ಜನವರಿಯಲ್ಲಿ ಟಿಕೆಟ್ ರಹಿತ ಪ್ರಯಾಣ: BMTC ವಸೂಲಿ ಮಾಡಿದ ದಂಡ ಎಷ್ಟು ಗೊತ್ತೇ?
ಮಹಾನಗರ ಸಾರಿಗೆ ಸಂಸ್ಥೆ (BMTC) ಜನವರಿ 2023 ರಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸುವ ಮೂಲಕ ಲಕ್ಷಾಂತರ ರೂಪಾಯಿ ಗಳಿಸಿದೆ. ಎಷ್ಟು ಲಕ್ಷ ಗಳಿಸಿದೆ ತಿಳಿಯಿರಿ
ಬೆಂಗಳೂರು, ಫೆಬ್ರವರಿ 23: ಮಹಾನಗರ ಸಾರಿಗೆ ಸಂಸ್ಥೆ (BMTC) ಜನವರಿ 2023 ರಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸುವ ಮೂಲಕ ಲಕ್ಷಾಂತರ ರೂಪಾಯಿ ಗಳಿಸಿದೆ. ಟಿಕೆಟ್ ರಹಿತ ಪ್ರಯಾಣವನ್ನು ಪತ್ತೆಹಚ್ಚಲು ಬೆಂಗಳೂರು ನಗರ ಮತ್ತು ಸುತ್ತಮುತ್ತ ಓಡುವ ಬಸ್‌ಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಬಿಎಂಟಿಸಿ ಸಿಬ್ಬಂದಿ ತಿಂಗಳ ಅವಧಿಯಲ್ಲಿ 16,226 ಟ್ರಿಪ್‌ಗಳನ್ನು ಪರಿಶೀಲಿಸಿದ್ದಾರೆ. 3,591 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಿ, 6.77 ಲಕ್ಷ ರೂ. ಕರ್ತವ್ಯಲೋಪ ಆರೋಪದಡಿ ಕಂಡಕ್ಟರ್‌ಗಳ ವಿರುದ್ಧ 1,521 ಪ್ರಕರಣಗಳು ದಾಖಲಾಗಿವೆ.

ಮಹಿಳಾ ಸೀಟುಗಳನ್ನು ಆಕ್ರಮಿಸಿಕೊಂಡಿದ್ದಕ್ಕಾಗಿ 322 ಪುರುಷ ಪ್ರಯಾಣಿಕರಿಗೆ ಬಿಎಂಟಿಸಿ ದಂಡ ವಿಧಿಸಿದೆ ಮತ್ತು ಅವರಿಂದ 32,200 ರೂಪಾಯಿ ದಂಡ ವಸೂಲು ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಸ್ ಪ್ರಯಾಣಿಕರೊಬ್ಬರಿಗೆ 1 ರೂಪಾಯಿ ನಿರಾಕರಿಸಿದಕ್ಕಾಗಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 2,000 ರೂಪಾಯಿ ಪರಿಹಾರವನ್ನು ನೀಡುವಂತೆ BMTC ಗೆ ಆದೇಶಿಸಿದೆ.
ಹಲವಾರು ಮಾಧ್ಯಮ ವರದಿಗಳ ಪ್ರಕಾರ, 2019 ರಲ್ಲಿ, ರಮೇಶ್ ನಾಯ್ಕ್ ಎಂಬ ವ್ಯಕ್ತಿ ಶಾಂತಿನಗರದಿಂದ ಮೆಜೆಸ್ಟಿಕ್ ಬಸ್ ಡಿಪೋಗೆ ಬಿಎಂಟಿಸಿ ಬಸ್‌ನಲ್ಲಿ ಹೋಗಿದ್ದರು, ಈ ಸಂದರ್ಭದಲ್ಲಿ ಕಂಡಕ್ಟರ್ 29 ರೂ.ಗೆ ಟಿಕೆಟ್ ನೀಡಿದ್ದರು. ದೂರುದಾರರು 30 ರೂ ಪಾವತಿಸಿದರು ಮತ್ತು ಚೇಂಜ್ ಕೊಡಲಿಲ್ಲ.

ಈ ಪ್ರಕರಣದ ಸಂಬಂಧ ತಮ್ಮ ಹೋರಾಟವನ್ನು ಮುಂದುವರೆಸಿದ ನಾಯಕ್ ನಂತರ ಬಿಎಂಟಿಸಿಯ ಉನ್ನತ ಅಧಿಕಾರಿಗಳಿಗೆ ಕಂಡಕ್ಟರ್ ಬಗ್ಗೆ ದೂರು ನೀಡಿದರು. ಅಧಿಕಾರಿಗಳು ಅವರನ್ನು ಗೇಲಿ ಮಾಡಿದ್ದರು.
ಇದರಿಂದ ಅಸಮಾಧಾನಗೊಂಡ ಅವರು ಸ್ಥಳೀಯ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿ, 15 ಸಾವಿರ ರೂಪಾಯಿಗಳ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು.
ಇದೀಗ ನ್ಯಾಯಾಲಯವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ವ್ಯಕ್ತಿಗೆ 2,000 ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ದೂರುದಾರರ ಕಾನೂನು ವೆಚ್ಚಕ್ಕಾಗಿ 1,000 ರೂಪಾಯಿಗಳನ್ನು ನೀಡುವಂತೆ ನ್ಯಾಯಾಲಯವು BMTC ಗೆ ಆದೇಶಿಸಿದೆ.
ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯವು, '1 ರೂ. ಆಗಿದ್ದರೂ, ಬಾಕಿಯನ್ನು ಪಡೆಯುವುದು ಗ್ರಾಹಕನ ಹಕ್ಕು' ಎಂದು ಹೇಳಿದೆ.












Click it and Unblock the Notifications