇದೆ. ಹೀಗಾಗಿ ಎಷ್ಟೋ ಜನರು ತಮ್ಮ ಹಲವು ಅಗತ್ಯಗಳನ್ನು ಪೂರೈಕೆ ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿ ಇದ್ದಾರೆ.

ನಗರದಲ್ಲಿ ಗುರುವಾರ (ಇಂದು) ಮತ್ತು ಶುಕ್ರವಾರ ವಿದ್ಯುತ್ ನಿರ್ವಹಣೆ ಮತ್ತು ಇತರ ಕೆಲಸಗಳಿಂದಾಗಿ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ. ಬೆಂಗಳೂರಿನ ಬನಶಂಕರಿ, ಜೆ.ಪಿ ನಗರ, ಯಶವಂತಪುರ, ಬಿಇಎಲ್​ ಸೇರಿ ಹಲವು ಏರಿಯಾಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಕರೆಂಟ್ ಇರುವುದಿಲ್ಲ.

Bengaluru To Face Power Cuts On December 30 and 31; Full Details

ಡಿಸೆಂಬರ್ 30ರಂದು ದಕ್ಷಿಣ ವಲಯದಲ್ಲಿ ವಿದ್ಯುತ್ ವ್ಯತ್ಯಯ
ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಜೆ.ಪಿ ನಗರ 6ನೇ ಹಂತ, ಪುಟ್ಟೇನಹಳ್ಳಿ, ಸಂಗಮ್ ಸರ್ಕಲ್, ಎಲ್ಐಸಿ ಕಾಲೋನಿ, ಜೆಪಿ ನಗರ 1ನೇ ಹಂತ, ಬನಶಂಕರಿ 2ನೇ ಹಂತ, ಅಂಬೇಡ್ಕರ್ ನಗರ, ಎಸ್ಪಿ ರಸ್ತೆ, ಉತ್ತರಹಳ್ಳಿ ಮುಖ್ಯ ರಸ್ತೆ, ಜೆ.ಪಿ ನಗರ2 ನೇ ಹಂತ, 3ನೇ ಹಂತ, 4ನೇ ಹಂತ, 15ನೇ ಹಂತ, ಕ್ರಾಸ್, ಡಾಲರ್ ಲೇಔಟ್, ಮುನಿರೆಡ್ಡಿ ಲೇಔಟ್, ಚಿಕ್ಕಲಸಂದ್ರ ಬಸ್ ನಿಲ್ದಾಣ, ಸಿದ್ದಾಪುರ, ಈಜಿಪುರ, ಮಾರತಹಳ್ಳಿ, ಸಂಜಯನಗರ, ಮಂಜುನಾಥ ನಗರ, ಅಶ್ವಥ್ ನಗರ ಮತ್ತು ಕೆಆರ್‌ಬಿ ಲೇಔಟ್‌ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಉತ್ತರ ವಲಯ
ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಯಶವಂತಪುರ, ಅಂಬೇಡ್ಕರ್ ನಗರ, ಮಾದರಿ ಕಾಲೋನಿ, ಕೆ.ಎನ್ ಎಕ್ಸ್‌ಟೆಕ್ಷನ್, ಎಲ್‌ಎನ್ ಕಾಲೋನಿ, ಸಿದ್ದಾರ್ಥ ಸ್ಲಂ, ರಾಮಚಂದ್ರಾಪುರ ಗ್ರಾಮ, ಆದಿತ್ಯ ನಗರ, ಎಂಎಸ್ ಪಾಳ್ಯ ಸೇರಿದಂತೆ ಪೀಡಿತ ಪ್ರದೇಶಗಳಲ್ಲಿ , ಅಕ್ಷಯನಗರ, ದೊಡ್ಡಬೇಟಹಳ್ಳಿ, ಮಾರುತಿ ನಗರ, ಭಾಗ ವಿದ್ಯಾರಣ್ಯಪುರ, ಬಸವ ಸಮಿತಿ ನಂಜಪ್ಪ ಸರ್ಕಲ್, ತಿಂಡ್ಲು ಗ್ರಾಮ, ಅಮೃತಹಳ್ಳಿ, ಜಕ್ಕೂರು, ಆನಂದನಗರ, ಎಸ್‌ಬಿಎಂ ಕಾಲೋನಿ, ಕುಂತಿ ಗ್ರಾಮ, ಹೆಬ್ಬಾಳ, ವಿನಾಯಕ ನಗರ, ಶೆಟ್ಟಿಹಳ್ಳಿ ಮತ್ತು ಮಲ್ಲಸಂದ್ರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

Bengaluru To Face Power Cuts On December 30 and 31; Full Details

ಪಶ್ಚಿಮ ವಲಯ
ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಉತ್ತರಹಳ್ಳಿ ರಸ್ತೆ, ಕೋನಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಭೂಮಿಕಾ ಲೇಔಟ್, ಪಟಂಗಿರಿ, ಬಿಎಚ್‌ಇಎಲ್ ಲೇಔಟ್, ಶ್ರುಸ್ತಿ ನಗರ, ವೀರಭದ್ರೇಶ್ವರ ನಗರ, ಡಿ ಗ್ರೂಪ್ ಲೇಔಟ್, ಹೊಸಹಳ್ಳಿ ರಸ್ತೆ, ಗಂಟಕನದೊಡ್ಡಿ, ಅಪೂರ್ವ ಲೇಔಟ್, ಡಿ.ಎಸ್.ಎಸ್.ಎಸ್.ಬಿ. ಬಿಇಎಲ್ 1ನೇ ಹಂತ, ಬಿಇಎಲ್ 2ನೇ ಹಂತ ಮತ್ತು ಭವಾನಿನಗರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಪೂರ್ವ ವಲಯ
ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಜೋಗುಪಾಳ್ಯ ಮುಖ್ಯ ಚಾನಲ್ ರಸ್ತೆ, ಇಲ್ಪೆ ತೋಪು, ವೆಂಕಟೇಶ್ವರ ಲೇಔಟ್, ಬಿಳೇಶಿವಾಲೆ ಮತ್ತು ಕಾಫಿ ಬೋರ್ಡ್ ಲೇಔಟ್ ನಲ್ಲಿ ವಿದ್ಯುತ್ ಕಡಿತವಾಗಲಿದೆ..

