ಮಲ್ಲೇಶ್ವರದ ರಸ್ತೆಯಲ್ಲಿ ಹೊಸ ಟೆಂಡರ್ ಕಾಮಗಾರಿ ಆರಂಭ
ಬೆಂಗಳೂರು, ಜನವರಿ 10: ಬಿಬಿಎಂಪಿಯು ಮಲ್ಲೇಶ್ವರದಲ್ಲಿ ಹೊಸ ಟೆಂಡರ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದೆ. ಮಲ್ಲೇಶ್ವರದ ಮಾರ್ಗೋಸ ರಸ್ತೆ ಮತ್ತು ಕೆಜಿ ರಸ್ತೆಯನ್ನು ಅಭಿವೃದ್ಧಿಪಡಿಸುತ್ತಿದೆ. ಒಂದೆರೆಡು ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ.
ಮಲ್ಲೇಶ್ವರದ ಮಾರಮ್ಮ ದೇವಸ್ಥಾನದಿಂದ ಕೆಸಿ ಜನರಲ್ ಆಸ್ಪತ್ರೆವರೆಗಿನ 1685 ಮೀಟರ್ ಉದ್ದದ ರಸ್ತೆ ಮತ್ತು ಕೆಜಿ ರಸ್ತೆಯಲ್ಲಿ ಮೈಸೂರು ಬ್ಯಾಂಕ್ ವೃತ್ತದಿಂದ ಉಪ್ಪಾರಪೇಟೆ ಪೊಲೀಸ್ ಠಾಣೆವರೆಗೆ 865 ಮೀಟರ್ ಉದ್ದದ ರಸ್ತೆಯನ್ನು ಟೆಂಡರ್‌ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿಪಡಿಲಾಗುತ್ತಿದೆ.

ಕಾಮಗಾರಿ ಮುಗಿಯಲು ಒಂದು ವರ್ಷಗಳ ಗಡುವು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಒಎಫ್‌ಸಿ, ನೀರಿ, ಒಳಚರಂಡಿ ಪೈಪ್ ಸೇರಿ ಇನ್ನಿತರೆ ಸೇವಾಜಾಲಗಳ ಸ್ಥಳಾಂತರ ಆರಂಭಿಸಲಾಗುತ್ತದೆ. ಸೇವಾ ಜಾಲಗಳು ರಸ್ತೆ ನಡುವೆ ಹಾದು ಹೋಗಿದ್ದ ಸಂದರ್ಭದಲ್ಲಿ ಮಾತ್ರ ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಳಿಸಿ ಕಾಮಗಾರಿ ನಡೆಸಲಾಗುತ್ತದೆ.












Click it and Unblock the Notifications