ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ 2017 ಫಲಿತಾಂಶ ಈಗ ಆನ್ ಲೈನ್ ನಲ್ಲಿ ಲಭ್ಯ

2017ರ ಸಿಇಟಿ ಫಲಿತಾಂಶವು ಮಂಗಳವಾರ(ಮೇ 30) ರಂದು ಮಧ್ಯಾಹ್ನ 1 ಗಂಟೆಯಿಂದ ಆನ್ ಲೈನ್ ನಲ್ಲಿ ವೀಕ್ಷಣೆ ಲಭ್ಯವಿರುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರಕಟಿಸಿದೆ.

By Mahesh
|
Google Oneindia Kannada News

ಬೆಂಗಳೂರು, ಮೇ 30: 2017ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ(ಮೇ 30) ಮಧ್ಯಾಹ್ನ 11.15 ಗಂಟೆ ಸುಮಾರಿಗೆ ಪ್ರಕಟಿಸಿದರು.

ಮಂಗಳವಾರ(ಮೇ 30) ರಂದು ಮಧ್ಯಾಹ್ನ 1 ಗಂಟೆಯಿಂದ ಆನ್ ಲೈನ್ ನಲ್ಲಿ ವೀಕ್ಷಣೆ ಲಭ್ಯವಿರುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರಕಟಿಸಿದೆ. ನಿಗದಿತ ವೇಳಾಪಟ್ಟಿಯಂತೆ ಜೂ.1ರಿಂದ ದಾಖಲೆಗಳ ಪರಿಶೀಲನೆ ಆರಂಭವಾಗಲಿದೆ.[ಸಿಇಟಿ 2017 : ಪ್ರತೀಕ್ ಹಾಗೂ ರಕ್ಷಿತ ಟಾಪರ್ಸ್]

* ಇಂಜಿನಿಯರಿಂಗ್ ನಲ್ಲಿ ಅಗ್ರಸ್ಥಾನ ಪ್ರತೀಕ್ ನಾಯಕ್ ಟಾಪರ್, ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜು.
* ದ್ವಿತೀಯ ಸ್ಥಾನದಲ್ಲಿ ಸುಮಂತ್ ಹೆಗಡೆ,ವಿವಿಎಸ್ ಸರ್ದಾರ್ ಕಾಲೇಜು
* ಮೂರನೇ ಸ್ಥಾನದಲ್ಲಿ ಅನಿರುದ್ಧ್, ಆರ್ ವಿ ಪಿಯು ಕಾಲೇಜು, ಬೆಂಗಳೂರು

ಮೇ 27ರಂದು ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟಗೊಳಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿತ್ತು. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ) ಹಾಗೂ ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷಟ್ (ಐಸಿಎಸ್‍ಇ)ಮಾನ್ಯತೆ ಹೊಂದಿರುವ ಕಾಲೇಜುಗಳಲ್ಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆ ತಡವಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ವಿಳಂಬವಾಗಿತ್ತು. ಇಂದು ಕೂಡಾ 11 ಗಂಟೆಗೆ ಪ್ರಕಟವಾಗಬೇಕಿದ್ದ ಫಲಿತಾಂಶ ವಿಳಂಬವಾಗಿದೆ.

Karnataka CET Results 2017 at 11 AM on May 30, 2017

ಸಿಇಟಿ ಫಲಿತಾಂಶ ಚೆಕ್ ಮಾಡುವುದು ಹೇಗೆ?:
* ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ
* Kea.kar.nic.in ಅಥವಾ Karresults.nic.in

* "ಸಿಇಟಿ 2017" ಬಟನ್ ಮೇಲೆ ಕ್ಲಿಕ್ ಮಾಡಿ
* ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ
* ರಿಸಲ್ಟ್ ಪಡೆಯಿರಿ, ಡೌನ್ ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ

ವಿವಿಧ ವೃತ್ತಿಪರ ಕೋರ್ಸ್(ಬಿಇ, ಬಿಫಾರ್ಮಾ, ಆಯುಷ್, ಕೃಷಿ ಇಂಜಿನಿಯರಿಂಗ್) ಗಳ ಪ್ರವೇಶಕ್ಕಾಗಿ ನಡೆಯುವ 2017ನೇ ಸಾಲಿನ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ 2 ಹಾಗೂ 3ರಂದು ನಡೆಸಲಾಗಿತ್ತು. ಬೆಂಗಳೂರಿನ 82 ಸೇರಿ ರಾಜ್ಯಾದ್ಯಾಂತ 404 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 94,415 ವಿದ್ಯಾರ್ಥಿ ಹಾಗೂ 90,996 ವಿದ್ಯಾರ್ಥಿನಿಯರು ಸೇರಿದಂತೆ 1,85,411 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಸರ್ಕಾರದಿಂದ ಉಚಿತ ಶಿಕ್ಷಣ : 'ಸಿಇಟಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಐದು ಜನರಿಗೆ ಅವರ ಕೋರ್ಸ್ ಮುಗಿಯುವವರೆಗೆ ಸರ್ಕಾರದಿಂದ ಉಚಿತ ಶಿಕ್ಷಣ ನೀಡಲಾಗುತ್ತದೆ' ಎಂದು ಕರ್ನಾಟಕ ಸರ್ಕಾರ 2016ರಲ್ಲೇ ಘೋಷಿಸಿದೆ.

English summary
The Karnataka CET results 2017 announced today by higher education minister Basavaraja Rayareddy. The results are now online. Results can be accessed on the official website. The CET results were postponed due to a delay in the announcement of the CBSE Class 12 results 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X