ಡಿಸೆಂಬರ್ 31ರಂದು ದಕ್ಷಿಣ ವಲಯದಲ್ಲಿ ವಿದ್ಯುತ್ ವ್ಯತ್ಯಯ
ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಆರ್‌ಬಿಐ ಲೇಔಟ್, ಯಾದವ್ ಫಾರ್ಮ್, ಸಿದ್ದನ ಲೇಔಟ್, ಕರೆಸಂದ್ರ ಬನಶಂಕರಿ 2ನೇ ಹಂತ, ಕಿಡ್ನಿ ಫೌಂಡೇಶನ್, ಆರ್‌ಕೆ ಲೇಔಟ್, ಜೆಪಿ ನಗರ 5ನೇ ಹಂತ, ಕೆಆರ್ ಲೇಔಟ್, ವೆಂಕಟಾದ್ರಿ ಲೇಔಟ್, ದೊರೆಸಾನಿಪಾಳ್ಯ, ಚಿಕ್ಕಲಸಂದ್ರ, ಅಶ್ವಿನಿ ಲೇಔಟ್ ಮತ್ತು ಕೆಆರ್‌ಬಿ ಲೇಔಟ್‌ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Bengaluru To Face Power Cuts On December 30 and 31; Full Details

ಉತ್ತರ ವಲಯ
ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮತ್ತಿಕೆರೆ, ಎಸ್‌ಬಿಎಂ ಕಾಲೋನಿ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಬಂಡೆಪ್ಪ ಗಾರ್ಡನ್, ಟಾಟಾ ನಗರ, ದೇವಿ ನಗರ, ಲೊಟ್ಟೆಗೋಳಹಳ್ಳಿ, ಎಲ್‌ಕೆಆರ್ ನಗರ, ಜಕ್ಕೂರು ಮುಖ್ಯರಸ್ತೆ, ಬಾಗಲೂರು ಮುಖ್ಯರಸ್ತೆ, ಬಾಬಾ ನಗರ, ವಿನಾಯಕನಗರ ಮತ್ತು ದ್ವಾರಕಾ ನಗರ ಸೇರಿದಂತೆ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

ಪಶ್ಚಿಮ ವಲಯ
ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕಮಲಾನಗರ ಮುಖ್ಯರಸ್ತೆ, ಗೃಹಲಕ್ಷ್ಮಿ ಲೇಔಟ್ 2ನೇ ಹಂತ, ಟಿಆರ್ ನಗರ, ಕೆಇಬಿ ಕ್ವಾರ್ಟರ್ಸ್ ಬಳಿ, ಬಾಲಶಾಪಲ್ಲಿಯ ರಸ್ತೆ, ವಿದ್ಯಾಪೀಠ ರಸ್ತೆ, ಟಿಜಿ ಪಾಳ್ಯ ಮುಖ್ಯರಸ್ತೆ, ಆಂಧ್ರಹಳ್ಳಿ, ವಿದ್ಯಾಮಾನ ನಗರ, ಎಸ್‌ಎಲ್‌ವಿ ಕೈಗಾರಿಕಾ ಪ್ರದೇಶ, ಪೊಲೀಸ್ ಕ್ವಾರ್ಟರ್ ಹೊಸಹಳ್ಳಿ, ಎಸ್‌ಐಆರ್ ಎಂವಿ ಲೇಔಟ್ 1 ಬ್ಲಾಕ್, ಬಿಡಿಎ ಏರಿಯಾ ಬ್ಲಾಕ್ 1, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಕುವೆಂಪು ಮುಖ್ಯರಸ್ತೆ, ಗಂಗಾನಗರ, ಮಲ್ಲತ್ತಳ್ಳಿ ಲೇಔಟ್, ದ್ವಾರಕಾಬಸ ರಸ್ತೆ, ಎಸ್ ಐಆರ್ ಎಂವಿ ಲೇಔಟ್ 5ನೇ ಬ್ಲಾಕ್, ಎಸ್ ಐಆರ್ ಎಂವಿ ಲೇಔಟ್ 3ನೇ ಬ್ಲಾಕ್, ಕೆಂಗೇರಿ, ಮೈಲಾಸಂದ್ರದ ಕೆಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಪೂರ್ವ ವಲಯ
ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನಾಗವಾರ ಪಾಳ್ಯ ರಸ್ತೆ, ಎನ್‌ಬಿಸಿ ಲೇಔಟ್ ಮತ್ತು ಬನ್ನಪ ಪಾರ್ಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ

Recommended Video

      India vs South Africa, 1st Test Day 4: Team India ಗೆಲುವಿಗೆ ಎದುರಾಯ್ತು ಅತಿದೊಡ್ಡ ಕಂಟಕ |Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+