ವಾರಗಟ್ಟಲೆ ರಸ್ತೆಯಲ್ಲಿ ವಾಹನ ನಿಂತರೆ ದಂಡ!

Bangalore Traffic Police
ಬೆಂಗಳೂರು,ಏ.28:ಮನೆ ಮುಂದೆ ಖಾಲಿ ಜಾಗಗಳಲ್ಲಿ ವಾಹನವನ್ನು ಯಾರೋ ಪಾರ್ಕಿಂಗ್‌ ಮಾಡಿ ಹೋಗಿದ್ದಾರೆ. ಹಲವಾರು ದಿನ ಕಳೆದರೂ ವಾಹನ ಮಾತ್ರ ಅಲ್ಲಿಯೇ ಇರುತ್ತದೆ.ಅದರ ಮಾಲೀಕರು ಯಾರು ಎಂಬುದೇ ಮನೆಯವರಿಗೆ ಗೊತ್ತೇ ಆಗುವುದಿಲ್ಲ.ಬೆಂಗಳೂರಿನಲ್ಲಿ ಈ ರೀತಿಯ ದೂರು ನೀಡುವ ಸಾರ್ವ‌‌ಜನಿಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಈ ಸಮಸ್ಯೆ ನಿವಾರಿಸಲು ಹೊಸ ಪರಿಹಾರವನ್ನು ಕಂಡು ಹಿಡಿದಿದ್ದಾರೆ.

ಖಾಲಿ ಜಾಗ ಅಥವಾ ಪಾದಾಚಾರಿ ಮಾರ್ಗದಲ್ಲಿ ಅನುಮಾನಾಸ್ಪದವಾಗಿ ವಾರ, ತಿಂಗಳುಗಟ್ಟಲೆ ನಿಲ್ಲುವ ವಾಹನಗಳನ್ನು ಸಂಚಾರಿ ಪೊಲೀಸರು ವಶಕ್ಕೆ ತೆಗೆದುಕೊಳ್ಳಲಿದ್ದಾರೆ. ಮೇ.5ರಿಂದ ಸಂಚಾರಿ ಪೊಲೀಸರು ಈ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಲಿದ್ದು ಈ ವಾಹನಗಳ ಮಾಲೀಕರನ್ನು ಪತ್ತೆ ಮಾಡಿ ದಂಡವನ್ನು ವಿಧಿಸಿ,ಪ್ರಕರಣವನ್ನು ದಾಖಲಿಸಿಕೊಳ್ಳಲಿದ್ದಾರೆ.[ಬೆಂಗಳೂರಿಗರೆ ಹೆಲ್ಮೆಟ್ ಧರಿಸಿ, ಇಲ್ಲವೇ ದಂಡಕಟ್ಟಿ]

ಯಾಕೆ ಈ ಕ್ರಮ:ಹೊರ ರಾಜ್ಯಗಳಿಂದ ಬರುವ ಖತರ್ನಾಕ್‌ ಕಳ್ಳರು ಇಲ್ಲೇ ಸಿಗುವ ಬೈಕ್‌,ಕಾರುಗಳನ್ನು ಬಳಸಿ ಕಳ್ಳತನ ನಡೆಸಿ ಜನವಸತಿ ಹೆಚ್ಚಿರುವ ಪ್ರದೇಶಗಳಲ್ಲಿ ಅನುಮಾನ ಬಾರದಂತೆ ಈ ವಾಹನಗಳನ್ನು ಪಾರ್ಕ್‌ ಮಾಡಿ ಹೋಗುತ್ತಾರೆ.ಕಳ್ಳರು ಮತ್ತೊಮ್ಮೆ ಕಳ್ಳತನವೆಸಗಲು ಬರುವ ವರೆಗೂ ಈ ವಾಹನಗಳು ಹಾಗೆಯೇ ಅಲ್ಲೇ ನಿಂತಿರುತ್ತದೆ. ಈ ರೀತಿ ಕೃತ್ಯವೆಸಗದಂತೆ ತಡೆಯಲು ಪೊಲೀಸರು ಇದೀಗ ಈ ಕ್ರಮವನ್ನು ಅನುಸರಿಸಲು ಮುಂದಾಗುತ್ತಿದ್ದಾರೆ.[ಸಂಚಾರ ನಿಯಮ ಪಾಲಿಸಿ, ಬಹುಮಾನ ಪಡೆಯಿರಿ]

ಕರೆ ಮಾಡಿ ದೂರು ನೀಡಿ:ಸಾರ್ವ‌ಜನಿಕರಿಗೆ ವಾಹನಗಳ ಮೇಲೆ ಈ ರೀತಿಯ ಅನುಮಾನ ಬಂದಲ್ಲಿ ಪೊಲೀಸ್‌ ಕಂಟ್ರೋಲ್‌ ರೂಂ ದೂರವಾಣಿ ಸಂಖ್ಯೆ 100, 103 ಅಥವಾ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+