ಪಿಯುಸಿಯಲ್ಲಿ ಕಡಿಮೆ ಅಂಕ ಪಡೆದಿದ್ದಾರೆ ಎಂದು ಮನೆ ಬಾಡಿಗೆಗೆ ಕೊಡಲು ನಿರಾಕರಿಸಿದ ಮಾಲೀಕ: ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ
ಪಿಯುಸಿ ಅಂದ್ರೆ ವಿದ್ಯಾರ್ಥಿ ಜೀವನದ ಮುಖ್ಯ ಘಟ್ಟ ಎಂದು ಹೇಳ್ತಾರೆ, ಉತ್ತಮ ಅಂಕ ತೆಗೆದ್ರೆ ಮುಂದೆ ಒಳ್ಳೊಳ್ಳೆ ಕಾಲೇಜಲ್ಲಿ ಸೀಟು ಪಡೆಯೋದು, ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಘಟ್ಟ ಅಂತಲೇ ಪಿಯುಸಿ ಪರೀಕ್ಷೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತೆ. ಸಾಮಾನ್ಯವಾಗಿ ಉನ್ನತ ಶಿಕ್ಷಣಕ್ಕೆ ಸೀಟು ಪಡೆಯೋಕೆ, ಪಿಯುಸಿಯಲ್ಲಿ 90% ಗಿಂತ ಹೆಚ್ಚಿನ ಮಾರ್ಕ್ಸ್ ಬೇಕು, ಅದರೆ ಜೊತೆ ಇತರೆ ಪರೀಕ್ಷೆಗಳಲ್ಲೂ ರ್‍ಯಾಂಕ್ ಪಡೀಬೇಕು.
ಆದರೆ ಬೆಂಗಳೂರಿನ ಮನೆ ಮಾಲೀಕರೊಬ್ಬರು ಮಾತ್ರ ಬಾಡಿಗೆದಾರರಿಗೆ ಪಿಯುಸಿಯಲ್ಲಿ ಹೆಚ್ಚಿನ ಅಂಕ ಬಂದಿಲ್ಲ ಅಂತ ಬಾಡಿಗೆ ನೀಡಲು ನಿರಾಕರಿಸಿದ ವಿಚಿತ್ರ ಘಟನೆ ನಡೆದಿದೆ. ಇವತ್ತು ಬೆಂಗಳೂರಿನ ನಗರಗಳಲ್ಲಿ ಮನೆ, ಫ್ಲ್ಯಾಟ್ ಬಾಡಿಗೆಗೆ ಬೇಕಂದ್ರೆ ನೂರೆಂಟು ಕಂಡಿಷನ್‌ಗಳಿಗೆ ಒಪ್ಪಿಕೊಳ್ಳಬೇಕಾಗುತ್ತದೆ. ಅದರಲ್ಲೂ ಬ್ಯಾಚುಲರ್ಸ್‌ಗಳಿಗೆ ಬಾಡಿಗೆ ಕೊಡೋಕೆ ಮಾಲೀಕರು ಹಿಂದೇಟು ಹಾಕ್ತಾರೆ. ಹೀಗೆ ಸಿಲಿಕಾನ್ ಸಿಟಿಯಲ್ಲಿ ಮನೆ ಹುಡುಕಲು ಹೊರಟ ವ್ಯಕ್ತಿಗೆ ಪಿಯುಸಿಯಲ್ಲಿ ತೆಗೆದ ಅಂಕಗಳೇ ದೊಡ್ಡ ಸಮಸ್ಯೆಯಾಗಿದೆ.

ಟ್ವಿಟರ್ ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ಮನೆ ಹುಡುಕುವ ಸಂದರ್ಭದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಅಪಾರ್ಟ್‌ಮೆಂಟ್‌ಗಾಗಿ ಹುಡುಕುತ್ತಿರುವ ಸಂದರ್ಭದಲ್ಲಿ ಮೊದಲು ಬಾಡಿಗೆ ಕೊಡಲು ಒಪ್ಪಿಕೊಂಡ ಮಾಲೀಕರು, ನಂತರ ವ್ಯಕ್ತಿಯ ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ನೋಡಿ ಮನೆ ಕೊಡಲು ನಿರಾಕರಿಸಿದ್ದಾರೆ.
"Marks don't decide your future, but it definitely decides whether you get a flat in banglore or not" pic.twitter.com/L0a9Sjms6d
— Shubh (@kadaipaneeeer) April 27, 2023
ಅಷ್ಟಕ್ಕೂ ಆಗಿದ್ದೇನು ಗೊತ್ತಾ?
