B Khata: ಯಾವೆಲ್ಲಾ ಬಿ - ಖಾತಾಗೆ ಎ - ಖಾತಾ ಸಿಗಲಿದೆ ಇಲ್ಲಿದೆ ಸರ್ಕಾರದ ಮಹತ್ವದ ಮಾಹಿತಿ!

B Khata: ಕಳೆದ ಹಲವು ವರ್ಷಗಳಿಂದ ಸಮಸ್ಯೆ ಆಗಿರುವ ಬಿ ಖಾತಾ ಸಮಸ್ಯೆಗೆ ಕೊನೆಗೂ ಪರಿಹಾರ ಕಂಡುಕೊಳ್ಳುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಬಿ - ಖಾತಾ ಹಾಗೂ ಯಾವುದೇ ಖಾತಾ ಇಲ್ಲದೆ ಇರುವ ಆಸ್ತಿದಾರರು ಖಾತಾ ಇದ್ದರೂ ಸೌಲಭ್ಯ ಸಿಗದೆ ಹಾಗೂ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗದೆ ಪರದಾಡುತ್ತಿದ್ದರು. ಅಲ್ಲದೇ ಈ ರೀತಿಯ ಆಸ್ತಿಗಳನ್ನು ಮಾರಾಟ ಹಾಗೂ ಖರೀದಿ ಮಾಡುವುದು ಸಹ ಬಹುದೊಡ್ಡ ಸಮಸ್ಯೆ ಆಗಿತ್ತು. ಇದೀಗ ಈ ಎಲ್ಲಾ ಸಮಸ್ಯೆಗಳಿಗೂ ರಾಜ್ಯ ಸರ್ಕಾರ ಪರಿಹಾರ ಕಂಡುಕೊಂಡಿದೆ. ಇನ್ನು ಬೆಂಗಳೂರು ಹಾಗೂ ರಾಜ್ಯದ ಯಾವೆಲ್ಲಾ ಖಾತೆಗಳಿಗೆ ಎ- ಖಾತಾ ಸಿಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕ ರಾಜ್ಯ ನಗರಾಭಿವೃದ್ಧಿ ಇಲಾಖೆಯು ಈಚೆಗೆ ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಿತಿಗಳು) ಕೆಲವು ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ಆಸ್ತಿಗಳಿಗೆ ಎ ಖಾತಾ ಪ್ರಮಾಣಪತ್ರವನ್ನು ನೀಡುವ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಿದೆ. ಹೊಸ ನಿಯಮಗಳ ಅಡಿಯಲ್ಲಿ ಎ ಖಾತಾ ಸಿಗಲಿರುವ ಕಟ್ಟಡಗಳು ಹಾಗೂ ಆಸ್ತಿಗಳನ್ನು ವಿಂಗಡಿಸಲಾಗಿದೆ.

These B-khata properties will get A-khata Here is important information from karnataka government

1. ಈಗಾಗಲೇ ಬಿ-ಖಾತಾ ಇರುವ ಖಾಲಿ ನಿವೇಶನಗಳಲ್ಲಿನ ಕಟ್ಟಡಗಳು ಮತ್ತು ಸಮುಚ್ಛಯ ಫ್ಲಾಟ್‌ಗಳನ್ನು ಹೊರತುಪಡಿಸಿ, ಅನಧಿಕೃತ ಲೇಔಟ್‌ಗಳು/ಭೂಮಿ/ಸೈಟ್‌ಗಳಲ್ಲಿ (ಖಾತಾ ಇಲ್ಲದೆ ಅಥವಾ ಬಿ-ಖಾತಾ ಹೊಂದಿರುವ) ಈಗಾಗಲೇ ನಿರ್ಮಿಸಲಾದ ಕಟ್ಟಡಗಳು ಇವುಗಳಿಗೆ ಎ ಖಾತಾ ಸೌಲಭ್ಯ ಸಿಗಲಿದೆ.

