ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ 2017 : ಪ್ರತೀಕ್ ಹಾಗೂ ರಕ್ಷಿತ ಟಾಪರ್ಸ್

ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯುವ 2017ನೇ ಸಾಲಿನ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪ್ರತೀಕ್ ಇಂಜಿನಿಯರಿಂಗ್ ನಲ್ಲಿ ಹಾಗೂ ರಕ್ಷಿತಾ ಹೋಮಿಯೋಪತಿ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಮೇ 30: 2017ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ(ಮೇ 30) ಮಧ್ಯಾಹ್ನ 11.15 ಗಂಟೆ ಸುಮಾರಿಗೆ ಪ್ರಕಟಿಸಿದರು. ಪ್ರತೀಕ್ ಅವರು ಇಂಜಿನಿಯರಿಂಗ್ ಹಾಗೂ ರಕ್ಷಿತಾ ಅವರು ಹೋಮಿಯೋಪತಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಟಾಪರ್ ಗಳ ಪಟ್ಟಿ ಇಲ್ಲಿದೆ.

ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯುವ 2017ನೇ ಸಾಲಿನ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ 2 ಹಾಗೂ 3ರಂದು ನಡೆಸಲಾಗಿತ್ತು. ಬೆಂಗಳೂರಿನ 82 ಸೇರಿ ರಾಜ್ಯಾದ್ಯಾಂತ 404 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 94,415 ವಿದ್ಯಾರ್ಥಿ ಹಾಗೂ 90,996 ವಿದ್ಯಾರ್ಥಿನಿಯರು ಸೇರಿದಂತೆ 1,85,411 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.[ಸಿಇಟಿ 2017 ಫಲಿತಾಂಶ ಪ್ರಕಟ]

ವಿವಿಧ ವಿಭಾಗಗಳಲ್ಲಿ ಟಾಪರ್ ಗಳ ಪಟ್ಟಿ ಮುಂದೆ ಓದಿ...

ಸರ್ಕಾರದಿಂದ ಉಚಿತ ಶಿಕ್ಷಣ : 'ಸಿಇಟಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಐದು ಜನರಿಗೆ ಅವರ ಕೋರ್ಸ್ ಮುಗಿಯುವವರೆಗೆ ಸರ್ಕಾರದಿಂದ ಉಚಿತ ಶಿಕ್ಷಣ ನೀಡಲಾಗುತ್ತದೆ' ಎಂದು ಕರ್ನಾಟಕ ಸರ್ಕಾರ 2016ರಲ್ಲೇ ಘೋಷಿಸಿದೆ. (ಒನ್ಇಂಡಿಯಾ ಸುದ್ದಿ)

ಇಂಜಿನಿಯರಿಂಗ್

ಇಂಜಿನಿಯರಿಂಗ್

1- ಪ್ರತೀಕ್ ಎಸ್ ನಾಯಕ್, ಎಕ್ಸ್ ಪರ್ಟ್ ಪಿಯು‌ಕಾಲೇಜ್ ಮಂಗಳೂರು
2-ಸುಮನ್ ಆರ್ ಹೆಗಡೆ, vvs ಸರ್ದಾರ್ ಪಟೇಲ್ ಕಾಲೇಜ್ ,ಬೆಂಗಳೂರು
3- ಅನಿರುದ್ಧ್ ಆರ್.ವಿ.ಪಿಯು ಕಾಲೇಜ್ ಬೆಂಗಳೂರು

ISMH ಕೋರ್ಸ್

ISMH ಕೋರ್ಸ್

1- ರಕ್ಷಿತಾ ರಮೇಶ್(ಚಿತ್ರದಲ್ಲಿ), ಭಗವಾನ್ ಮಹಾವೀರ್ ಜೈನ್ ಕಾಲೇಜ್ ಬೆಂಗಳೂರು.
2 - ವಿಕ್ಟರ್ ಥಾಮಸ್ , ವೈಷ್ನವಿ ಪಿಯು ಕಾಲೇಜ್ ದಾವಣಗೆರೆ
3- ನಾಸಿರ್ ಹುಸೇನ್ , ಇಂಡಿಪೆಂಡೆಂಟ್ ಪಿಯು ಕಾಲೇಜ್

Bsc ಕೋರ್ಸ್

Bsc ಕೋರ್ಸ್

1- ರಕ್ಷಿತಾ ರಮೇಶ್(ತಾಯಿ ಜತೆಗಿನ ಚಿತ್ರ), ಮಹಾವೀರ ಜೈನ್ ಕಾಲೇಜ್ ಬೆಂಗಳೂರು
2- ಸಂಕೀರ್ಥ ಸದಾನಂದ , ಡೆಲ್ಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು
3- ಅನನ್ಯಾ, ಮಹಾವೀರ್ ಜೈನ್ ಕಾಲೇಜ್ ಬೆಂಗಳೂರು

BparmaPHARMA ಕೋರ್ಸ್

BparmaPHARMA ಕೋರ್ಸ್

1- ಪ್ರತೀಕ್ ಎಸ್ ನಾಯಕ್, ಎಕ್ಸ್ ಪರ್ಟ್ ಪಿಯು ಕಾಲೇಜ್, ಮಂಗಳೂರು
2- ಸುಮನ್ ಆರ್ ಹೆಗಡೆ, ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜ್ ಬೆಂಗಳೂರು
3- ಧ್ರುವ ಶ್ರೀರಾಮ್, ದೀಕ್ಷಾ ಪಿಯು ಕಾಲೇಜ್ ಬೆಂಗಳೂರು.
****
BVS ಕೋರ್ಸ್
1- ವಿಕ್ಟೋರಿ ಥಾಮಸ್, ವೈಷ್ಣವಿ ಚೇತನ ಪಿಯು ಕಾಲೇಜ್ , ದಾವಣಗೆರೆ
2- ರಕ್ಷಿತಾ ರಮೇಶ್, ಮಹಾವೀರ್ ಜೈನ್ ಕಾಲೇಜ್ ,ಬೆಂಗಳೂರು
3- ಭರತ್ ಕುಮಾರ್, ಆಳ್ವಾಸ್ ಪಿಯು ಕಾಲೇಜ್ ಮಂಗಳೂರು

English summary
Karnataka CET 2017 results are out today(May 30). Prateek S Naik secured first rank in Engineering, Rakshitha Ramesh(Homeopathy). Here is list of all the toppers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X