ಇಂದಿನಿಂದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2 ಕಾರ್ಯಾರಂಭ

ಬೆಂಗಳೂರು, ಜ. 15: ಮಕರ ಸಂಕ್ರಾಂತಿಯ ಶುಭ ದಿನವಾದ ಭಾನುವಾರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಟರ್ಮಿನಲ್ 2 ರ ಕಾರ್ಯಾರಂಭವಾಗುತ್ತಿದೆ. ನೂತನ ಟರ್ಮಿನಲ್ 2 ರಿಂದ ಮೊದಲ ವಿಮಾನ ಕಲಬುರಗಿ ಕಡೆಗೆ ಹೊರಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ಅಧಿಕೃತ ಉದ್ಘಾಟನೆಯಾದ ಸುಮಾರು ಎರಡು ತಿಂಗಳ ನಂತರ, ಈ ಟರ್ಮಿನಲ್‌ಗಳಲ್ಲಿ ಕಾರ್ಯಾಚರಣೆಗಳು ಪ್ರಾರಂಭವಾಗುತ್ತಿವೆ. ಶೀಘ್ರದಲ್ಲೇ ಎಲ್ಲಾ ಸ್ಥಳಗಳಿಗೆ ದೇಶೀಯ ವಿಮಾನಗಳು ಟರ್ಮಿನಲ್ 2 ಮೂಲಕ ಹೊರಡಲಿವೆ.

ಕಳೆದ ವರ್ಷ ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಉದ್ಘಾಟಿಸಿದ್ದರು.

Terminal 2 at Bengaluru Airport to Begin Operational From Sunday

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಹರಿ ಮರಾರ್, ಮುಂದಿನ ಕೆಲವು ತಿಂಗಳುಗಳ ಅವಧಿಯಲ್ಲಿ ಪ್ರತಿ 15 ರಿಂದ 30 ದಿನಗಳಿಗೊಮ್ಮೆ ಟರ್ಮಿನಲ್ 2 ದಿಂದ ಒಂದು ವಿಮಾನಯಾನ ಕಾರ್ಯಾಚರಣೆಗೆ ಸಿದ್ಧಗೊಳಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

"ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ, ಟರ್ಮಿನಲ್ 2 ಗೆ ಸ್ಥಳಾಂತರಗೊಂಡ ಎಲ್ಲಾ ದೇಶೀಯ ವಿಮಾನಯಾನ ಸಂಸ್ಥೆಗಳನ್ನು ಕಾರ್ಯಗತಗೊಳಿಸುವ ಗುರಿಯನ್ನು ಹೊಂದಿದ್ದೇವೆ. ಮುಂದಿನ ಹಣಕಾಸು ವರ್ಷದ ಆರಂಭದ ವೇಳೆಗೆ, ನಾವು ಎಲ್ಲಾ ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳನ್ನು ಟರ್ಮಿನಲ್ 2ಗೆ ಸ್ಥಳಾಂತರಿಸುವ ಗುರಿಯನ್ನು ಹೊಂದಿದ್ದೇವೆ. ಈ ವರ್ಷದ ಮಧ್ಯದ ವೇಳೆಗೆ, ಹೊಸ ಟರ್ಮಿನಲ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಸಿಇಒ ಹರಿ ಮರಾರ್ ಹೇಳಿದ್ದಾರೆ.

Terminal 2 at Bengaluru Airport to Begin Operational From Sunday

2,55,000 ಚದರ ಮೀಟರ್‌ನ ಪ್ರದೇಶದಲ್ಲಿ ಇರುವ ಟರ್ಮಿನಲ್ 2ಗಾಗಿ 2018 ರಲ್ಲಿ ಯೋಜನೆ ಪ್ರಾರಂಭವಾಗಿತ್ತು. ಟರ್ಮಿನಲ್ 2 ರ ಹಂತ 1 ಅನ್ನು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 22 ಪ್ರವೇಶ ಮತ್ತು ನಿರ್ಗಮನ ಗೇಟ್‌ಗಳನ್ನು, ಒಂಬತ್ತು ಬ್ಯಾಗೇಜ್ ಕ್ಲೈಮ್ ಬೆಲ್ಟ್‌ಗಳನ್ನು ಹೊಂದಿದೆ. ಮಾರ್ಚ್ ಅಂತ್ಯದ ವೇಳೆಗೆ, ಬೆಂಗಳೂರು ವಿಮಾನ ನಿಲ್ದಾಣದ ಹೆಚ್ಚಿನ ದೇಶೀಯ ಕಾರ್ಯಾಚರಣೆಗಳು ಈ ಹೊಸ ಟರ್ಮಿನಲ್‌ನಿಂದ ನಡೆಯಲಿವೆ.

ಈಗಾಗಲೇ ಪ್ರಾರಂಭಿಸಲಾದ 'BLR ಮೆಟಾಪೋರ್ಟ್' ನೊಂದಿಗೆ ಪ್ರಯಾಣಿಕರಿಗೆ ಮೆಟಾವರ್ಸ್ ಅನುಭವವನ್ನು ನೀಡುವ ವಿಶ್ವದ ಮೊದಲ ಏರ್‌ಪೋರ್ಟ್ ಟರ್ಮಿನಲ್ ಇದಾಗಿದೆ. www.blrmetaport.com ಗೆ ಲಾಗಿನ್ ಮಾಡುವ ಮೂಲಕ ಪ್ರಯಾಣಿಕರು ಟರ್ಮಿನಲ್ ಮೂಲಕ ವಾಸ್ತವಿಕವಾಗಿ ನ್ಯಾವಿಗೇಟ್ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+