Get Updates
Get notified of breaking news, exclusive insights, and must-see stories!

ಬೆಂಗಳೂರಿನ ಈ 10 ಏರಿಯಾಗಳು ಉತ್ತಮ ಸೌಕರ್ಯ, ಕಡಿಮೆ ಜೀವನ ನಿರ್ವಹಣಾ ವೆಚ್ಚ ಹೊಂದಿವೆ- ಯಾವುವು ತಿಳಿಯಿರಿ

ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಜೀವನ ನಿರ್ವಹಣಾ ವೆಚ್ಚವು ಗಗನಕ್ಕೇರಿದೆ. ಈ ಕೆಳಗೆ ಪಟ್ಟಿ ಮಾಡಿರುವ 10 ಏರಿಯಾಗಳಲ್ಲಿ ಜೀವನ ನಿರ್ವಹಣಾ ವೆಚ್ಚವು ಕಡಿಮೆ ಇದೆ. ಈ ಬಗ್ಗೆ ತಿಳಿಯಿರಿ

ಬೆಂಗಳೂರು ಭಾರತದ ಅತಿದೊಡ್ಡ ಐಟಿ ಕೇಂದ್ರವಾಗಿ ಮಾರ್ಪಟ್ಟಿದೆ. ಭಾರತದ ಅತಿದೊಡ್ಡ ನಗರಗಳಲ್ಲಿ ಒಂದಾಗಿರುವ ನಮ್ಮ ಬೆಂಗಳೂರು ಅನೇಕ ವೃತ್ತಿಪರರು ಮತ್ತು ಕಂಪನಿಗಳಿಗೆ ನೆಲೆಯಾಗಿದೆ. ಕಾರಣ, ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಜೀವನ ನಿರ್ವಹಣಾ ವೆಚ್ಚವು ಗಗನಕ್ಕೇರಿದೆ. ಈ ಕೆಳಗೆ ಪಟ್ಟಿ ಮಾಡಿರುವ 10 ಏರಿಯಾಗಳಲ್ಲಿ ಜೀವನ ನಿರ್ವಹಣಾ ವೆಚ್ಚವು ಕಡಿಮೆ ಇದೆ. ಅಲ್ಲಿ ನೀವು ಅನೇಕ ಸೌಕರ್ಯಗಳ ಜೊತೆಗೆ ಅಗ್ಗದಲ್ಲಿ ವಸತಿಗಳನ್ನು ಪಡೆಯಬಹುದು. ಇಲ್ಲಿ ಉತ್ತಮ ಸೌಕರ್ಯಗಳೂ ಇವೆ. ಸಾರಿಗೆ ಸೌಲಭ್ಯಗಳೂ ಉತ್ತಮವಾಗಿವೆ. ಈ ಏರಿಯಾಗಳ ಪಟ್ಟಿ, ಮಾಹಿತಿ ತಿಳಿಯಿರಿ.

These 10 Areas of Bangalore Have Good Amenities, Low Cost of Living

ಚಂದಾಪುರ

ಚಂದಾಪುರವು ಕೈಗೆಟುಕುವ ಪ್ರದೇಶಗಳಲ್ಲಿ ಒಂದಾಗಿದೆ. ಎಲೆಕ್ಟ್ರಾನಿಕ್ ಸಿಟಿ ಮತ್ತು ಐಟಿ ಹಬ್‌ಗೆ ಹತ್ತಿರದಲ್ಲಿ ವಾಸಿಸುವುದು ನಿಮ್ಮ ಉದ್ದೇಶವಾಗಿದ್ದರೆ ಉತ್ತಮ ಆಯ್ಕೆಯಾಗಿದೆ. ಮೆಟ್ರೋವನ್ನು ಕಾರ್ಯಗತಗೊಳಿಸಲಾಗುತ್ತಿದೆ. ಆದ್ದರಿಂದ ಇಲ್ಲಿ ವಾಸಿಸಲು ಉತ್ತಮ ಸಾರಿಗೆ ಸಂಪರ್ಕವೂ ಇದೆ. ಒನ್‌ ಬಿಎಚ್‌ಕೆ ಬಾಡಿಗೆ ಮನೆಗಳು ₹8,200 ರಿಂದ ಪ್ರಾರಂಭವಾಗುತ್ತವೆ ಮತ್ತು ₹9,200 ವರೆಗೆ ಬಾಡಿಗೆ ಮನೆಗಳು ಸಿಗುತ್ತವೆ. ಇಲ್ಲಿ ಅನೇಕ ಸೌಕರ್ಯಗಳೂ ಲಭ್ಯವಿದೆ.

