video: ಬೆಂಗಳೂರಿಗೆ ಬಂದಿಳಿದ ವಿಶ್ವದ ಬೃಹತ್ ವಿಮಾನ
ಬೆಂಗಳೂರು, ಅಕ್ಟೋಬರ್ 14: ವಿಶ್ವದ ಅತಿ ದೊಡ್ಡ ಮತ್ತು ಅತ್ಯಂತ ವಿಶಾಲವಾದ ಪ್ರಯಾಣಿಕ ವಿಮಾನ ಇಕೆ 562 ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಕ್ಟೋಬರ್ 14 ಶುಕ್ರವಾರ ಬಂದು ಇಳಿದಿದೆ.
ಎಮಿರೇಟ್ಸ್ ಏರ್‌ಲೈನ್ಸ್‌ನ ವಿಮಾನ ಸಂಖ್ಯೆ ಇಕೆ562 ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಕ್ಟೋಬರ್ 14 ರಂದು ಬೆಳಗ್ಗೆ 10 ಗಂಟೆಗೆ (ಸ್ಥಳೀಯ ಸಮಯ) ಟೇಕ್ ಆಫ್ ಆಗಿತ್ತು. ಇದು ಶುಕ್ರವಾರ ಮಧ್ಯಾಹ್ನ 3.40ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಹಿಂತಿರುಗುವಾಗ ವಿಮಾನ ಸಂಖ್ಯೆ ಇಕೆ 563 ನಲ್ಲಿ ಪ್ರಯಾಣಿಕರು ಎ380 ನಲ್ಲಿ ಪ್ರಯಾಣಿಸುತ್ತಾರೆ. ಬೆಂಗಳೂರಿನಿಂದ ಸಂಜೆ 6.40 ಕ್ಕೆ (ಸ್ಥಳೀಯ ಸಮಯ) ದುಬೈಗೆ ರಾತ್ರಿ 9 ಗಂಟೆಗೆ (ಸ್ಥಳೀಯ ಸಮಯ) ತಲುಪುತ್ತಾರೆ.
The world's largest passenger flight has a touch down @BLRAirport for the first time. Emirates flgt EK 562 arrrived rom Dubai on the South Runway #Avgeeks @XpressBengaluru @NewIndianXpress @KannadaPrabha @BLRAirport @emirates @DGCAIndia pic.twitter.com/7ywttJ5ptb
— S. Lalitha (@Lolita_TNIE) October 14, 2022
ಜಂಬೋ ಜೆಟ್ ವಿಮಾನದ ಮೊದಲ ಹಾರಾಟವು ಅಕ್ಟೋಬರ್ 31 ರಂದು ಬೆಂಗಳೂರಿಗೆ ನಡೆಯಲಿದೆ ಎಂದು ಎಮಿರೇಟ್ಸ್ ಏರ್‌ಲೈನ್ಸ್ ಮೊದಲೇ ಘೋಷಿಸಿತ್ತು. ಮೊದಲ ವಿಮಾನವು ಅಕ್ಟೋಬರ್ 30 ರಂದು ಸ್ಥಳೀಯ ಸಮಯ ರಾತ್ರಿ 9.25 ಕ್ಕೆ ದುಬೈನಿಂದ ಹೊರಟು ಅಕ್ಟೋಬರ್ 31 ರಂದು ಬೆಳಗ್ಗೆ 2.30 ಕ್ಕೆ ಬೆಂಗಳೂರಿಗೆ ಇಳಿಯಬೇಕಿತ್ತು. ಆದರೆ ಎರಡು ವಾರ ಮುಂಚೆಯೇ ಈ ಬೃಹತ್ ವಿಮಾನವು ಬೆಂಗಳೂರನ್ನು ತಲುಪಿದೆ.

ಇಕೆ 562 ಹಾರಾಟ ನಡೆಸುವ ಭಾರತದ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. ದೆಹಲಿ, ಮುಂಬೈ ಮತ್ತು ಹೈದರಾಬಾದ್ ಇತರ ಮೂರು. ದೆಹಲಿ ಮತ್ತು ಮುಂಬೈ ನಂತರ ಬೆಂಗಳೂರು ಜಂಬೋ ಜೆಟ್ ಹಾರುವ ಮೂರನೇ ಭಾರತೀಯ ನಗರವಾಗಿದೆ. ಇದು ಪೂರ್ಣ ಉದ್ದದ ಡಬಲ್ ಡೆಕ್ಕರ್ ವಿಮಾನವಾಗಿದ್ದು, 500 ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ. ಬೆಂಗಳೂರು ದುಬೈ ಮಾರ್ಗದಲ್ಲಿ ದೈನಂದಿನ ಎ380 ವಿಮಾನಗಳು ಮೂರು ವರ್ಗದ ಸಂರಚನೆಯಲ್ಲಿ ಹಾರಾಟ ನಡೆಸುತ್ತವೆ. ಬ್ಯುಸಿನೆಸ್, ಎಕಾನಮಿ ಮತ್ತು ಫಸ್ಟ್ ಕ್ಲಾಸ್‌ಗಳಲ್ಲಿ ಆಸನಗಳನ್ನು ನೀಡುತ್ತವೆ. ಎ380 ಆಸನಗಳು ಎಕಾನಮಿ ಕ್ಲಾಸ್‌ನಲ್ಲಿ ಹೆಚ್ಚುವರಿ ಲೆಗ್‌ರೂಮ್‌ನೊಂದಿಗೆ ವಿಶಾಲವಾಗಿರುತ್ತವೆ. ಬಿಸಿನೆಸ್ ಕ್ಲಾಸ್ ಸಂಪೂರ್ಣವಾಗಿ ಫ್ಲಾಟ್ ಸೀಟ್‌ಗಳನ್ನು ಹೊಂದಿರುತ್ತದೆ ಆದರೆ ಮೊದಲ ವರ್ಗವು ಖಾಸಗಿ ಸೂಟ್‌ಗಳು ಮತ್ತು ಶವರ್ ಸ್ಪಾಗಳನ್ನು ಹೊಂದಿರುತ್ತದೆ ಎಂದು ಏರ್‌ಲೈನ್ಸ್ ತಿಳಿಸಿದೆ.












Click it and Unblock the Notifications