ಐಸಿಎಸ್ ಇ, ಐಎಸ್ ಇ ಫಲಿತಾಂಶ: ಸಾಧಕರು ಯಾರ್ಯಾರು?
ಕೌನ್ಸಿಲ್ ಪಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಶನ್ (ಐಸಿಎಸ್ ಇ) ನಡೆಸಿದ 10 ನೇ ತರಗತಿ ಮತ್ತು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ಐಎಸ್ ಸಿಯ) 12ನೇ ತರಗತಿಯ ಫಲಿತಾಂಶ ಮೇ 29ರಂದು ಹೊರಬಿದ್ದಿದೆ.
ಬೆಂಗಳೂರು: ಮೇ 30: ಕೌನ್ಸಿಲ್ ಪಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಶನ್ ನಡೆಸಿದ 10 ನೇ ತರಗತಿ ಮತ್ತು ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ 12ನೇ ತರಗತಿಯ ಫಲಿತಾಂಶ ಮೇ 29ರಂದು ಹೊರಬಿದ್ದಿದೆ.
1,75,299 ವಿದ್ಯಾರ್ಥಿಗಳು ಐಸಿಎಸ್ ಇ ಪರೀಕ್ಷೆ ಬರೆದಿದ್ದರೆ, 73,633 ವಿದ್ಯಾರ್ಥಿಗಳು ಐಎಸ್ ಸಿ ಪರೀಕ್ಷೆ ಬರೆದಿದ್ದರು.[ಸಿಇಟಿ 2017 ಫಲಿತಾಂಶ ಪ್ರಕಟ, 1 ಗಂಟೆಗೆ ಆನ್ಲೈನಲ್ಲಿ ಲಭ್ಯ]

ಕರ್ನಾಟಕದಲ್ಲಿ ಐಸಿಎಸ್ ಇ ಪರೀಕ್ಷೆ ಬರೆದ 15,370 ವಿದ್ಯಾರ್ಥಿಗಳಲ್ಲಿ 15,339 ವಿದ್ಯಾರ್ಥಿಗಳು ಪಾಸಾಗಿದ್ದರೆ, ಐಎಸ್ ಇ ಪರೀಕ್ಷೆ ಬರೆದ 1356 ವಿದ್ಯಾರ್ಥಿಗಳಲ್ಲಿ 1343 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಐಸಿಎಸ್ ಇ 10ನೇ ತರಗತಿ ಫಲಿತಾಂಶದಲ್ಲಿ ಪುಣೆಯ ಹಚಿನ್ಸ್ ಹೈಸ್ಕೂಲಿನ ಮುಸ್ಕಾನ್ ಅಬ್ದುಲ್ಲಾ ಪಠಾಣ್(ಶೇ.99.4), ಬೆಂಗಳೂರಿನ ಸೇಂಟ್ ಪೌಲ್ಸ್ ಇಂಗ್ಲಿಷ್ ಸ್ಕೂಲಿನ ಅಶ್ವಿನಿ ರಾವ್ (ಶೇ.99.4) ಅಗ್ರಸ್ಥಾನ ಗಳಿಸಿದ್ದಾರೆ.
ಐಎಸ್ ಇ 12ನೇ ತರಗತಿ ಫಲಿತಾಂಶದಲ್ಲಿ ಬೆಂಗಳೂರಿನ ಮಲ್ಯ ಅದಿತಿ ಇಂಟರ್ ನ್ಯಾಶನಲ್ ಸ್ಕೂಲಿನ ನಿಕೋಲ್ ಮರಿಲಿ ಜೋಸೆಫ್ (ಶೇ.98.50) ಅಂಕ ಗಳಿಸಿ ಅಗ್ರಸ್ಥಾನ ಗಳಿಸಿದ್ದಾರೆ.












Click it and Unblock the Notifications