ಬಿಬಿಎಂಪಿಗೆ ಸೇರಿದ ವಾಹನವನ್ನೇ ಕದ್ದ ಐನಾತಿ ಕಳ್ಳರು
ಬೆಂಗಳೂರು, ನವೆಂಬರ್ 19: ಬಿಎಂಪಿಯ ಹೂಡಿ ಉಪವಿಭಾಗದ ಕಚೇರಿಯಲ್ಲಿ ಕಳ್ಳತನ ನಡೆದಿದ್ದು, ಬಿಬಿಎಂಪಿಗೆ ಸೇರಿದ ವಾಹವನ್ನೇ ಕಳ್ಳರು ಕದ್ದಿದ್ದಾರೆ.
ಕಳ್ಳತನವು ಶುಕ್ರವಾರ ರಾತ್ರಿಯೇ ನಡೆದಿದ್ದು, ಘಟನೆ ತಡವಾಗಿ ಬೆಳಕಿಕೆ ಬಂದಿದೆ. ಶುಕ್ರವಾರ ರಾತ್ರಿ ಬೀಗ ಮುರಿದು ಬಿಬಿಎಂಪಿ ಕಚೇರಿಗೆ ನುಗ್ಗಿದ ಕಳ್ಳರು ವಾಹನಗಳ ಬೀಗ ತೆಗೆದುಕೊಂಡು ವಾಹನಗಳನ್ನು ಚಲಾಯಿಸಿಕೊಂಡು ಹೋಗಿದ್ದಾರೆ.
ಬೆಳಿಗ್ಗೆ ಕಚೇರಿ ಬಳಿ ಬಂದಾಗ ಕಚೇರಿ ಮುಂದೆ ಇದ್ದ ಬಿಬಿಎಂಪಿಯ ಬುಲೆರೋ ಹಾಗೂ ಮತ್ತೊಂದು ವಾಹನ ನಾಪತ್ತೆ ಆಗಿರುವುದು ಗೊತ್ತಾಗಿದೆ. ಕೂಡಲೇ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಬಿಬಿಎಂಪಿ ವಾಹನಗಳನ್ನು ಕದ್ದ ಕಳ್ಳರು ಸ್ವಲ್ಪ ದೂರ ತೆಗೆದುಕೊಂಡು ಹೋಗಿ ಎಚ್‌ಬಿಆರ್ ಬಡಾವಣೆಯಲ ಆಲ್ನೇ ಹಂತದ, ನಾಳ್ಕನೇ ಮುಖ್ಯರಸ್ತೆಯ ಬಳಿ ಬಿಟ್ಟು ಹೋಗಿದ್ದಾರೆ. ಬಿಟ್ಟು ಹೋಗಿದ್ದ ವಾಹನವು ಶನಿವಾರ ಸಂಜೆ ಪತ್ತೆಯಾಗಿದೆ.
ಬಿಬಿಎಂಪಿ ಕಚೇರಿಗೆ ನುಗ್ಗಿ ಕಳ್ಳತನ ಮಾಡಿದ ಐನಾತಿ ಕದೀಮರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.












Click it and Unblock the Notifications