ಪ್ರೇಯಸಿ ಅಡುಗೆ ಮಾಡು ಎಂದಿದ್ದಕ್ಕೆ ಕತ್ತು ಹಿಸುಕಿ ಕೊಲೆಗೆ ಮುಂದಾಗಿದ್ದ ಟೆಕ್ಕಿ

ಬೆಂಗಳೂರು, ಜೂನ್ 26: ಪ್ರೇಯಸಿ ಅಡುಗೆ ಮಾಡು ಎಂದಿದ್ದಕ್ಕೆ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಲು ಟೆಕ್ಕಿ ಮುಂದಾಗಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇಬ್ಬರು ಟೆಕ್ಕಿಗಳು ಕಳೆದ ಕೆಲ ವರ್ಷಗಳಿಂದ ಲಿವಿ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಅಂದು ಮಹಿಳಾ ಟೆಕ್ಕಿ ಇವತ್ತು ಯಾಕೋ ಕೆಲಸ ಮಾಡಲು ಮನಸ್ಸಾಗುತ್ತಿಲ್ಲ ನೀನು ಅಡುಗೆ ಮಾಡ್ತೀಯ ಎಂದು ಕೇಳಿದ್ದೇ ತಡ ಅಷ್ಟಕ್ಕೇ ಜಗಳ ಆರಂಭಿಸಿದ ಕಾರ್ತಿಕ್ ಆಕೆಯ ಕತ್ತು ಹಿಸುಕಿ ಕೊಲೆ ಮಾಡಲು ಮುಂದಾಗಿದ್ದ.

ಅವರಿಬ್ಬರು ಖಾಸಗಿ ಕಂಪನಿಯಲ್ಲಿ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಮಾರತ್ತಹಳ್ಳಿ ಬಳಿಕ ಹೊಂಗಸಂದ್ರದಲ್ಲಿ ಇಬ್ಬರು ವಾಸವಿದ್ದಾರೆ. ನಾನು ಹೊರಗಡೆಯಿಂದ ಅಡುಗೆಗೆ ಬೇಕಾಗುವ ಪದಾರ್ಥಗಳನ್ನು ತರುತ್ತೇನೆ ಅಷ್ಟರೊಳಗೆ ನೀನು ಅಡುಗೆ ಮಾಡುತ್ತೀಯ ಎಂದು ಕೇಳಿದ್ದಾಳೆ,.

Techie tries to kill his girl friend for asking to prepare food for her

ಆ ಕೆಲಸ ನನ್ನದಲ್ಲ ನೀನೇ ಮಾಡು ಎಂದು ಹೇಳಿದಾಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಗೋಡೆಗೆ ಆಕೆಯನ್ನು ನೂಗಿ ಕತ್ತನ್ನು ಬಿಗಿಯಾಗಿ ಹಿಡಿದಿದ್ದ ಎಷ್ಟೇ ಪ್ರಯತ್ನ ಪಟ್ಟರೂ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ ಹೇಗೋ ತಪ್ಪಿಸಿಕೊಂಡು ರೂಮಿನೊಳಗೆ ಹೋಗಿ ಬಾಗಿಲು ಹಾಕಿಕೊಂಡು ಪೊಲೀಸರಿಗೆ ಕರೆ ಮಾಡಿದೆ, ಆತನ ಬಗ್ಗೆ ಹೆಚ್ಚು ಮಾತನಾಡಲು ಇಷ್ಟ ಪಡುವುದಿಲ್ಲ ನೋವಾಗುತ್ತದೆ ಎಂದು ಮಹಿಳಾ ಟೆಕ್ಕಿ ತಿಳಿಸಿದ್ದಾರೆ. ಬೊಮ್ಮನಹಳ್ಳಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+