These 10 Areas of Bangalore Have Good Amenities, Low Cost of Living

ದೇವನಹಳ್ಳಿ

ಬೆಂಗಳೂರಿನ ಉತ್ತರ ಭಾಗದಲ್ಲಿರುವ ದೇವನಹಳ್ಳಿಯು ನಗರದ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಒಂದಾಗಿದೆ. ಇದು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ದೇವನಹಳ್ಳಿ ಬ್ಯುಸಿನೆಸ್ ಪಾರ್ಕ್ ಮತ್ತು ಬಾಹ್ಯಾಕಾಶ ನಗರ ಮುಂತಾದ ಅನೇಕ ಸೌಕರ್ಯಗಳನ್ನು ಹೊಂದಿದೆ. ಇದು ವಿಮಾನ ನಿಲ್ದಾಣದಿಂದ ಹತ್ತಿರದಲ್ಲಿದ್ದರೂ ಸಹ, ನೀವು ₹ 9,000ಕ್ಕೆ ಕಡಿಮೆ ಬೆಲೆಗೆ ಅಪಾರ್ಟ್ಮೆಂಟ್ ಅನ್ನು ಪಡೆಯಬಹುದು ಮತ್ತು ಇದು ₹ 20,000 ವರೆಗೆ ಹೋಗಬಹುದು.

These 10 Areas of Bangalore Have Good Amenities, Low Cost of Living

ಎಲೆಕ್ಟ್ರಾನಿಕ್ ಸಿಟಿ

ಎಲೆಕ್ಟ್ರಾನಿಕ್ ಸಿಟಿ 800 ಎಕರೆಗಳಲ್ಲಿ ಹರಡಿರುವ ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ ಕೈಗಾರಿಕಾ ಪಾರ್ಕ್‌ಗೆ ಪ್ರಮುಖ ಕೇಂದ್ರವಾಗಿದೆ. ಇದನ್ನು ಹಂತ 1, 2 ಮತ್ತು 3 ಎಂದು ವಿಂಗಡಿಸಲಾಗಿದೆ. ಇದಕ್ಕೆ ಸಮೀಪವಿರುವ ಎಚ್‌ಎಸ್‌ಆರ್ ಲೇಔಟ್, ಹರ್ಲೂರು ಮತ್ತು ಬೊಮ್ಮನಹಳ್ಳಿಯಂತಹ ಅನೇಕ ಪ್ರದೇಶಗಳು ಅಭಿವೃದ್ಧಿ ಹೊಂದುತ್ತಿವೆ. ಈ ಪ್ರದೇಶವು ನಗರದಲ್ಲಿ ಅತ್ಯುತ್ತಮ ಪ್ರದೇಶವಾಗಿದ್ದರೂ ಸಹ, ಇದು ಕೈಗೆಟುಕುವ ಬೆಲೆಯಲ್ಲಿ ಮನೆಗಳು ದೊರೆಯುತ್ತವೆ. ಇಲ್ಲಿನ ಬಾಡಿಗೆಗಳು ₹ 9,000 ರಿಂದ ಪ್ರಾರಂಭವಾಗಬಹುದು ಮತ್ತು ₹ 20,000 ವರೆಗೆ ಇವೆ.

These 10 Areas of Bangalore Have Good Amenities, Low Cost of Living

ಹೊರಮಾವು

ಈ ಪ್ರದೇಶವು ಹೊರ ವರ್ತುಲ ರಸ್ತೆಯ ಬಳಿ ಇದೆ. ರಾಮಮೂರ್ತಿ ನಗರ, ಕಲ್ಯಾಣ ನಗರ ಮತ್ತು ಹೆಣ್ಣೂರನಂತಹ ಇತರ ಅಭಿವೃದ್ದಿ ಹೊಂದಿರುವ ಪ್ರದೇಶಗಳಿಂದ ಸುತ್ತುವರಿದಿದೆ. ಸುಪ್ರಸಿದ್ಧ ಟೆಕ್ ಪಾರ್ಕ್‌ಗಳು ಈ ಪ್ರದೇಶದ ಸುತ್ತಲೂ ಇರುವುದರಿಂದ ಮನೆ ಬಾಡಿಗೆಗೆ ಆದ್ಯತೆಯ ಸ್ಥಳವಾಗಿದೆ. ಬಾಡಿಗೆ ₹ 5,500 ರಿಂದ ಆರಂಭವಾಗುತ್ತದೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ₹ 40,000 ವರೆಗೆ ಹೋಗಬಹುದು.

These 10 Areas of Bangalore Have Good Amenities, Low Cost of Living

ಜಯನಗರ

ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಬರುವ ಜಯನಗರವು ಕೈಗೆಟುಕುವ ಬೆಲೆಯಲ್ಲಿ ಮನೆಗಳನ್ನು ಒದಗಿಸುತ್ತದೆ. ಇದು ಸುತ್ತಲೂ ಉತ್ತಮ ಆಹಾರ ಪಾಯಿಂಟ್‌ಗಳು ಮತ್ತು ಸೂಪರ್‌ ಮಾರ್ಕೆಟ್‌ಗಳನ್ನು ಹೊಂದಿದೆ. ಜಯನಗರವು ಅನೇಕ ಸೌಕರ್ಯಗಳನ್ನು ಹೊಂದಿದ್ದರೂ ಸಹ, ಬೆಂಗಳೂರಿನ ಇತರ ಭಾಗಗಳಿಗೆ ಹೋಲಿಸಿದರೆ ಇದು ಅಗ್ಗದ ವಸತಿಗಳನ್ನು ಒದಗಿಸುತ್ತದೆ. ಬಾಡಿಗೆಗಳು ₹10,700 ರಿಂದ ಪ್ರಾರಂಭವಾಗುತ್ತವೆ ಮತ್ತು ₹45,000 ಕ್ಕೆ ಹೋಗಬಹುದು.

These 10 Areas of Bangalore Have Good Amenities, Low Cost of Living

ಕನಕಪುರ ರಸ್ತೆ

ಕನಕಪುರ ರಸ್ತೆಯು ಬೆಂಗಳೂರಿನ ಹಸಿರಿನಿಂದ ಕೂಡಿದ ಪ್ರದೇಶಗಳಲ್ಲಿ ಒಂದಾಗಿದೆ. ಇದು ತ್ವರಿತ ಅಭಿವೃದ್ಧಿಯನ್ನು ಹೊಂದುತ್ತಿದೆ. ಈ ಪ್ರದೇಶವು ಜೆಪಿ ನಗರ, ಬನಶಂಕರಿ ಮತ್ತು ಅಂಜನಾಪುರದಂತಹ ಪ್ರದೇಶಗಳಿಂದ ಆವೃತವಾಗಿದೆ. ಈ ಪ್ರದೇಶವು ವಿವಿಧ ಹೆದ್ದಾರಿಗಳು ಮತ್ತು ರಸ್ತೆಗಳ ಸಂಪರ್ಕ ಹೊಂದಿದೆ. ತಡೆರಹಿತ ಸಂಪರ್ಕಗಳನ್ನೂ ಈ ರಸ್ತೆ ಹೊಂದಿದೆ. ಬಾಡಿಗೆ ಮನೆ ಬೆಲೆಗಳು ₹ 5,000 ಮತ್ತು ₹ 23,000 ವರೆಗೆ ಇರುತ್ತದೆ.

These 10 Areas of Bangalore Have Good Amenities, Low Cost of Living

ಮಾರತ್ತಹಳ್ಳಿ

ಮಾರತಹಳ್ಳಿಯು ವಾಸಿಸಲು ಉತ್ತಮ ಸ್ಥಳವಾಗಿದೆ. ಇಲ್ಲಿ ಹಲವು ಆಯ್ಕೆಗಳು ಲಭ್ಯವಿವೆ. ಅನೇಕ ಐಟಿ ವೃತ್ತಿಪರರು ಈ ಪ್ರದೇಶದಲ್ಲಿ ನೆಲೆಸಿರುವುದರಿಂದ ಇದು ಲಾಭದಾಯಕವಾಗಿದೆ. ದೊಮ್ಮಲೂರು, ವೈಟ್‌ಫೀಲ್ಡ್ ಮತ್ತು ಪ್ರಮುಖ ಐಟಿ ಹಬ್‌ಗಳಂತಹ ಅನೇಕ ಪ್ರಸಿದ್ಧ ಪ್ರದೇಶಗಳ ಸಂಪರ್ಕವನ್ನು ಮಾರತ್‌ಹಳ್ಳಿ ಹೊಂದಿವೆ. ಈ ಪ್ರದೇಶವು ಅನೇಕ ಸೌಕರ್ಯಗಳನ್ನು ಸಹ ಒಳಗೊಂಡಿದೆ. ಈ ಪ್ರದೇಶದಲ್ಲಿ ಬಾಡಿಗೆಗಳು ಗ್ರಾಹಕರ ಅಗತ್ಯತೆಗಳಿಗೆ ಅನುಗುಣವಾಗಿ ₹11,500 ರಿಂದ ಮತ್ತು ₹25,000 ವರೆಗೆ ಹೋಗಬಹುದು.

