Bangalore Temperature : ಬೇಸಿಗೆಗೂ ಮುನ್ನವೇ ಬೆಂಗಳೂರಿನಲ್ಲಿ ಏರಿದ ತಾಪಮಾನ

ಬೆಂಗಳೂರಿನಲ್ಲಿ ಫೆಬ್ರವರಿ 20 ರವರೆಗೆ ಗರಿಷ್ಠ ತಾಪಮಾನವು ಸಾಮಾನ್ಯವಾಗಿರುತ್ತದೆ. "ಅಧಿಕೃತವಾಗಿ, ಬೇಸಿಗೆ ಮಾರ್ಚ್ 1 ರಂದು ಮಾತ್ರ ಪ್ರಾರಂಭವಾಗುತ್ತದೆ.

ಬೆಂಗಳೂರು, ಫೆಬವರಿ 10: ಅವಧಿಗೂ ಮುನ್ನವೇ ಬೆಂಗಳೂರಿನಲ್ಲಿ ತಾಪಮಾನ ಏರಿಕೆಯಾಗಿದ್ದು, ಬಿಸಿಲ ಬೇಗ ತಟ್ಟುತ್ತಿದೆ. ಫೆಬ್ರವರಿಯಿಂದ ಬೆಂಗಳೂರಿನಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು, ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ಡಿಎಚ್‌ ವರದಿ ಮಾಡಿದೆ.

ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥ ಎ ಪ್ರಸಾದ್ ಪ್ರಕಾರ, ಫೆಬ್ರವರಿ 20 ರವರೆಗೆ ಗರಿಷ್ಠ ತಾಪಮಾನವು ಸಾಮಾನ್ಯವಾಗಿರುತ್ತದೆ. "ಅಧಿಕೃತವಾಗಿ, ಬೇಸಿಗೆ ಮಾರ್ಚ್ 1 ರಂದು ಮಾತ್ರ ಪ್ರಾರಂಭವಾಗುತ್ತದೆ. ಆದರೆ ಅದರ ಪರಿಣಾಮವು ಫೆಬ್ರವರಿಯ ಕೊನೆಯ ವಾರ ಅಥವಾ ಕೊನೆಯ 10 ದಿನಗಳಲ್ಲಿ ಕಂಡುಬರಬಹುದು ಎಂದು ಅವರು ತಿಳಿಸಿದ್ದಾರೆ.

ಜಾಗತಿಕ ತಾಪಮಾನ ಏರಿಕೆಯೊಂದಿಗೆ ನಾವು ಹೆಚ್ಚು ಏರಿಳಿತಗಳನ್ನು ನೋಡುತ್ತಿದ್ದೇವೆ. ಉದಾಹರಣೆಗೆ, ಕಳೆದ ಡಿಸೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಚಳಿ ಇತ್ತು. ಫೆಬ್ರವರಿ ಅಂತ್ಯದ ವೇಳೆಗೆ, ಗರಿಷ್ಠ ತಾಪಮಾನವು 33 ಡಿಗ್ರಿಗಳಿಗೆ ಹೋಗಬಹುದು, ಆದರೆ ಅದಕ್ಕಿಂತ ಹೆಚ್ಚಾಗಲ್ಲ. ಈಗಿನಂತೆ, ಫೆಬ್ರವರಿ ತಾಪಮಾನವು ಸಾಮಾನ್ಯಕ್ಕೆ ಹತ್ತಿರದಲ್ಲಿದೆ, ಅಂದರೆ, 1991 ರಿಂದ 2020 ರವರೆಗಿನ 30 ವರ್ಷಗಳ ಸರಾಸರಿ ಇದಾಗಿದೆ ಎಂದು ಅವರು ಹೇಳಿದರು.

Temperature rises in bengaluru before summer

ಫೆಬ್ರವರಿಯಲ್ಲಿ ಸಾಮಾನ್ಯ ಗರಿಷ್ಠ ತಾಪಮಾನವು 30.9 ಡಿಗ್ರಿ ಸೆಲ್ಸಿಯಸ್ ಆಗಿದೆ. ಪ್ರಸ್ತುತ ಉಷ್ಣತೆ ಸುಮಾರು 31 ಡಿಗ್ರಿಗಳಷ್ಟು ಹತ್ತಿರದಲ್ಲಿದೆ. ಕನಿಷ್ಠ ತಾಪಮಾನವು ಈಗ 17 ರಿಂದ 18 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕಂಡು ಬರುತ್ತಿದೆ ಎಂದು ಅವರು ಹೇಳಿದರು.

Temperature rises in bengaluru before summer

ಜನವರಿಯಲ್ಲಿ ನಗರವು ಹೆಚ್ಚಿನ ಏರಿಳಿತಗಳನ್ನು ಕಂಡಿಲ್ಲ. ಆದರೆ, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಶೀತಗಾಳಿ ಎಚ್ಚರಿಕೆ ನೀಡಲಾಗಿದೆ. ಮಾರ್ಚ್‌ನಲ್ಲಿ, ಸಾಮಾನ್ಯ ಗರಿಷ್ಠ ತಾಪಮಾನವು 33.4 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಈ ವರ್ಷ ಅಸಹಜ ಹೆಚ್ಚಳವನ್ನು ಹವಾಮಾನ ಇಲಾಖೆ ನಿರೀಕ್ಷಿಸುತ್ತಿಲ್ಲ. ಬೆಂಗಳೂರಿನಲ್ಲಿ ಮಾರ್ಚ್‌ನಲ್ಲಿ 1996 ರಲ್ಲಿ ಗರಿಷ್ಠ ತಾಪಮಾನವು 37.3 ಡಿಗ್ರಿ ಆಗಿತ್ತು. ಗರಿಷ್ಠ ತಾಪಮಾನವು ಈ ಮೌಲ್ಯಕ್ಕಿಂತ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು, ಆದರೆ ಹೆಚ್ಚು ಆಗಲ್ಲ ಎಂದು ಪ್ರಸಾದ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+