ಗೊಟ್ಟಿಗೆರೆ-ನಾಗವಾರ ಮೆಟ್ರೋ ಸುರಂಗ ಮಾರ್ಗಕ್ಕೆ ಮತ್ತೆ ಟೆಂಡರ್
ಬೆಂಗಳೂರು, ಜೂನ್ 28: ನಮ್ಮ ಮೆಟ್ರೋ 13.ಕಿ.ಮೀ ಸುರಂಗ ಮಾರ್ಗ ಬದಲಿಸಿ 5 ಕಿ.ಮೀಗೆ ಇಳಿಕೆ ಮಾಡಲು ಚರ್ಚೆ ನಡೆದಿದೆ. ಮೆಟ್ರೋ ಎರಡನೇ ಹಂತದ ಗೊಟ್ಟಿಗೆರೆ -ನಾಗವಾರ ಯೋಜನೆಯ ಸುರಂಗ ಮಾರ್ಗಕ್ಕೆ ಟೆಂಡರ್ ಕರೆಯಲಾಗಿದೆ.
ಗೊಟ್ಟಿಗೆರೆ-ನಾಗವಾರ ಮಾರ್ಗ 21 ಕಿ.ಮೀ ವ್ಯಾಪ್ತಿಯದ್ದಾಗಿದೆ ಅದರಲ್ಲಿ 13 ಕಿ.ಮೀ ಸುರಂಗ ಮಾರ್ಗವಾಗಿತ್ತು. ಸುರಂಗದ ಉದ್ದವನ್ನು ಕಡಿಮೆ ಮಾಡಿ ಮರು ಟೆಂಡರ್ ಕರೆಯಲಾಗಿದೆ. ಒಂದು ವಾರದ ಹಿಂದಷ್ಟೆ ಮೊದಲ ಪ್ಯಾಕೇಜ್‌ನಲ್ಲಿ ವೆಲ್ಲಾರ ಜಂಕ್ಷನ್-ಶಿವಾಜಿನಗರ ಮಾರ್ಗಕ್ಕೆ ಟೆಂಡರ್ ಕರೆಯಲಾಗಿದೆ.
ಈಗ ಶಿವಾಜಿನಗರ-ಟ್ಯಾನರಿ ರಸ್ತೆ ನಡುವಿನ 2.88 ಕಿ.ಮೀ ಉದ್ದದ ಸುರಂಗ ಮಾರ್ಗಕ್ಕೆ ಎರಡನೇ ಪ್ಯಾಕೇಜಿನಲ್ಲಿ ಟೆಂಡರ್ ಆಹ್ವಾನಿಸಲಾಗಿದೆ. ಇದರಲ್ಲಿ ಕಂಟೋನ್ಮೆಂಟ್ ಹಾಗೂ ಪಾಟರಿ ಟೌನ್ ನಿಲ್ದಾಣಗಳು ನಿರ್ಮಾಣವಾಗಲಿದೆ. ವೆಂಕಟೇಶಪುರ, ಅರೇಬಿಕ್ ಕಾಲೇಜು, ನಾಗವಾರದವರೆಗೆ ಸುರಂಗ ಮಾಡಲು ತೀರ್ಮಾನಿಸಲಾಗಿತ್ತು.

ಈ ಮಾರ್ಗದಲ್ಲಿ ಎತ್ತರಿಸಿದ ಮಾರ್ಗ ನಿರ್ಮಿಸಬೇಕೆಂದು ಅಥವಾ ಇಲ್ಲಿಯೂ ಸುರಂಗ ನಿರ್ಮಿಸಬೇಕೆ ಎಂದು ಇನ್ನೂ ನಿರ್ಧರಿಸಿಲ್ಲ. ಯೋಜನೆ ರೂಪಿಸಿದಾಗ ಇದ್ದ 13ಕಿ.ಮೀ ಮಾರ್ಗಕ್ಕೆ ಟೆಂಡರ್ ಆಹ್ವಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈ ಹಿಂದೆ 13ಕಿ.ಮೀ ಸುರಂಗ ಕಾಮಗಾರಿಗೆ 2017ರ ಜುಲೈನಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. 5,047 ಕೋಟಿ ರೂ.ಗೆ ಟೆಂಡರ್ ಆಹ್ವಾನಿಸಲಾಗಿತ್ತು. ಇದೀಗ ಬದಲಿ ಮಾರ್ಗಕ್ಕೆ ಮತ್ತೆ ಟೆಂಡರ್ ಆಹ್ವಾನಿಸಲಾಗಿದೆ.











Click it and Unblock the Notifications