These 10 Areas of Bangalore Have Good Amenities, Low Cost of Living

ಸರ್ಜಾಪುರ

ಸರ್ಜಾಪುರವು ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿಯಂತಹ ವ್ಯಾಪಾರ ಕೇಂದ್ರಗಳ ಜೊತೆಗೆ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ. ಇದು ಬೆಂಗಳೂರಿನ ಅತ್ಯುತ್ತಮ ಪ್ರದೇಶಗಳಲ್ಲಿ ಒಂದಾಗಿದೆ. ಸರ್ಜಾಪುರವು ಹೊರವರ್ತುಲ ರಸ್ತೆಗಳಂತಹ ಪ್ರಮುಖ ರಸ್ತೆಗಳಿಗೆ ಸಂಪರ್ಕ ಹೊಂದಿದೆ. ಬಾಡಿಗೆಗಳು ₹ 9,000 ರಿಂದ ಪ್ರಾರಂಭವಾಗುತ್ತವೆ ಮತ್ತು ₹ 45,000 ಅಥವಾ ಅದಕ್ಕಿಂತ ಹೆಚ್ಚಿನದಕ್ಕೆ ಹೋಗುತ್ತವೆ.

These 10 Areas of Bangalore Have Good Amenities, Low Cost of Living

ಯಲಹಂಕ

ನಗರದ ಇತರ ಭಾಗಗಳಿಗೆ ಹೋಲಿಸಿದರೆ ಯಲಹಂಕ ಸ್ವಚ್ಛ ಮತ್ತು ಶಾಂತ ಪ್ರದೇಶವಾಗಿದೆ. ಇಲ್ಲಿ ಅನೇಕ ಯೋಜನೆಗಳು ಪ್ರಾರಂಭವಾಗಿವೆ. ಇದು ಏರ್ ಫೋರ್ಸ್ ಸ್ಟೇಷನ್ ಮತ್ತು ಸಿಆರ್‌ಪಿಎಫ್‌ ಬೇಸ್ ಅನ್ನು ಒಳಗೊಂಡಿದೆ. ಬಾಡಿಗೆ ಬೆಲೆಗಳು ₹3,700 ರಿಂದ ಪ್ರಾರಂಭವಾಗುತ್ತವೆ ಮತ್ತು ₹30,000 ಅಥವಾ ಅದಕ್ಕಿಂತ ಹೆಚ್ಚಿನದಕ್ಕೆ ಹೋಗುತ್ತವೆ.

These 10 Areas of Bangalore Have Good Amenities, Low Cost of Living

ಬನಶಂಕರಿ

ಬೆಂಗಳೂರಿನಲ್ಲಿ ಹೆಸರಾಂತ ಪ್ರದೇಶಗಳಲ್ಲಿ ಒಂದಾದ ಬನಶಂಕರಿ, ನಗರದ ಹಲವು ಭಾಗಗಳಿಗೆ ಸಂಪರ್ಕ ಹೊಂದಿದೆ. ಇದು ಹಲವು ಬಿಡಿಎ ಪಾರ್ಕ್‌ಗಳು, ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳು, ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಆರಾಮದಾಯಕ ಜೀವನಶೈಲಿಯನ್ನು ಒದಗಿಸುವ ಹಲವಾರು ಇತರ ಸೌಲಭ್ಯಗಳನ್ನು ಹೊಂದಿದೆ. ಈ ಪ್ರದೇಶವು ಆರಾಮದಾಯಕವಾದ ವಸತಿ ಸೌಕರ್ಯವನ್ನು ಒದಗಿಸುತ್ತದೆ. ಕೈಗೆಟುಕುವ ಜೀವನಶೈಲಿಯನ್ನು ಒದಗಿಸುತ್ತದೆ. ಇದು ಬೆಂಗಳೂರಿನ ದಕ್ಷಣ ಭಾಗದಲ್ಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+