ಬೆಂಗಳೂರಿನಲ್ಲಿ ವರ್ಷಾಂತ್ಯಕ್ಕೆ ಹಿಮದಂಥ ಚಳಿ

ಬೆಂಗಳೂರು, ಡಿಸೆಂಬರ್ 28 : ನಗರ ಸೇರಿದಂತೆ ಹಲವೆಡೆ ಮೈನಡುಗಿಸುವ ಚಳಿ ಮುಂದುವರೆದಿದೆ. ದಿನೇ ದಿನೇ ಕನಿಷ್ಠ ತಾಪಮಾನ ಕ್ಷೀಣಿಸುತ್ತಾ ಹೋಗುತ್ತಿದೆ. ಕಳೆದ ಎರಡು ದಿನಗಳ ಹಿಂದೆ 16 ಡಿಗ್ರಿ ಸೆ. ಇದ್ದ ಕನಿಷ್ಠ ತಾಪಮಾನ ಇದೀಗ 15-12 ಡಿಗ್ರಿ ಸೆ.ಗೆ ಬಂದು ನಿಂತಿದೆ.

ಈ ಬಾರಿ ವರ್ಷಾಂತ್ಯ ಹಾಗೂ ಹೊಸ ವರ್ಷದ ಆರಂಭವನ್ನು ಚಳಿಯೊಂದಿಗೆ ಬರಮಾಡಿಕೊಳ್ಳಬೇಕಾಗಿದೆ. ಈ ಚಳಿ ಹೊಸ ವರ್ಷದ ಸಡಗರವನ್ನು ಇಮ್ಮಡಿಗೊಳಿಸಲಿದೆ ಅದರೊಂದಿಗೆ ಹಲವಾರು ರೋಗಗಳಿಗೂ ಸಾಕ್ಷಿಯಾಗಬಹುದು.

This time, Bengaluru new year celebration chills more!

ಡಿಸೆಂಬರ್ ಅಂತ್ಯದ ವರೆಗೂ ಇದೇ ರೀತಿ ಮುಂದುವರೆಯಲಿದ್ದು ಕನಿಷ್ಠ 9 ರಿಂದ 10 ಡಿಗ್ರಿ ಸೆ.ವರೆಗೆ ಬಂದು ತಲುಪುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಮುಂದಿನ ೪೮ ಗಂಟೆಗಳ ಕಾಲ ರಾಜ್ಯಾದ್ಯಂತ ಒಣಹವೆ ಮುಂದುವರೆಯಲಿದೆ.

ಗುರುವಾರ ಸಂಜೆಯ ವೇಳೆಗೆ ಬೆಂಗಳೂರಿನಲ್ಲಿ 12 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗುವ ಸಾದ್ಯತೆ ಇದೆ. ವಿಜಯಪುರದಲ್ಲಿ9.6 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ.

ಬೆಂಗಳೂರು ನಗರ ಗರಿಷ್ಠ ತಾಪಮಾನ 28 ಡಿಗ್ರಿ ಸೆ. ಕನಿಷ್ಠ ತಾಪಮಾನ 15 ಡಿಗ್ರಿ ಸೆ, ಕೆಐಎಎಲ್ ಗರಿಷ್ಠ ತಾಪಮಾನ 28 ಡಿಗ್ರಿ ಸೆ. ಕನಿಷ್ಠ ತಾಪಮಾನ 13 ಡಿಗ್ರಿ ಸೆ, ಎಚ್ ಎಎಲ್ ನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆ. ಹಾಗೂ ಕನಿಷ್ಠ ತಾಪಮಾನ 13 ಡಿಗ್ರಿ ಸೆ, ದಾಖಲಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಮಾಹಿತಿ ಪ್ರಕಾರ ವಿಜಯಪುರರದ ದಡಮತ್ತಿ ಹೋಬಳಿಯಲ್ಲಿ 8 ಡಿಗ್ರಿ ಸೆ. ನಷ್ಟು ತಾಪಮಾನ ದಾಖಲಾಗಿದೆ. ಇನ್ನು 2 ದಿನಗಳಲ್ಲಿ ಕರ್ನಾಟಕದ ದಕ್ಷಿಣ ಭಾಗದ ಆಂತರಿಕ ಪ್ರದೇಶಗಳಲ್ಲಿ ಚಳಿ ವಾತಾವರಣ ನಿರ್ಮಾಣವಾಗಲಿದೆ. ಈ ಭಾಗದಲ್ಲಿ ಇನ್ನೆರಡು ದಿನಗಳ ಕಾಲ ಮಂಜು ಕವಿದ ವಾತಾವರಣ ಮುಂದುವರೆಯಲಿದೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+