ಟ್ವಿಟರ್ ಬಳಕೆದಾರರು ಮಧ್ಯವರ್ತಿ ಜೊತೆಗಿನ ವ್ಯಾಟ್ಸಾಪ್ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಮೊದಲು ನಿಮ್ಮ ಅರ್ಜಿಯನ್ನು ಮನೆ ಮಾಲೀಕ ಸ್ವೀಕರಿಸಿದ್ದಾರೆ ಎಂದು ಮಧ್ಯವರ್ತಿ ಹೇಳಿದ್ದಾರೆ, ಆದರೆ ಬಾಡಿಗೆದಾರರ ಲಿಂಕ್ಡ್‌ಇನ್/ಟ್ವಿಟರ್ ಪ್ರೊಫೈಲ್, ಕಂಪನಿ ಸೇರಿರುವ ಅಪಾಯಿಂಟ್‌ಮೆಂಟ್ ಲೆಟರ್, 10 ಮತ್ತು 12ನೇ ತರಗತಿಯ ಅಂಕಪಟ್ಟಿಗಳನ್ನು ಪರಿಶೀಲನೆಗೆ ನೀಡುವಂತೆ ಕೇಳಿದ್ದಾರೆ. ಇದರ ಜೊತೆಗೆ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್‌ನಂತಹ ಇತರ ದಾಖಲೆಗಳನ್ನು ಪರಿಶೀಲಿಸಲು ಮಾಲೀಕರು ಬಯಸಿದ್ದಾರೆ ಎಂದು ಕೇಳಿದ್ದಾರೆ.
ಇದು ಇಷ್ಟಕ್ಕೇ ಮುಗಿಯುವುದಿಲ್ಲ ಬಾಡಿಗೆದಾರನು ತನ್ನ ಬಗ್ಗೆ 150 ರಿಂದ 200 ಪದಗಳಲ್ಲಿ ವಿವರವಾಗಿ ಬರೆದುಕೊಡಬೇಕು ಎಂದು ಮಾಲೀಕ ಕೇಳಿರುವುದಾಗಿ ಮಧ್ಯವರ್ತಿ ತಿಳಿಸಿದ್ದಾರೆ. ಬಾಡಿಗೆದಾರನು ಎಲ್ಲಾ ದಾಖಲೆಗಳ ಜೊತೆ ತನ್ನ ಬಗ್ಗೆ ಟಿಪ್ಪಣಿಯನ್ನು ಬರೆದು ಕಳಿಸಿ ಮಾಲೀಕರ ಪ್ರತಿಕ್ರಿಯೆಗೆ ಕಾಯುತ್ತಾರೆ.
ನಂತರ ಪ್ರತಿಕ್ರಿಯೆ ನೀಡಿರುವ ಮಧ್ಯವರ್ತಿ, ದ್ವಿತೀಯ ಪಿಯುಸಿಯಲ್ಲಿ ನೀವು 76% ರಷ್ಟು ಅಂಕಗಳನ್ನು ಪಡೆದುಕೊಂಡಿರುವುದಕ್ಕೆ ನಿಮಗೆ ಮನೆ ಬಾಡಿಗೆಗೆ ನೀಡಲು ಮಾಲೀಕರು ನಿರಾಕರಿಸಿದ್ದಾರೆ. 90% ಅಂಕಗಳನ್ನು ಪಡೆದಿದ್ದರೆ ಮಾತ್ರ ಮನೆ ಬಾಡಿಗೆ ನೀಡುವುದಾಗಿ ಮಾಲೀಕರು ಹೇಳಿದ್ದಾರೆ ಎಂದು ಮಧ್ಯವರ್ತಿ ಹೇಳಿದ್ದಾರೆ. ಮಧ್ಯವರ್ತಿಯ ಉತ್ತರ ಕಂಡಿ ಬಾಡಿಗೆದಾರ ಶಾಕ್‌ಗೆ ಒಳಗಾಗಿದ್ದಾರೆ.
ಬಾಡಿಗೆದಾರರ ಹೆಸರನ್ನು ಹಂಚಿಕೊಳ್ಳದಿದ್ದರೂ ಅವರ ಸೋದರಸಂಬಂಧಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅವರ ಸೋದರ ಸಂಬಂದಿ ಕೆನಡಾದಿಂದ ಭಾರತಕ್ಕೆ 6 ತಿಂಗಳ ಕೆಲಸಕ್ಕಾಗಿ ಬರುತ್ತಿದ್ದಾರೆ ಎಂದು ತಿಳಿದು ತಿಂಗಳಿಗೆ 80 ಸಾವಿರ ಬಾಡಿಗೆ ಕೇಳಿದ್ದರು ಎಂದು ಹೇಳಿದ್ದಾರೆ.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications