ಟಾಲಿವುಡ್ ನಟಿಯರ ಅಶ್ಲೀಲ ಚಿತ್ರ ಹಂಚುತ್ತಿದ್ದವ ಬೆಂಗ್ಳೂರಲ್ಲಿ ಬಂಧನ
ಬೆಂಗಳೂರು, ಅಕ್ಟೋಬರ್ 09: ಟಾಲಿವುಡ್ ನಟಿಯರ ಅಶ್ಲೀಲ ಚಿತ್ರ ಹಂಚುತ್ತಿದ್ದ 24 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ತೆಲಂಗಾಣ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ದಾಸರಿ ಪ್ರದೀಪ್ ಎಂದು ಗುರುತಿಸಲಾಗಿದ್ದು, ಬಿ.ಕಾಂ ಪದವಿಧರನಾಗಿದ್ದು, ನಟಿಯರ ಚಿತ್ರಗಳನ್ನು ಅಶ್ಲೀಲವಾಗಿ ವೆಬ್ ಸೈಟ್ ಗಳಲ್ಲಿ ಅಪ್ಲೋಡ್ ಮಾಡುವುದನ್ನು ಉದ್ಯೋಗ ಮಾಡಿಕೊಂಡಿದ್ದ.

ಈತನ ವಿರುದ್ಧ ಟಾಲಿವುಡ್ ನ ಟಾಪ್ ನಟಿಯರು ಮೂವಿ ಆರ್ಟಿಸ್ಟ್ ಅಸೋಸಿಯೇಷನ್(MAA) ಗೆ ದೂರು ನೀಡಿದ್ದರು. ಈ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರ ನೆರವಿನಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಿಐಡಿ ಪೊಲೀಸರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಉದ್ಯೋಗ ನಿರತನಾಗಿದ್ದ ಪ್ರದೀಪ್, ಕೋರಮಂಗಲದ ಪಿಜಿಯೊಂದರಲ್ಲಿ ವಾಸವಾಗಿದ್ದಾನೆ. ಈ ಚಿತ್ರಗಳನ್ನು ಹಂಚುವ ಮೂಲಕ ಹಣ ಗಳಿಸುತ್ತಿದ್ದ. ಸದ್ಯಕ್ಕೆ ಮೂರು ವೆಬ್ ಸೈಟ್ ಗಳಿಗೆ ಈ ರೀತಿ ಚಿತ್ರ ಅಪ್ಲೋಡ್ ಮಾಡುವುದು ಪತ್ತೆಯಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವೆಬ್ ಸೈಟ್ ಗಳ ನಿರ್ವಹಣೆ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67 ಹಾಗೂ 67 ಎ ಅನ್ವಯ ಪ್ರದೀಪ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.












Click it and Unblock the Notifications