2. BBMP ಖಾತಾ ಇಲ್ಲದೆ ಸೆಪ್ಟೆಂಬರ್ 30, 2024 ಕ್ಕಿಂತ ಮೊದಲು ಒಂದೇ ಪ್ಲಾಟ್‌ನಲ್ಲಿ ನಿರ್ಮಿಸಲಾದ ಅನಧಿಕೃತ ಸಮುಚ್ಛಯ ಫ್ಲಾಟ್‌ಗಳು/ ಅಪಾರ್ಟ್‌ಮೆಂಟ್‌ಗಳು

3. ಅನುಮೋದನೆ ಇಲ್ಲದೆ ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ರ ಸೆಕ್ಷನ್ 95ರ ಅಡಿಯಲ್ಲಿ ಪರಿವರ್ತಿಸಲಾದ ಅನಧಿಕೃತ ಲೇಔಟ್‌ಗಳು ಹಾಗೂ ಖಾಲಿ ಪರಿವರ್ತಿಸದ ಕಂದಾಯ ಭೂಮಿ ಜಾಗ

4. 2024ರ ಸೆಪ್ಟೆಂಬರ್ 30ಕ್ಕಿಂತ ಮೊದಲು ನೋಂದಾಯಿಸಲಾದ ಭೂ ಪರಿವರ್ತನೆ ಮಾಡದ ಅನಧಿಕೃತ ಲೇಔಟ್‌ಗಳು

ಪ್ರಮುಖವಾಗಿ ಈ ನಾಲ್ಕು ಆಸ್ತಿಗಳು ಹಾಗೂ ಪ್ರಾಪರ್ಟಿಗಳಿಗೆ ಮುಂದಿನ ದಿನಗಳಲ್ಲಿ ಎ ಖಾತಾ ಸೌಲಭ್ಯ ಸಿಗಲಿದೆ.

ರಸ್ತೆ ಸಂಪರ್ಕ ಕಡ್ಡಾಯ: ಎಲ್ಲಾ ಕಟ್ಟಡಗಳು ಮತ್ತು ಲೇಔಟ್‌ಗಳಿಗೆ ಸಾರ್ವಜನಿಕ ರಸ್ತೆ ಸಂಪರ್ಕ ಕಡ್ಡಾಯ ಮಾಡಲಾಗಿದೆ. ಒಂದೊಮ್ಮೆ ಈ ವ್ಯವಸ್ಥೆ ಇಲ್ಲದೆ ಇದ್ದರೆ ಖಾಸಗಿ ರಸ್ತೆಯನ್ನು ಸಾರ್ವಜನಿಕ ಎಂದು ಘೋಷಿಸಬೇಕು. ಡೆವಲಪರ್/ಮಾಲೀಕರ ಬಳಿ ಇರುವ ಫ್ಲಾಟ್‌ಗಳಿಗೆ, ಭೂಮಿಯನ್ನು ಕೃಷಿಯೇತರ ಬಳಕೆಗೆ ಪರಿವರ್ತಿಸಬೇಕು, ನಂತರ KTCP ಕಾಯ್ದೆ, 1961 ರ ಅಡಿಯಲ್ಲಿ ಸೆಕ್ಷನ್ 17 ಅನುಮೋದನೆಯನ್ನು ಪಡೆದುಕೊಳ್ಳಬೇಕು. ಪ್ರತಿ ಫ್ಲಾಟ್/ಯೂನಿಟ್‌ಗೆ ಎ ಖಾತಾಗಳಿಗೆ ಕಟ್ಟಡ ಯೋಜನೆ ಅನುಮೋದನೆ (ಸೆಕ್ಷನ್ 15, KTCP ಕಾಯ್ದೆ, 1961) ಮತ್ತು ಆಕ್ಯುಪೆನ್ಸಿ ಪ್ರಮಾಣಪತ್ರದ ಅಗತ್ಯವಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+