ಜನವರಿ 5 ರ ವರೆಗೆ ಕಲಾಗಂಗೋತ್ರಿಯಿಂದ ನಾಟಕ ಪ್ರದರ್ಶನ
ಬೆಂಗಳೂರು, ಜನವರಿ 01: ಕಲಾಗಂಗೋತ್ರಿ ರಂಗ ತಂಡದ 49 ನೇ ವಾರ್ಷಿಕೋತ್ಸವ ಸಲುವಾಗಿ ಜನವರಿ 05 ರ ವರೆಗೆ ಅಮೃತ ರಂಗ ಹಬ್ಬ ನಾಟಕಗಳ ಪ್ರದರ್ಶನ ನಡೆಸಲಾಗುತ್ತಿದೆ.
ಜನವರಿ 01, ಬುಧವಾರದಂದು ರಂಗಶಂಕರದಲ್ಲಿ ರಾತ್ರಿ 7.30 ಕ್ಕೆ 'ಮುಖ್ಯಮಂತ್ರಿ' ನಾಟಕದ 699 ನೇ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಜನವರಿ 02 ರಂದು ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ಮಧ್ಯಾಹ್ನ 3.30 ಕ್ಕೆ 'ಮೂಕಿಟಾಕಿ' ಮೂಕಾಭಿನಯ ಇರಲಿದೆ.
ಎನ್ ಎಸ್ ಡಿ ವಿದ್ಯಾರ್ಥಿಗಳಿಂದ ಪ್ರಯೋಗ ನಾಟಕ
ಜನವರಿ 03 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 5.30 ಕ್ಕೆ 'ಮೈಸೂರು ಮಲ್ಲಿಗೆ' ನಾಟಕ ಪ್ರದರ್ಶನವಾಗಲಿದೆ. ಜನವರಿ 04 ರ ಸಂಜೆ 5.30 ಕ್ಕೆ 'ಮುಖ್ಯಮಂತ್ರಿ' ನಾಟಕದ 700 ನೇ ಪ್ರಯೋಗವಾಗಲಿದೆ.
ಎನ್.ಆರ್.ಕಾಲೋನಿಯ ಸಿ.ಅಶ್ವತ್ಥ್ ಕಲಾ ಭವನದಲ್ಲಿ ಜನವರಿ 05 ರಂದು 'ಮುದಿ ದೊರೆ ಮತ್ತು ಮೂವರು ಮಕ್ಕಳು' ನಾಟಕ ಪ್ರದರ್ಶನ ನಡೆಯಲಿದೆ. ಎಚ್.ಎಸ್.ವೆಂಕಟೇಶಮೂರ್ತಿ ನಾಟಕಗಳ ವಿಚಾರ ಸಂಕಿರಣವೂ ಆಯೋಜನೆಗೊಳ್ಳಲಿದೆ.